ನವದೆಹಲಿ: ʼಪಠಾಣ್ʼ ಸಿನಿಮಾದ ʼಬೇಷರಂ ರಂಗ್ʼ ಹಾಡಿನ ವಿರುದ್ಧ ಕೆಲ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಹಾಡಿನಲ್ಲಿ ಕೇಸರಿ ಬಣ್ಣವನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಎಲ್ಲೆಡೆ ಪ್ರತಿಭಟನೆ ನಡೆಸಲಾಗುತ್ತಿದೆ.
ಈ ನಡುವೆ ಅಯೋಧ್ಯೆಯ ಸ್ವಾಮೀಜಿ ಮಹಾಂತ ಪರಮಹಂಸ ಆಚಾರ್ಯ ಅವರು ಶಾರುಖ್ ಖಾನ್ ಅವರ ʼಪಠಾಣ್ʼ ಸಿನಿಮಾದ ಬಗ್ಗೆ, ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ʼಬೇಷರಂ ರಂಗ್ʼ ಹಾಡಿನಲ್ಲಿ ಕೇಸರಿನ ಬಣ್ಣವನ್ನು ಅವಮಾನಿಸಲಾಗಿದೆ. ಈ ಬಗ್ಗೆ ಸನಾತನ ಧರ್ಮದ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ನಾವು ಸಿನಿಮಾದ ಪೋಸ್ಟರನ್ನು ಸುಟ್ಟು ಹಾಕಿದ್ದೇವೆ. ಒಂದು ವೇಳೆ ನಾನು ಶಾರುಖ್ ಖಾನ್ ನನ್ನು ಭೇಟಿಯಾದರೆ ಅವನನ್ನು ಜೀವಂತವಾಗಿ ಸುಟ್ಟು ಹಾಕುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: “ಶೀಘ್ರದಲ್ಲಿ ಟ್ವಟಿರ್ ಸಿಇಓ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ: ಎಲಾನ್ ಮಸ್ಕ್
ಮುಂದುವರೆದು ʼಪಠಾಣ್ʼ ಥಿಯೇಟರ್ ನಲ್ಲಿ ಬಿಡುಗಡೆಯಾದರೆ ಸುಟ್ಟು ಹಾಕುತ್ತೇನೆ. ʼಪಠಾಣ್ʼ ಸಿನಿಮಾವನ್ನು ಬಾಯ್ಕಟ್ ಮಾಡಿ ಎಂದು ಅವರು ಹೇಳಿದ್ದಾರೆ.
ಮಧ್ಯ ಪ್ರದೇಶ ಹಾಗೂ ಮುಂಬಯಿನಲ್ಲಿ ಸಿನಿಮಾದ ವಿರುದ್ಧ ಹೆಚ್ಚು ಪ್ರತಿಭಟನೆ ನಡೆಯುತ್ತಿದೆ. ಇತ್ತೀಚೆಗೆ ಮುಂಬಯಿಯ ಸಾಕಿನಾಕ ಪೊಲೀಸ್ ಠಾಣೆಯಲ್ಲಿ ಸಿನಿಮಾದ ʼಬೇಷರಂ ರಂಗ್ʼ ನಲ್ಲಿ ಕೇಸರಿ ಬಣ್ಣವನ್ನು ಅವಮಾನಕಾರ ರೀತಿಯಲ್ಲಿ ತೋರಿಸಲಾಗಿದೆ ಎಂದು ದೂರು ದಾಖಲಾಗಿದೆ. ಇದೆಲ್ಲದರ ನಡುವೆ ʼಪಠಾಣ್ʼ ಸಿನಿಮಾದ ಎರಡನೇ ಹಾಡು ʼಜೂಮ್ ಜೋ ಪಠಾಣ್ʼ ಡಿ.22 ರಂದು ರಿಲೀಸ್ ಆಗಲಿದೆ.