Advertisement
“ರಸಭಾವ ರಾಗ ತಾಳದಲೊಸುರುವ ಗಾಯನ ವಿಧಾನ ನಾಟ್ಯ ವಿಶೇಷಂ
ರಸೆಯೊಳನನ್ಯಂ ಸಂಸ್ಕೃತಿ
ವಿಸರಂ ತಾನೆನಿಪ ಯಕ್ಷಗಾನಂ ಮಧುರಂ’
ಕರಾವಳಿಯ ಜನರಲ್ಲಂತೂ ಈ ಮನಸು ಇಲ್ಲವೇ ಇಲ್ಲ. ಇಂದಿನ ಸಾಮಾಜಿಕ ಜಾಲತಾಣಗಳ ಅಬ್ಬರ, ಅರ್ಭಟ, ದೂರದರ್ಶನ, ಸಿನಿಮಾ ಮುಂತಾದ ಮನೋರಂಜನೆಯ ಮಾಧ್ಯಮಗಳ ನಡುವೆ ಎಂಟೆದೆಯ ಬಂಟನಂತೆ ರಾರಾಜಿಸುತ್ತ ಮುಂದಿನ ಶತಮಾನಗಳಾಚೆಯ ತನಕ ತನ್ನ ಸಮೃದ್ಧ ಅಸ್ತಿತ್ವದೊಂದಿಗೆ ಒಂದು ಜಾನಪದ ಕಲೆ ಜಗತ್ತಿನಾದ್ಯಂತ ತನ್ನ ಜಾಪಿನೊಂದಿಗೆ ಚಾಪು ಒತ್ತಿ ಬದುಕುತ್ತದೆ ಎಂದಾದರೆ ಅದು ಯಕ್ಷಗಾನ ಮಾತ್ರ ಎನ್ನುವುದು ಸತ್ಯಕ್ಕೆ ಹಿಡಿದ ಕೈಗನ್ನಡಿ. ಇವತ್ತು ಯಾವುದೇ ಮನೋರಂಜನೆಯನ್ನು ಕಂಡರೂ ಅಲ್ಲೊಂದು ಪರಿಶುದ್ಧ ಭಾಷೆಯ ಕೊರತೆ ನಮ್ಮನ್ನು ಕಾಡುವುದು. ಆದರೆ ಯಕ್ಷಗಾನ ಮನೋರಂಜನೆಯ ಮೂಲಕ ಮನರಮಿಸುತ್ತ ಧಾರ್ಮಿಕ ನೆಲೆಗಟ್ಟನ್ನು ಭದ್ರಪಡಿಸುತ್ತ, ಭಾಷೆಯ ಶ್ರೀಮಂತಿಕೆಯೊಂದಿಗೆ ನಮ್ಮ ಸಂಸ್ಕೃತಿಯನ್ನು ಬೆಳೆಸುತ್ತದೆ ಎನ್ನುವುದೂ ಅಷ್ಟೇ ಸತ್ಯ. ಯಕ್ಷಗಾನ ಜಾನಪದ ಕಲೆಯಾಗಿದ್ದುಕೊಂಡು ಕರಾವಳಿಯ ಪವಿತ್ರ ಸ್ಥಳಗಳ ಪಾವಿತ್ರÂತೆಯನ್ನು ಜಗತ್ತಿಗೆ ಅರುಹಲು ಒಂದು ಮಾಧ್ಯಮವಾಗಿ ಕಾರ್ಯಪ್ರವೃತ್ತವಾಗಿದೆ ಎಂದೆನ್ನುವಾಗ ಮನವುಕ್ಕಿ ಬರುತ್ತದೆ. ಈ ಪರಿಶುದ್ಧ ಪಾವಿತ್ರÂತೆಯ ಕಲೆಯನ್ನು ಕಟ್ಟಿ ಬೆಳೆಸುವಲ್ಲಿ ಅದೆಷ್ಟೋ ಜೀವಗಳು ತಮ್ಮ ಬದುಕನ್ನು ಮುಡಿಪಾಗಿಟ್ಟು ಕಲೆಗಾಗಿಯೇ ಉಸಿರನ್ನು ಬಿಗಿಹಿಡಿದ ಕಲಾವಿದರು ನಮ್ಮ ನಿಮ್ಮ ನಡುವೆ ಬೇಕಾದಷ್ಟಿದ್ದರು…ಇದ್ದಾರೆ.
