Advertisement

ಪುಣೆಯಲ್ಲಿ ಕಲಾಜಗತ್ತು ಕ್ರಿಯೇಷನ್ಸ್‌ನ ಪತ್ತನಾಜೆ ಚಲನಚಿತ್ರ ಪ್ರದರ್ಶನ

04:45 PM Jul 25, 2018 | Team Udayavani |

ಪುಣೆ: ನಮ್ಮ ತುಳುನಾಡಿನ ಸಂಸ್ಕೃತಿಯನ್ನು, ಅಚಾರ-ವಿಚಾರಗಳನ್ನು ದೇಶದಲ್ಲಿ, ವಿದೇಶದಲ್ಲಿ ಪಸರಿಸಿರುವ ನಮ್ಮ ಎಲ್ಲ, ಹಿರಿಯ, ಯುವ ತುಳು ಬಾಂಧವರಿಗೆ ತಿಳಿಸುವ ಮಹತ್ಕಾರ್ಯ ಪತ್ತನಾಜೆಯಂತಹ ಚಲನಚಿತ್ರಗಳಿಂದ ಆಗುತ್ತದೆ. ಈ ಚಲನಚಿತ್ರ  ನಮ್ಮ ತುಳುನಾಡಿನ ಕಲೆ ಮತ್ತು ಸಂಸ್ಕೃತಿಗೆ ಒತ್ತುನೀಡಿ ಮೂಡಿ ಬಂದ ಚಲನಚಿತ್ರ. ಉತ್ತಮ ಕಥೆ ಸಾಹಿತ್ಯ, ನಿರ್ದೇಶನದೊಂದಿಗೆ ಕರಾವಳಿಯಾದ್ಯಂತ ಭರ್ಜರಿ ಪ್ರದರ್ಶನ  ನೀಡಿದೆ. ಈ ಮೊದಲು ಒಂದು ಬಾರಿ ಪುಣೆಯಲ್ಲಿ ಹೌಸ್‌ಫುಲ್‌ ಪ್ರದರ್ಶನಗೊಂಡು  ಇಂದು ಎರಡನೇ ಬಾರಿಗೆ ಈ ಚಲನಚಿತ್ರ  ಪ್ರದರ್ಶನದ ಕಾರ್ಯಕ್ರಮದಲ್ಲಿ ತುಳುನಾಡ ತಾಯಿಯ ಮಕ್ಕಳು ನಾವು ಇಂದು ಒಂದಾಗಿ ಸೇರಿದ್ದೇವೆ. ನಮ್ಮ ತುಳುನಾಡಿನ ಭಾವೈಕ್ಯವನ್ನು ತೋರಿಸುವ ಚಿತ್ರವಾಗಿ ಜನ ಮನ್ನಣೆ ಗಳಿಸಿದೆ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದಂತಹ ಪತ್ತನಾಜೆಯನ್ನು ಎಲ್ಲರೂ ಒಮ್ಮೆಯಾದರೂ ನೋಡಬೇಕು. ತುಳುಭಾಷೆ, ಕಲೆ, ಸಂಸ್ಕೃತಿಗೆ ಪ್ರೋತ್ಸಾಹ ನೀಡುವಲ್ಲಿ ಇಂತಹ ಕಾರ್ಯಕ್ರಮಗಳು ಪುಣೆಯಲ್ಲಿ ಮತ್ತಷ್ಟು ನಡೆಯುತ್ತಿರಬೇಕು. ಈ ಚಿತ್ರದ ಪ್ರದರ್ಶನ ಏರ್ಪಡಿಸಿದ ವಿಶ್ವನಾಥ್‌ ಶೆಟ್ಟಿ ಹಿರಿಯಡ್ಕ ಮತ್ತು ಬಳಗದವರ  ಕಾರ್ಯ ಶ್ಲಾಘನೀಯ ಎಂದು ಪುಣೆಯ ಹಿರಿಯ ಉದ್ಯಮಿ, ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಜಯಂತ್‌ ಶೆಟ್ಟಿ ಅವರು ನುಡಿದರು.

