Advertisement

ಗುಜರಾತ್‌ನಲ್ಲಿ ರುಪಾಣಿ, ಪಟೇಲ್‌ ಮುಂದುವರಿಕೆ?

06:40 AM Dec 21, 2017 | Harsha Rao |

ಅಹಮದಾಬಾದ್‌/ಶಿಮ್ಲಾ: ಪ್ರಯಾಸ ಪಟ್ಟು ಗೆದ್ದಿರುವ ಗುಜರಾತ್‌ನಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿ ವಿಜಯ ರುಪಾಣಿ ಮತ್ತು ಉಪ ಮುಖ್ಯಮಂತ್ರಿ ಸ್ಥಾನದಲ್ಲಿ ನಿತಿನ್‌ ಪಟೇಲ್‌ ಮುಂದುವರಿಯುವ ಸಾಧ್ಯತೆಯೇ ಅಧಿಕ. 2019ರ ಲೋಕಸಭೆ ಫ‌ಲಿತಾಂಶದ ವರೆಗೆ ಈ ವ್ಯವಸ್ಥೆ ಮುಂದುವರಿಯಲಿದೆ. ಈ ನಡುವೆ ಗುಜರಾತ್‌ ಸಿಎಂ ಸ್ಥಾನಕ್ಕೆ ಕೇಂದ್ರ ಜವಳಿ ಸಚಿವೆ ಸ್ಮತಿ ಇರಾನಿ ಹೆಸರೂ ಕೇಳಿ ಬಂದಿತ್ತು. ಈ ಬಗ್ಗೆ ