Advertisement

ಮುಕ್ತಿ  ಮಾರ್ಗದೆಡೆ ಕೊಂಡೊಯ್ಯುವುದೇ ಮಠಗಳ ಕಾರ್ಯ

05:11 PM Aug 23, 2018 | |

ರಾಣಿಬೆನ್ನೂರು: ಮನುಷ್ಯ ರೂಪದಿಂದ ಜನ್ಮ ತಾಳಿರುವ ಪ್ರತಿಯೊಬ್ಬ ವ್ಯಕ್ತಿಯಲ್ಲಡಗಿರುವ ಅಜ್ಞಾನವನ್ನು ಹೊಡೆದೊಡಿಸಿ, ಸುಜ್ಞಾನದಡೆಗೆ ಕೊಂಡೊಯ್ಯುವ ಗುರು ಸೇವೆ ಮುಕ್ತಿ ಪಡೆಯಲು ಸುಲಭ ಮಾರ್ಗವಾಗಿದೆ ಎಂದು ಐರಣಿ ಹೊಳೆಮಠದ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

Advertisement

ಬುಧವಾರ ತಾಲೂಕಿನ ಚಳಗೇರಿ ಗ್ರಾಮದಲ್ಲಿ ದಿ| ಮಹಾದೇವಪ್ಪ ದೂಳೆಹೊಳಿ ದಂಪತಿಗಳ ಸಮಾ ಧಿಗಳ ದೇವಸ್ಥಾನದಲ್ಲಿ ಮುಪ್ಪಿನಾರ್ಯ ಮಹಾತ್ಮಾಜಿಯವರ ಅಮೃತ ಶಿಲಾಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಆರೂಢ ಪರಂಪರೆಯ ಮಠಗಳು ಜಾತಿಯ ಸೊಂಕಿಲ್ಲದೆ ನಾಡಿನ ಸರ್ವಧರ್ಮ ಸಮಾಜದ ಜನರನ್ನು ಸನ್ಮಾರ್ಗದಡೆ ಕೊಂಡೊಯ್ಯುವುದೆ ಆಗಿದೆ ಎಂದು ನುಡಿದರು.

ಹುಬ್ಬಳ್ಳಿಯ ಸಿದ್ಧಾರೂಢರ ಪರಮ ಶಿಷ್ಯರಾದ ಮುಪ್ಪಿನಾರ್ಯರು, ಈ ಗ್ರಾಮವನ್ನು ಪುಣ್ಯಮಯ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಎಲ್ಲ ನದಿಗಳು ಸಮುದ್ರವನ್ನು ಸೇರುವಂತೆ ಎಲ್ಲ ಮಠಗಳ ಉದ್ದೇಶ ಜನರನ್ನು ಮುಕ್ತಿ ಮಾರ್ಗದೆಡೆಗೆ ಕೊಂಡೊಯ್ಯುವುದೇ ಆಗಿದೆ. ಅಂತಹ ಮಹಾಪುರುಷರಾದ ಮುಪ್ಪಿನಾರ್ಯರ ಸೇವೆಯನ್ನು ದಿ| ಮಹಾದೇವಪ್ಪ ದಂಪತಿಗಳು ತ್ರೀಕರ್ಣ ಭಾವನೆಯಿಂದ ಸೇವೆ ಮಾಡಿದ ಪುಣ್ಯದಿಂದಾಗಿ ಅವರ ಸಮಾಧಿಯ ಮೇಲೆ ಮುಪ್ಪಿನಾರ್ಯ ಮಹಾತ್ಮಾರ ಅಮೃತ ಶಿಲಾಮೂರ್ತಿ ಪ್ರತಿಷ್ಠಾಪನೆ ಸಾಕ್ಷಿಯಾಗಿದೆ ಎಂದರು.

ಕೊಟ್ನೂರ ವಿರಕ್ತಮಠದ ಚನ್ನಬಸವ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಆರೂಢ ಪರಂಪರೆಯ ಮಠಗಳು ತನ್ನನ್ನು ತಾನು ಮೊದಲು ತಿಳಿಯಲು ಜ್ಞಾನದ ಅಮೃತ ಧಾರೆಯನ್ನ ಉಣಿಸುತ್ತ ಬಂದಿವೆ. ಅದ್ವೈತ ಜ್ಞಾನದಿಂದ ಜನಸಾಮಾನ್ಯರು ಮುಕ್ತಿಯ ಮಾರ್ಗವನ್ನು ಪಡೆಯಲು ಸದಾ ಗುರುಚಿಂತನೆ ಮತ್ತು ಗುರುಮಾರ್ಗದಲ್ಲಿ ನಡೆದರೆ ಮಾತ್ರ ಸಾಧ್ಯ ಎಂದರು.

ಸ್ಥಳೀಯ ಕಟಗಿಹಳ್ಳಿ ಮಠದ ಡಾ| ಮಹಾಂತೇಶ್ವರ ಸ್ವಾಮೀಜಿ, ಖಂಡೇರಾಯನಹಳ್ಳಿಯ ಸಿದ್ಧಾಶ್ರಮದ ನಾಗರಾಜಾನಂದ ಶ್ರೀಗಳು, ಕುಳ್ಳೂರಿನ ಶಿವಯೋಗೀಶ್ವರ ಸಂಸ್ಥಾನಮಠದ ಬಸವಾನಂದ ಶ್ರೀಗಳು, ಶಿವಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

Advertisement

ನಿವೃತ್ತ ಶಿಕ್ಷಕ ಕೃಷ್ಣಮೂರ್ತಿ ಅಂಗಡಿ, ಬಸನಗೌಡ ಕರೇಗೌಡ್ರ, ರೇವಣಪ್ಪ ಬದ್ನಿಕಾಯಿ ಮಾತನಾಡಿದರು. ನಂದೆಪ್ಪ ತೆಗ್ಗಿನ, ಜನಾರ್ಧನ ಕಡೂರು, ಸತೀಶಗೌಡ ಮಲ್ಲನಗೌಡ್ರ, ವಕೀಲಪ್ಪ ಧೂಳೆಹೊಳಿ, ರಾಯಪ್ಪ ತೆಗ್ಗಿನ ಸೇರಿದಂತೆ ಮತ್ತಿತರರು ಇದ್ದರು. ಬಾಬಣ್ಣ ಶೆಟ್ಟರ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮುನ್ನ ಬೆಳಗ್ಗೆ ಬ್ರಾಹ್ಮೀ  ಮುಹೂರ್ತದಲ್ಲಿ ಮುಪ್ಪಿನಾರ್ಯ ಮಹಾತ್ಮಾಜಿಯವರ ಶಿಲಾಮೂರ್ತಿಗೆ ಅಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿಯೊಂದಿಗೆ ಸರ್ವ ಮಹಾತ್ಮರು ಪ್ರಾಣ ಪ್ರತಿಷ್ಠಾಪನೆಯ ಮೂಲಕ ಜೀವಕಳೆ ತುಂಬಿದರು.

Advertisement

Udayavani is now on Telegram. Click here to join our channel and stay updated with the latest news.

Next