Advertisement

ಜು. 23ರಂದು ಪುಣೆಯ ಶಿವಾಜಿ ನಗರದ ಮಂಗಳ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರದಲ್ಲಿ ಕಲಾಜಗತ್ತು ಕ್ರಿಯೇಶನ್ಸ್‌ನ ಡಾ| ವಿಜಯ ಕುಮಾರ್‌ ಶೆಟ್ಟಿ ತೋನ್ಸೆ ನಿರ್ಮಾಣ ಮತ್ತು ನಿರ್ದೇಶನದ ತುಳು ಚಲನಚಿತ್ರ ಪತ್ತನಾಜೆ ಚಲನಚಿತ್ರದ ಪ್ರದರ್ಶನ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಅವರು ಮಾತನಾಡಿ ಶುಭ ಹಾರೈಸಿದರು.

ಅತಿಥಿ-ಗಣ್ಯರುಗಳಾದ  ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ಜಯಂತ್‌  ಶೆಟ್ಟಿ, ಕಾತ್ರಜ್‌ ಶ್ರೀ ಅಯ್ಯಪ್ಪ ಸೇವಾ ಸಂಘದ ಉಪಾಧ್ಯಕ್ಷ ಸುಧಾಕರ್‌ ಶೆಟ್ಟಿ, ಪುಣೆ ತುಳು ಕೂಟದ ಉಪಾಧ್ಯಕ್ಷ ಮೋಹನ್‌ ಶೆಟ್ಟಿ ಎಣ್ಣೆಹೊಳೆ, ಪುಣೆಯ ಹೊಟೇಲ್‌ ಉದ್ಯಮಿ ಶಿವರಾಮ್‌  ಶೆಟ್ಟಿ ಹಿರಿಯಡ್ಕ, ಹಿರಿಯರಾದ ಸದಾನಂದ ಶೆಟ್ಟಿ, ಪುಣೆ ತುಳು ಕೂಟದ ಯುವ ವಿಭಾಗದ ಕಾರ್ಯಾಧ್ಯಕ್ಷ ರೋಹನ್‌ ಶೆಟ್ಟಿ, ವಸಂತ್‌ ಶೆಟ್ಟಿ ಪಾಷಣ್‌. ಶ್ರೀಧರ್‌ ಶೆಟ್ಟಿ ಕÇÉಾಡಿ  ಗೋವರ್ಧನ ಶೆಟ್ಟಿ  ಮೊದಲಾದವರು ದೀಪ ಬೆಳಗಿಸಿ ಚಾಲನೆ ನೀಡಿದರು.

ಚಲನ ಚಿತ್ರ ಪ್ರದರ್ಶನದ ಮಧ್ಯಾಂತರದಲ್ಲಿ   ನಡೆದ ಸತ್ಕಾರ ಸಮಾರಂಭದಲ್ಲಿ ಉಪಸ್ಥಿತರಿದ್ದ  ಕಲಾ ಸೇವಕರಾದ ಜಯಂತ್‌ ಶೆಟ್ಟಿ ಅವರನ್ನು  ಕಾರ್ಯಕ್ರಮದ ವ್ಯವಸ್ಥಾಪಕರಾದ ವಿಶ್ವನಾಥ್‌ ಶೆಟ್ಟಿ ಬಸ್ತಿ ಹಿರಿಯಡ್ಕ  ಅವರು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಸಮ್ಮಾನಿಸಿದರು. ಗಣ್ಯರನ್ನು ಸತ್ಕರಿಸಲಾಯಿತು. ಪುಣೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷರಾದ ಪ್ರವೀಣ್‌ ಶೆಟ್ಟಿ ಪುತ್ತೂರು ಅವರ ಸಂಪೂರ್ಣ ಸಹಕಾರದೊಂದಿಗೆ ನಡೆದ ಕಾರ್ಯಕ್ರಮಕ್ಕೆ  ವಸಂತ್‌ ಶೆಟ್ಟಿ ಬಸ್ತಿ ಹಿರಿಯಡ್ಕ, ಪ್ರಶಾಂತ್‌ ಶೆಟ್ಟಿ, ಸುದೀಪ್‌ ಪೂಜಾರಿ ಅವರು  ಸಹಕರಿಸಿದರು.