Related Articles
Advertisement
ತನ್ನ ಬದುಕು ಕೇವಲ ಕಲೆಗಾಗಿ ಎನ್ನುವಷ್ಟರ ಮಟ್ಟಿಗೆ ಕಲೆಯೊಳಗೊಂದಾದ ಪೊಲ್ಯರನ್ನು ಅರಸಿಕೊಂಡು ಬಂದ ಪ್ರಶಸ್ತಿಗಳು ಸಾಲುಸಾಲು. ಪ್ರತಿಷ್ಠಿತ ಪ್ರಶಸ್ತಿಗಳಲ್ಲದೆ 250 ಕ್ಕೂ ಅಧಿಕ ಸಂಘ-ಸಂಸ್ಥೆಗಳು ಗೌರವಿಸಿವೆ. ಕಲಾರಸಿಕರು ಅದ್ಯಾವ ಪರಿಯಲ್ಲಿ ಪೊಲ್ಯರನ್ನು ಗೌರವಿಸುತ್ತಾರೆ, ಅಭಿಮಾನಪಡುತ್ತಾರೆ ಎನ್ನುವುದಕ್ಕೆ ಈ ಪ್ರಶಸ್ತಿಗಳೇ ಸಾಕ್ಷಿ. ಕಲೆಯನ್ನೇ ಜೀವವಾಗಿರಿಸಿಕೊಂಡಿರುವ ಪೊಲ್ಯರನ್ನು ಅರಸಿಕೊಂಡು ಇದೀಗ ಯಕ್ಷ ಧ್ರುವ ಪಟ್ಲ ಫೌಂಡೇಶನ್, ಟ್ರಸ್ಟ್ ಮುಂಬಯಿ ಘಟಕದ ವತಿಯಿಂದ ಪ್ರತಿಷ್ಠಿತ ಯಕ್ಷಧ್ರುವ ಪ್ರಶಸ್ತಿ ದೊರೆಯುತ್ತಿರುವುದು ಅಭಿಮಾನದ ಸಂಗತಿ.
ಅಶಕ್ತ ಕಲಾವಿದರ ಬದುಕಿಗೆ ಬೆಳಕಾಗಿ ಬಂದಿರುವ ಯಕ್ಷಗಾನ ಭಾಗವತಿಕೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಪಟ್ಲ ಸತೀಶ್ ಶೆಟ್ಟಿ ಅವರ ಕನಸಿನ ಕೂಸು ಯಕ್ಷಧ್ರುವ ಪಟ್ಲ ಫೌಂಡೇಶನ್. ತನ್ಮೂಲಕ ಅನೇಕ ಕಲಾವಿದರ ಆಶಾಕಿರಣವಾಗಿ ಈ ಸಂಸ್ಥೆ ಮೂಡಿ ಬರುತ್ತಿರುವುದು ಆಶಾದಾಯಕ ಬೆಳವಣಿಗೆ. ಈ ಟ್ರಸ್ಟ್‌ನ ವತಿಯಿಂದ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದ್ದು ಇಂದು ನಡೆಯಲಿರುವ ಪಟ್ಲ ಸಂಭ್ರಮದಲ್ಲಿ ಪೊಲ್ಯ ಲಕ್ಷಿ$¾àನಾರಾಯಣ ಶೆಟ್ಟಿ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರೆಯುತ್ತಿರುವುದು ಶ್ಲಾಘನೀಯ ಅಂಶ. ಯಾವುದೇ ಪ್ರಶಸ್ತಿ ಸಮ್ಮಾನಗಳು ಅವರನ್ನು ಅರಸಿಬಂದರೂ ಅವರ ನುಡಿ ಮತ್ತು ನಡತೆ, ನಮೃತೆ, ವಿನಯತೆಯಿಂದ ಶೋಭಿಸುತ್ತಿರುವ ಅವರು ನಿಜವಾಗಿಯೂ ಮುಂಬಯಿ ತುಳು-ಕನ್ನಡಿಗರ ಹೆಮ್ಮೆ.