Advertisement

ಸಹನೆ ನಮ್ಮ ದೌರ್ಬಲ್ಯವಲ್ಲ; ಮನೋಹರ್ ಪರಿಕ್ಕರ್

03:50 AM Feb 15, 2017 | Harsha Rao |

ಬೆಂಗಳೂರು: ನೆರೆ ರಾಷ್ಟ್ರಗಳಿಂದ ಬೆದರಿಕೆ ಇದ್ದರೂ ಭಾರತ ಶಾಂತವಾಗಿದೆ ಎಂದ ಮಾತ್ರಕ್ಕೆ ಸನ್ನದ್ಧತೆಯ ಕೊರತೆ
ಎಂಬ ಅರ್ಥವಲ್ಲ. ದೇಶದ ಭದ್ರತಾ ವ್ಯವಸ್ಥೆ ಕಾಪಾಡಲು ನಾವು ಸದಾ ಸನ್ನದ್ಧರಾಗಿದ್ದೇವೆ ಎಂದು ಹೇಳುವ ಮೂಲಕ ನೆರೆ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾಕ್ಕೆ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಪರೋಕ್ಷವಾಗಿ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

Advertisement

ಯಲಹಂಕ ವಾಯುನೆಲೆಯಲ್ಲಿ ಮಂಗಳವಾರ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಯಾವತ್ತೂ ಶಾಂತಿ ಬಯಸುತ್ತದೆ. ಹಾಗೆಂದ ಮಾತ್ರಕ್ಕೆ ನೆರೆ ರಾಷ್ಟ್ರಗಳಿಂದ ಬರುವ ಬೆದರಿಕೆಗಳ ಬಗ್ಗೆ ಮೌನವಾಗಿದ್ದೇವೆ ಎಂಬ ಭಾವನೆ ಸರಿಯಲ್ಲ. ಭಾರತಕ್ಕೆ‌ ಬೆದರಿಕೆ ಒಡ್ಡಿದರೂ ಅದನ್ನು ಎದುರಿಸುತ್ತೇವೆ. ನಮ್ಮ ದೇಶದ ಜನರಿಗೆ ಹೇಗೆ ಭದ್ರತೆ ಒದಗಿಸಬೇಕು ಎಂಬುದನ್ನು ಚೆನ್ನಾಗಿ ಬಲ್ಲೆವು ಎಂದು ಹೇಳಿದರು.

“ಸಿದ್ಧತೆ ಒಂದು ವೈಯಕ್ತಿಕ ಪ್ರಯೋಗವಾಗಿರುತ್ತದೆಯೇ ಹೊರತು ಆಕ್ರಮಣಕಾರಿಧಿಯಾಗಿರುವುದಿಲ್ಲ. ಆದರೆ, ಆಕ್ರಮಣ ಎದುರಿಸಲು ಸಮರ್ಥವಾಗಿರುತ್ತದೆ’ ಎಂದು ಪಾಕಿಸ್ತಾನ ಮತ್ತು ಚೀನಾ ಗಡಿ ಭಾಗದಲ್ಲಿ ಶಸ್ತ್ರಾಸ್ತ್ರ, ಯುದ್ಧ ಟ್ಯಾಂಕರ್‌ಗಳನ್ನು ಸೇರಿಸುತ್ತಿರುವ ಕುರಿತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಭಾರತದ ಗಡಿಯಲ್ಲಿ ಚೀನಾ ನಡೆಸುತ್ತಿರುವ ಕೆಲವು ಚಟುವಟಿಕೆಗಳು, ಗಡಿ ಉಲ್ಲಂಘನೆ ಕುರಿತ ಪ್ರಶ್ನೆಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಭಾರತ ನೆರೆ ರಾಷ್ಟ್ರಗಳೊಂದಿಗೆ ಯಾವತ್ತೂ ಶಾಂತಿ ಬಯಸುತ್ತದೆ.
ಅವರಿಂದಲೂ ಅದೇ ರೀತಿಯ ಪ್ರತಿಕ್ರಿಯೆಯನ್ನು ಎದುರು ನೋಡುತ್ತದೆ ಎಂದರು.

ಗಮನಾರ್ಹ ಸಾಧನೆ: ವೈಮಾನಿಕ ರಕ್ಷಣೆ ಮತ್ತು ನಾಗರೀಕ ವಿಮಾನಯಾನ ಕ್ಷೇತ್ರದಲ್ಲಿ ಭಾರತ ಗಮನಾರ್ಹ ಸಾಧನೆ
ಮಾಡುತ್ತಿದೆ. ಹಗುರ ಹೆಲಿಕಾಪ್ಟರ್‌ ತಯಾರಿಕೆಗೆ ಸಂಬಂಧಿಸಿದಂತೆ ಈಗಾಗಲೇ ಎಚ್‌ಎಎಲ್‌ 8 ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸಲಾದಗಿದೆ. ಎರಡನೇ ಹಂತದಲ್ಲಿ ಮತ್ತೆ 8 ಹೆಲಿಕಾಪ್ಟರ್‌ಗಳಿಗಾಗಿ 1354 ಕೋಟಿ ಮೊತ್ತದ ಯೋಜನೆ
ಮಂಜೂರು ಮಾಡಲಾಗಿದ್ದು, ಮೂರು ತಿಂಗಳಲ್ಲಿ ಕೆಲಸ ಆರಂಭವಾಗಿ ಇನ್ನೆರಡು ವರ್ಷಗಳಲ್ಲಿ ಅಧಿಕೃತ ಉತ್ಪಾದನೆ
ಆರಂಭವಾಗಲಿದೆ ಎಂದು ತಿಳಿಸಿದರು.