ಈ ಸಂದರ್ಭದಲ್ಲಿ ದಿವಾಕರ್‌ ಶೆಟ್ಟಿ, ನಿತೇಶ್‌ ಶೆಟ್ಟಿ, ಸಂತೋಷ್‌, ಅಭಿಜಿತ್‌ ಮೊದಲಾದವರು ಉಪಸ್ಥಿತರಿದ್ದು ಕಾರ್ಯ ನಿರ್ವಹಿಸಿದರು. ವ್ಯವಸ್ಥಾಪಕ  ವಿಶ್ವನಾಥ್‌  ಶೆಟ್ಟಿ ಸಹಕರಿಸಿದ ಪುಣೆಯ ಎಲ್ಲ ದಾನಿಗಳಿಗೆ, ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ, ಕಲಾಪೋಷಕರಿಗೆ ಮತ್ತು ತುಳು ಬಾಂಧವರಿಗೆ ಕೃತಜ್ಞತೆ ಸಲ್ಲಿಸಿದರು.  

Advertisement

ಪತ್ತನಾಜೆ ತುಳು ಭಾಷೆ, ಕಲೆ, ಸಂಸ್ಕೃತಿಯನ್ನು  ಸಾರುವ   ಒಂದು ಉತ್ತಮ ತುಳು ಚಲನಚಿತ್ರ.  ಇಂತಹ ಉತ್ತಮ ಗುಣಮಟ್ಟದ ಸಂಸಾರ ಸಮೇತರಾಗಿ ನೋಡುವ ತುಳು ಭಾಷೆಯ  ಇನ್ನಷ್ಟು ಚಲನಚಿತ್ರಗಳು ಪುಣೆಯಲ್ಲಿ ಪ್ರದರ್ಶನಗೊಳ್ಳಲಿ. ನಮ್ಮ ಮಕ್ಕಳಿಗೆ  ತುಳು ಸಂಸ್ಕೃತಿಯನ್ನು ತಿಳಿಸುವ ಕಾರ್ಯ ಇದರಿಂದ ಆಗುತ್ತದೆ. ಇಂತಹ ಕಾರ್ಯಗಳಿಗೆ ಪುಣೆಯ  ಎÇÉಾ ತುಳು ಬಾಂಧವರು ಪ್ರೋತ್ಸಾಹ ನೀಡಿ ಸಹಕರಿಸಬೇಕು.
-ಸುಧಾಕರ್‌ ಶೆಟ್ಟಿ, ಉಪಾಧ್ಯಕ್ಷರು, ಶ್ರೀ ಅಯ್ಯಪ್ಪ  ಸೇವಾ ಸಂಘ  ಕಾತ್ರಜ್‌ ಪುಣೆ
ಅತ್ಯಂತ ವಿಶಿಷ್ಟ,  ಶ್ರೇಷ್ಠ, ವಿಭಿನ್ನವಾದ ತುಳು ಕಲೆ, ಸಂಸ್ಕೃತಿ ನಮ್ಮದು.  ತುಳು ಕಲಾ ಸೇವೆ  ಎಂದರೆ ಅದು ನಮ್ಮ  ತುಳು ಮಾತೆಯ ಸೇವೆ ಮಾಡಿದಂತೆ. ಸುಮಾರು 40 ವರ್ಷಗಳಿಂದ ತುಳು ಭಾಷೆಯ ಮೇಲಿನ ಪ್ರೀತಿಯಿಂದ  ಸೇವೆ ಮಾಡಿ ಹಲವಾರು ಸಾಧನೆ ಮಾಡಿರುವ ಕಲಾಜಗತ್ತು ವಿಜಯಕುಮಾರ್‌ ಶೆಟ್ಟಿ ಅವರು ಒಂದು ಉತ್ತಮ ಚಲನಚಿತ್ರವನ್ನು ನಿರ್ಮಿಸಿ ಸಮಾಜಕ್ಕೆ ನೀಡಿ¨ªಾರೆ. ಅದನ್ನು ಪ್ರೋತ್ಸಾಹಿಸಿ ಯಶಸ್ವಿಗೊಳಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ.  ತುಳು ಭಾಷೆಯ  ಸೇವೆಗಾಗಿ ನಿರಂತರ  ಕಾರ್ಯಕ್ರಮಗಳು ನಡೆಯುತ್ತಿರಲಿ.
-ಮೋಹನ್‌ ಶೆಟ್ಟಿ ಎಣ್ಣೆಹೊಳೆ, ಉಪಾಧ್ಯಕ್ಷರು, ತುಳು ಕೂಟ  ಪುಣೆ

ಚಿತ್ರ-ವರದಿ :  ಹರೀಶ್‌ ಮೂಡಬಿದ್ರಿ ಪುಣೆ

Advertisement

Udayavani is now on Telegram. Click here to join our channel and stay updated with the latest news.

Next