Advertisement

ತಂದೆ ಪಾಟೀಲರ ಕಾರ್ಯಕ್ಕೆ ಪುತ್ರನ ಮೆಚ್ಚುಗೆ

03:35 PM Mar 15, 2017 | Team Udayavani |

ಚಿಂಚೋಳಿ: ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಪ್ರಾಮಾಣಿಕ ರಾಜಕಾರಣಿಗಳಿಗೆ ಅವಕಾಶ ಸಿಗುವುದು ಅತಿ ಕಡಿಮೆಯಾಗಿದೆ. ಚುನಾವಣೆಯಲ್ಲಿ ಹಣದ ಹಾವಳಿಯಿಂದ ಪ್ರಾಮಾಣಿಕರಿಗೆ ದೇಶ, ಸಮಾಜ ಸೇವೆ ಕೈಗೊಳ್ಳಲು ಅವಕಾಶಗಳು ಸಿಗುತ್ತಿಲ್ಲವೆಂದು ಮಾಜಿ ಶಾಸಕ ಕೈಲಾಶನಾಥ ಪಾಟೀಲ ವಿಷಾದ ವ್ಯಕ್ತಪಡಿಸಿದರು. 

Advertisement

ಪಟ್ಟಣದ ವಿರೇಂದ್ರ ಪಾಟೀಲ ಆಂಗ್ಲ ಮಾಧ್ಯಮ ಪಬ್ಲಿಕ್‌ ಶಾಲೆಯಲ್ಲಿ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ದಿ| ವಿರೇಂದ್ರ ಪಾಟೀಲರ 20ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ನೋಟು ಬದಲಾವಣೆ ಮಾಡಿದರೂ ಲಂಚತನ ಸಂಪೂರ್ಣ ಕೊನೆಗೊಂಡಿಲ್ಲ.

ನನ್ನ ತಂದೆ ದಕ್ಷ ಮತ್ತು ಪ್ರಮಾಣಿಕ ರಾಜಕಾರಣಿಯಾಗಿ ರಾಜ್ಯದಲ್ಲಿ ಒಳ್ಳೆಯಆಡಳಿತ ನೀಡಿದ್ದಾರೆ. ಅವರು ಮಾಡಿದ ಅಭಿವೃದ್ಧಿ ಕೆಲಸ ಕಾರ್ಯಗಳ ಮೇಲೆ ನಾನು ಸಹಾ ಚಿಂಚೋಳಿ ಶಾಸಕನಾಗಿ ಆಯ್ಕೆಗೊಂಡಿದ್ದೆ ಎಂದರು. ಆಗಿನ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ನೇತೃತ್ವ ಸರಕಾರದಿಂದ ತಾಲೂಕಿನ ಅಭಿವೃದ್ಧಿಗೆ ಕೇವಲ ಐದೇ ವರ್ಷದಲ್ಲಿ 150 ಕೋಟಿ ರೂ. ಖರ್ಚು ಮಾಡಿದ್ದೇನೆ.

ಈಗಿನ ಶಾಸಕ ಡಾ| ಉಮೇಶ ಜಾಧವ್‌‌ ಕಳೆದನಾಲ್ಕು ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ 650 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ಶ್ಲಾಘಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಸದೀಯ ಕಾರ್ಯದರ್ಶಿ ಡಾ|ಉಮೇಶ ಜಾಧವ್‌ ಮಾತನಾಡಿ, ಮಾಜಿ ಮುಖ್ಯಮಂತ್ರಿ ದಿ| ವೀರೇಂದ್ರ ಪಾಟೀಲ ಆದರ್ಶ, ದಕ್ಷ, ಪ್ರಮಾಣಿಕ ರಾಜಕಾರಣಿ.

ಅವರು ಮಾಡಿದ ಅಭಿವೃದ್ಧಿಕೆಲಸಗಳು ಶಾಶ್ವತವಾಗಿವೆ ಎಂದರು. ಮಾಜಿ ಸಂಸದ ಡಾ| ಬಿ.ಜಿ. ಜವಳಿ ಮಾತನಾಡಿ, ವೀರೇಂದ್ರ ಪಾಟೀಲ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದರು. ಮಾಜಿ ಶಾಸಕ ಎಂ. ವೀರಯ್ಯ ಸ್ವಾಮಿ, ಬಸಯ್ಯ ಗುತ್ತೇದಾರ, ವೀರಶೆಟ್ಟಿ ಇಮಡಾಪುರ ಮಾತನಾಡಿದರು. 

Advertisement

ಶಿವಶಂಕಯ್ಯ ಸ್ವಾಮಿ ಕುಪನೂರ, ಜಿಪಂ ಮಾಜಿ ಅಧ್ಯಕ್ಷ ದೀಪಕನಾಗ ಪುಣ್ಯಶೆಟ್ಟಿ, ಮಹೆಮೂದ ಪಟೇಲ ಸಾಸರಗಾಂವ, ಮಾಣಿಕರಾವ ಪಾಟೀಲ ಇದ್ದರು. ಬಸವರಾಜ ಮಲಿ ಸ್ವಾಗತಿಸಿದರು. ವೀರಶೆಟ್ಟಿ ಸಜ್ಜನಶೆಟ್ಟಿ ವಂದಿಸಿದರು. 

ಪುಷ್ಪನಮನ: ಮಾಜಿ ಮುಖ್ಯಮಂತ್ರಿ ದಿ| ವೀರೇಂದ್ರ ಪಾಟೀಲ ಅವರ 20ನೇ ಪುಣ್ಯಸ್ಮರಣೆ ನಿಮಿತ್ತ ಕಾಂಗ್ರೆಸ್‌ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಅವರ ಸಮಾಧಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಪುತ್ರ ಕೈಲಾಶನಾಥ ಪಾಟೀಲ, ಸೊಸೆ ಭವಾನಿ ಪಾಟೀಲ, ವೀರೇಂದ್ರ ಪಾಟೀಲರ ಪತ್ನಿ ಶಾರದಾಬಾಯಿ ಪಾಟೀಲ, ಮಗಳು ಲಲಿತಾ ಜವಳಿ,

ಶಾಸಕ ಡಾ| ಉಮೇಶ ಜಾಧವ್‌, ಮಾಜಿ ಶಾಸಕ ಎಂ. ವೀರಯ್ಯ ಸ್ವಾಮಿ, ಮಾಜಿ ಸಂಸದ ಡಾ| ಬಿ.ಜಿ. ಜವಳಿ, ಜಿಪಂ ಮಾಜಿ ಅಧ್ಯಕ್ಷ ದೀಪಕನಾಗ ಪುಣ್ಯಶೆಟ್ಟಿ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ  ಜಗದೀಶಸಿಂಗ ಠಾಕೂರ, ಬ್ಲಾಕ್‌ ಕಾಂಗ್ರೆಸ್‌ ಕಮಿಟಿಅಧ್ಯಕ್ಷ ಅನೀಲಕುಮಾರ ಜಮಾದಾರ, ಪುರಸಭೆ ಸದಸ್ಯರು, ತಾಪಂ ಸದಸ್ಯರು ಹಾಗೂ ಮತ್ತಿತರರು ಈ ಸಂದರ್ಭದಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next