ಗಾಂಧಿನಗರ : ಭಾರತೀಯ ಜನತಾ ಪಕ್ಷ ಕೇವಲ ಒಂದು ಮಾರ್ಕೆಟಿಂಗ್ ಕಂಪೆನಿಯೇ ಹೊರತು ಬೇರೇನೂ ಅಲ್ಲ ಎಂದು ಹೇಳುವ ಮೂಲಕ ರೇಶ್ಮಾ ಪಟೇಲ್ ಬಿಜೆಪಿ ತೊರೆದಿದ್ದಾರೆ.
Advertisement
ಗುಜರಾತ್‌ನಲ್ಲಿ ಪಟೇಲ್ ಆಂದೋಲನಕ್ಕೆ ಎರಡೂವರೆ ವರ್ಷ ಕಾಲ ಮಹಿಳಾ ಮುಖವಾಗಿದ್ದ ರೇಶ್ಮಾ ಪಟೇಲ್ ಅವರು ಕೆಲ ಸಮಯದ ಹಿಂದೆ ಬಿಜೆಪಿ ಸೇರಿದ್ದರು. ಆದರೆ ಬಿಜೆಪಿ ಕೇವಲ ಭರವಸೆ ಕೊಡುವ ಪಕ್ಷವಾಗಿ ನನಗೆ ಭ್ರಮನಿರಸನ ಉಂಟಾಗಿರುವುದರಿಂದು ನಾನು ಪಕ್ಷವನ್ನು ತೊರೆಯುತ್ತಿದ್ದೇನೆ ಎಂದು ರೇಶ್ಮಾ ಹೇಳಿದ್ದಾರೆ.
ಹಾರ್ದಿಕ್ ಪಟೇಲ್ ನೇತೃತ್ವದ ಪ್ರಮುಖ ಸದಸ್ಯೆಯಾಗಿರುವ ರೇಶ್ಮಾ ಪಟೇಲ್ ತಮ್ಮ ರಾಜೀನಾಮೆ ಪತೈವನ್ನು ಗುಜರಾತ್ ಬಿಜೆಪಿ ಅಧ್ಯಕ್ಷ ಜಿತು ವಘಾನಿ ಅವರಿಗೆ ಸಲ್ಲಿಸಿದರು.