Advertisement
ನಗರದ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ಬೆಳಗ್ಗೆ ಒಪಿಡಿಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ಒದಗಿಸಲಾಯಿತು. ಕುಂಟಿಕಾನದ ಎ.ಜೆ. ಆಸ್ಪತ್ರೆಯಲ್ಲಿ ಬೆಳಗ್ಗೆ ಒಪಿಡಿ ವಿಭಾಗ ತೆರೆದಿದ್ದರೆ, ಬಳಿಕ ಪ್ರತಿಭಟನೆ ಹಿನ್ನೆಲೆಯಲ್ಲಿ ಹೊರ ರೋಗಿ ವಿಭಾಗ ಕಾರ್ಯಾಚರಿಸುವುದಿಲ್ಲ ಎಂದು ನೊಟೀಸ್ ಬೋರ್ಡ್‌ನಲ್ಲಿ ಪ್ರಕಟಿಸಲಾಗಿತ್ತು. ಆದರೆ ತುರ್ತು ಚಿಕಿತ್ಸೆ ಲಭ್ಯವಿತ್ತು. ಕೆಎಂಸಿ ಆಸ್ಪತ್ರೆಯಲ್ಲಿ ಎಲ್ಲ ಸೇವೆ ಲಭ್ಯವಿತ್ತು. ಹೊರ ರೋಗಿ ವಿಭಾಗ ಕಾರ್ಯಾಚರಿಸುತ್ತಿದ್ದರೂ ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕದ ಸಭೆ ಇದ್ದ ಹಿನ್ನೆಲೆಯಲ್ಲಿ, ಕೆಲವು ವೈದ್ಯರು ಅಲಭ್ಯ ರಾಗಿದ್ದರು. ಆದರೆ ರೋಗಿಗಳಿಗೆ ಯಾವುದೇ ಸಮಸ್ಯೆ ಉಂಟಾಗಲಿಲ್ಲ. ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿಯೂ ಎಲ್ಲ ವಿಭಾಗಗಳು ಕಾರ್ಯಾಚರಿಸಿದ್ದವು.
ಈ ನಡುವೆ, ಕೇಂದ್ರ ಸರಕಾರದ ಎನ್‌ಎಂಸಿ ಕಾಯ್ದೆಯನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕದ ವತಿಯಿಂದ ಐಎಂಎ ಸಭಾಂಗಣದಲ್ಲಿ ಖಾಸಗಿ ವೈದ್ಯರು ಸಾಂಕೇತಿಕ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದರು. ಕೇಂದ್ರ ಸರಕಾರವು ರಾಷ್ಟ್ರೀಯ ವೈದ್ಯಕೀಯ ಆಯೋಗದ ಶಿಫಾರಸಿನ ಮೇರೆಗೆ ಜಾರಿಗೆ ತರಲು ಉದ್ದೇಶಿಸಿರುವ ಮಸೂದೆ ಅಸಾಂವಿಧಾನಿಕವಾಗಿದೆ. ಸಾರ್ವಜನಿಕ ಹಿತಾಸಕ್ತಿ, ಭಾರತದ ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿಗೆ ಮಸೂದೆ ಮಾರಕವಾಗಿರುವುದಾಗಿ ಮನವಿಯಲ್ಲಿ ಉಲ್ಲೇಖೀಸಲಾಗಿದೆ. 