Advertisement

ಶಾರುಖ್ ಬರ್ತ್‌ಡೇಗೆ “ಪಠಾಣ್”‌ ಟೀಸರ್‌ ಗಿಫ್ಟ್‌: ಕಿಂಗ್ ಇಸ್‌ ಬ್ಯಾಕ್ ಎಂದ ಫ್ಯಾನ್ಸ್

12:10 PM Nov 02, 2022 | Team Udayavani |

ಮುಂಬಯಿ: ಕಿಂಗ್‌ ಆಫ್‌ ರೊಮ್ಯಾನ್ಸ್‌ ಶಾರುಖ್‌ ಖಾನ್‌ ಅವರಿಗಿಂದು 57ನೇ ಹುಟ್ಟುಹಬ್ಬದ ಸಂಭ್ರಮ. ಸೋಶಿಯಲ್‌ ಮೀಡಿಯಾದಲ್ಲಿ ಶಾರುಖ್‌ ಇಂದು ಟ್ರೆಂಡ್‌ ನಲ್ಲಿದ್ದಾರೆ. ಒಂದು ಕಡೆ ಹುಟ್ಟುಹಬ್ಬದ ಶುಭಾಶಗಳು ಸುರಿಮಳೆಯಾದರೆ, ಇನ್ನೊಂದೆಡೆ ʼಪಠಾಣ್‌ʼ ಚಿತ್ರದ ಟೀಸರ್‌ ರಿಲೀಸ್‌  ಕುರಿತ ಮಾತು.

Advertisement

ಮೂರು ವರ್ಷದ ಬಳಿಕ ಶಾರುಖ್‌ ಖಾನ್‌ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅವರ ಮೂರು ಚಿತ್ರಗಳು ಅನೌನ್ಸ್‌ ಆಗಿದ್ದು, ಇದರಲ್ಲಿ ʼಪಠಾಣ್‌ʼ ಮುಂದಿನ ವರ್ಷ ತೆರೆಗೆ ಬರಲಿದೆ. ಪೋಸ್ಟರ್‌ ಗಳಿಂದ ಸಾಕಷ್ಟು ಹೈಪ್‌ ಕ್ರಿಯೇಟ್‌ ಮಾಡಿದ್ದ ʼಪಠಾಣ್‌ʼ ಟೀಸರ್‌ ಮೂಲಕ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಟೀಸರ್ ನಲ್ಲಿ ಬಂಧಿತನಾಗಿ ಶಾರುಖ್‌ ಅವರನ್ನು ಒಂದು ಜಾಗಕ್ಕೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಸತ್ಯ ಬಾಯಿ ಬಿಡಲು ಕೊಡುವ ಹಿಂಸೆಯನ್ನು ತೋರಿಸಲಾಗಿದೆ. ಆ ಬಳಿಕ ಅಲ್ಲಿಂದ ಶಾರುಖ್‌ ಹೇಗೆ ಫೈಟ್‌ ಮಾಡಿ ಬರುತ್ತಾರೆ ಎನ್ನುವುದನ್ನು ಆ್ಯಕ್ಷನ್‌ ಪ್ರಿಯರಿಗೆ ಇಷ್ಟವಾಗುವಂತೆ ದೃಶ್ಯವನ್ನು ತೋರಿಸಲಾಗಿದೆ.

ಚಿತ್ರದಲ್ಲಿ ಜಾನ್‌ ಅಬ್ರಹಾಂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಾನ್‌ ಇಲ್ಲಿ ಜಾಕೆಟ್‌ ಹಾಕಿಕೊಂಡು ಗನ್‌ ನಿಂದ ಬುಲೆಟ್‌ ಬಿಡುವ ಸೀನ್‌ ಹಾಗೂ ಶಾರುಖ್‌ ಅವರೊಂದಿಗೆ ಕಾದಾಡುವ ದೃಶ್ಯ ಅದ್ಧೂರಿಯಾಗಿ ಮೂಡಿಬಂದಿದೆ. ದೀಪಿಕಾ ಅವರ ಪಾತ್ರ ಪರಿಚಯವನ್ನು ಮಾಡಲಾಗಿದೆ. ಕೊನೆಯಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಹೆಲಿಕಾಪ್ಟರ್‌ ಓಡಿಸುವಾಗ ಕನ್ನಡಕ ಹಾಕುವ ಶಾರುಖ್‌ ಆ್ಯಟಿಟ್ಯೂಡ್‌ ಅಭಿಮಾನಿಗಳಿಗೆ ಇಷ್ಟವಾಗುತ್ತದೆ.

ಮೇಲ್ನೋಟಕ್ಕೆ ಇದೊಂದು ಸೀಕ್ರೆಟ್‌ ಮಿಷನ್‌ ಸುತ್ತ ಸಾಗುವ ಚಿತ್ರದಂತೆ ಕಾಣುತ್ತದೆ. ಸಿದ್ದಾರ್ಥ್‌ ಆನಂದ್‌ ಆ್ಯಕ್ಷನ್‌ ಕಟ್‌ ಹೇಳಿರುವ ʼಪಠಾಣ್‌ʼ, 2023ರ ಜನವರಿ 25 ರಂದು ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ರಿಲೀಸ್‌ ಆಗಲಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next