Advertisement

ಅದೇ ರೀತಿ ಎಸ್‌ಪಿ ಗನ್‌, ಸಿ-295 (ಏರ್‌ಬಸ್‌ ಟ್ರಾನ್ಸ್‌ಪೊàರ್ಟರ್‌ ಏರ್‌ಕ್ರಾಫ್ಟ್), ಏಕ ಮತ್ತು ಎರಡು ಎಂಜಿನ್‌ಗಳ ಫೈಟರ್‌ ಜೆಟ್‌ ಉತ್ಪಾದನೆ ಈ ಕ್ಯಾಲೆಂಡರ್‌ ವರ್ಷದಲ್ಲಿ ಆರಂಭವಾಗಲಿದೆ. ರಕ್ಷಣಾ ಇಲಾಖೆ ಮತ್ತು ನಾಗರೀಕ ವಿಮಾನಯಾನ ಇಲಾಖೆಗಳಿಗೆ ಒಟ್ಟಾಗಿ ಒಂದು ಸಾವಿರ ನಾಗರೀಕ ವಿಮಾನಗಳು, 300ರಿಂದ 400 ಯುದ್ಧ ವಿಮಾನಗಳು, 800ರಿಂದ 1000 ಹೆಲಿಕಾಪ್ಟರ್‌ಗಳ ಅಗತ್ಯವಿದ್ದು, ಎರಡೂ ಇಲಾಖೆಗಳು ಒಟ್ಟಾಗಿ ಕೆಲಸ ಮಾಡುವ ಮೂಲಕ ಉತ್ಪಾದನಾ ಕ್ಷೇತ್ರದಲ್ಲಿ ಈ ಸಾಧನೆ ಮಾಡಲಿವೆ. ಮುಂದಿನ 10 ವರ್ಷಗಳಲ್ಲಿ ಐದು ಸಾವಿರ ಹೆಲಿಕಾಪ್ಟರ್‌ ಎಂಜಿನ್‌ಗಳ ಅಗತ್ಯವಿದ್ದು, ಮೇಕ್‌ ಇನ್‌ ಇಂಡಿಯಾ ಮೂಲಕ ಅವುಗಳನ್ನು ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.

ಶ್ಲಾಘನೆ: ಕಳೆದ ಎರಡು ವರ್ಷಗಳಲ್ಲಿ ಎಚ್‌ಎಎಲ್‌ ಮಾಡಿರುವ ಸಾಧನೆಗಳನ್ನು ಶ್ಲಾ ಸಿದ ರಕ್ಷಣಾ ಸಚಿವರು, ದ್ರುವ, ರುದ್ರ, ಹಗುರ ಹೆಲಿಕಾಪ್ಟರ್‌  ಸೇರಿದಂತೆ ಹೆಲಿಕಾಪ್ಟರ್‌ ಉತ್ಪಾದನೆಯಲ್ಲಿ ಕಾಲಮಿತಿಯಲ್ಲಿ ಸಾಧನೆ ಮಾಡಲಾಗಿದೆ. ಈ ಹಿಂದೆ ಎಚ್‌ಎಎಲ್‌ಗೆ ವರ್ಷಿಕ ಗುರಿ ನೀಡಿದ್ದರೂ ಅದಕ್ಕೆ ತಕ್ಕಂತೆ ಪ್ರೋತ್ಸಾಹ ಇಲ್ಲದ ಕಾರಣ ಗುರಿ ಸಾಧನೆ
ಸಾಧ್ಯವಾಗುತ್ತಿರಲಿಲ್ಲ. ಆದರೆ, ಎರಡು ವರ್ಷದ ಅವಧಿಯಲ್ಲಿ ಕಂಪೆನಿ ಹಿಂದಿನ ಎಲ್ಲಾ ವೈಫ‌ಲ್ಯಗಳನ್ನು ಮೆಟ್ಟಿನಿಂತು ಉತ್ತಮ ಸಾಧನೆ ತೋರುತ್ತಿದೆ. ಹೆಚ್ಚುವರಿಯಾಗಿ ಮತ್ತೂಂದು ಹೆಲಿಕಾಪ್ಟರ್‌ ತಯಾರಿಕಾ ಘಟಕ ಸ್ಥಾಪನೆಯತ್ತ
ಆಸಕ್ತಿ ವಹಿಸಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next