ಪೊಲ್ಯರು ಶಿವರಾಮ ಕಾರಂತರೊಂದಿಗಿನ ಒಡನಾಟ, ಅವರ ಶಿಸ್ತುಬದ್ಧ ತರಬೇತಿಯಿಂದಾಗಿ ನಾನಿವತ್ತು ಈ ಪರಿ ಬೆಳೆಯಲು ಕಾರಣ ಎಂದು ವಿನಮ್ರವಾಗಿ ಸ್ಮರಿಸುತ್ತಾರೆ. ಹಾಗೆಯೇ ವಿದ್ವಾನ್ ದಾಮೋದರ್ ಮಂಡೆಚ್ಚರವರು ತೆಂಕುತಿಟ್ಟಿನಲ್ಲಿ ನನ್ನ ಬೆಳೆವಣಿಗೆಗೆ ಕಾರಣಕರ್ತರು. ಜಾಗತಿಕರಣದ ಈ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣಗಳು, ಅಸಂಮಂಜಸ ಮನೋರಂಜನ ಕಾರ್ಯಕ್ರಮಗಳು ಕಲೆ ಮತ್ತು ಮನುಷ್ಯ ಸಂಬಂಧಗಳ ನಡುವಿನ ಕೊಂಡಿಯನ್ನು ಕಳಚುತ್ತಿವೆ ಎಂಬ ನೋವು ಪೊಲ್ಯರನ್ನು ಅಗಾಧವಾಗಿ ಕಾಡುತ್ತಿವೆ. ಸಾಂಸ್ಕೃತಿಕ ನೆಲೆಗಟ್ಟನ್ನು ಭದ್ರಗೊಳಿಸಲು ಜಾಗತಿಕ ನೆಲೆಯಲ್ಲಿ ಕಲೆಯನ್ನು ಬೆಳೆಸಬೇಕಾದಲ್ಲಿ ಯಕ್ಷಗಾನದ ಉಳಿವಿಗೆ ಯುವಜನಾಂಗ ಶ್ರಮಪಟ್ಟಲ್ಲಿ ಮಾತ್ರ ಕಲೆಯ ಮೆರುಗು ಮತ್ತು ಕಲೆಯ ಜೀವಂತಿಕೆ ಹೆಚ್ಚಬಹುದು ಎಂದು ಅವರು ಅಭಿಪ್ರಾಯಪಡುತ್ತಾರೆ. ಮುಂದಿನ ದಿನಗಳಲ್ಲಿ ಈ ಕಲೆ ಶತಮಾನದಾಚೆಗೂ ಉಳಿಯಲಿ. ಈ ಕಲೆಯಿಂದಾಗಿ ಭಾಷೆ ಹಾಗೂ ಸಾಂಸ್ಕೃತಿಕ ರಂಗ ಬೆಳೆಯಲಿ ಎಂಬುದೇ ಅವರ ಕಳಕಳಿ. ಇಲ್ಲಿ ಅವರಿಗೆ ಕಲೆಯ ಬಗೆಗಿನ ಕಾಳಜಿ ಎದ್ದು ಕಾಣುತ್ತದೆ. ಆದರದಿಂದ ಹಾಡಿ, ಆಡಿ ತೋರಿಸುವ, ಆದರದಿಂದ ಕೇಳಿ ನೋಡಿ ಆನಂದಿಸುವ ಒಂದು ದಿವ್ಯ ಕಲೆ ಯಕ್ಷಗಾನ. ಈ ಕಲೆಯನ್ನೇ ಉಸಿರಾಗಿಸಿಕೊಂಡಿರುವ ಹೆಮ್ಮೆಯ ಕಲಾವಿದ ನಾದಲೋಲ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಅವರನ್ನು ಇಂತಹ ಅನೇಕ ಪ್ರಶಸ್ತಿಗಳು ಅರಸಿಕೊಂಡು ಬರಲಿ. ಭಗವಂತನು ಇವರಿಗೆ ನೂರ್ಕಾಲ ಆಯುರಾರೋಗ್ಯಭಾಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತಾ ಸಮಸ್ತ ತುಳು-ಕನ್ನಡಿಗರ ಪರವಾಗಿ ಅಭಿನಂದನೆಗಳು. ಪೇತ್ರಿ ವಿಶ್ವನಾಥ ಶೆಟ್ಟಿ