2017ರಲ್ಲಿ ಮಂಡಿಸಲಾದ ಕಾನೂನಿನ ಋಣಾತ್ಮಕ ಅಂಶಗಳನ್ನು ಪರಿಗಣಿಸಲು ಲೋಕಸಭೆಯ ಸ್ಥಾಯೀ ಕಮಿಟಿಗೆ ಸೂಚಿಸಲಾಗಿತ್ತು. ಈ ಕಮಿಟಿಯು ಹಲವಾರು ಸಾಕ್ಷಿಗಳು ಮತ್ತು ಪರಿಣತರನ್ನು ವಿಚಾರಿಸಿ 24 ಸಲಹೆಗಳನ್ನು ಸೂಚಿಸಿತ್ತು. ಇವುಗಳಲ್ಲಿ ಕೇವಲ ಒಂದನ್ನು ಮಾತ್ರ ಸಂಪೂರ್ಣವಾಗಿ ಹಾಗೂ ಮೂರನ್ನು ಭಾಗಶಃ ಅಳವಡಿಸಿ ಉಳಿದ ಅಂಶಗಳನ್ನು ಕೈಬಿಟ್ಟು ಲೋಕಸಭೆಯಲ್ಲಿ ಮತ್ತೆ ಮಂಡಿಸಲಾಗಿದೆ. 29 ಸದಸ್ಯರಲ್ಲಿ
9 ಮಂದಿ ಚುನಾಯಿತ ಸದಸ್ಯರು ಇರಬೇಕೆಂಬ ಸಲಹೆಯನ್ನು ಪರಿಗಣಿಸಿಲ್ಲ. ಎನ್‌ಎಂಸಿ ಸ್ವಾಯತ್ತ ಬೋರ್ಡ್‌ಗಳಲ್ಲಿ ಚುನಾಯಿತ ಸದಸ್ಯರಿರಬೇಕು ಎಂಬ ಸಲಹೆಯನ್ನು ಪರಿಗಣಿಸಲಾಗಿಲ್ಲ. ರಾಜ್ಯದ ವೈದ್ಯಕೀಯ ಮಂಡಳಿಗಳಿಗೆ ಸ್ವಾಯತ್ತೆಯನ್ನು ನೀಡಲಾಗಿಲ್ಲ ಸೇರಿದಂತೆ ಹಲವಾರು ಅಂಶಗಳನ್ನು ಸಂಘವು ಮನವಿಯಲ್ಲಿ ತಿಳಿಸಲಾಗಿದೆ. ಅಲ್ಲದೆ ಈ ಅಂಶಗಳನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಮನವಿಯಲ್ಲಿ ಒತ್ತಾಯಿಸಲಾಗಿದೆ.
Related Articles
Advertisement
ಚಿಕಿತ್ಸೆಗೆ ಬರುವವರ ಸಂಖ್ಯೆ ವಿರಳಸುರತ್ಕಲ್: ಇಲ್ಲಿಯ ಕೆಲವು ಖಾಸಗಿ ಅಸ್ಪತ್ರೆಗಳಲ್ಲಿ ಶನಿವಾರ ಹೊರ ರೋಗಿ ವಿಭಾಗ ಬಂದ್ ಮಾಡಲಾಗಿತ್ತು. ಸುರತ್ಕಲ್‌ನಲ್ಲಿ ನಾಲ್ಕು ಖಾಸಗಿ ಆಸ್ಪತ್ರೆ ಹಾಗೂ ಒಂದು ಹೆರಿಗೆ ಆಸ್ಪತ್ರೆಯಿದೆ. ಮುಷ್ಕ ರದ ಬಗ್ಗೆ ಮೊದಲೇ ಮಾಧ್ಯಮಗಳಲ್ಲಿ ವರದಿ ಬಂದ ಕಾರಣ ಆಸ್ಪತ್ರೆಗಳ ಮುಂಭಾಗ ಚಿಕಿತ್ಸೆಗೆ ಬರುವವರ ಸಂಖ್ಯೆ ವಿರಳವಾಗಿತ್ತು. ವೆನ್ಲಾಕ್‌ನಲ್ಲಿ ಅಧಿಕ ರೋಗಿಗಳು
ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿ ವಿಭಾಗ ಕಾರ್ಯಾಚರಿಸುತ್ತಿಲ್ಲ ಎಂಬ ಸುದ್ದಿಗಳು ಹರಿದಾಡಿದ ಹಿನ್ನೆಲೆಯಲ್ಲಿ ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಶನಿವಾರ ಅಧಿಕ ಸಂಖ್ಯೆಯ ರೋಗಿಗಳು ಕಂಡು ಬಂದರು. ಇದರಿಂದ ಸರತಿ ಸಾಲಿನಲ್ಲಿ ನಿಂತು ವಿವಿಧ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುತ್ತಿರುವುದು ಕಂಡು ಬಂತು.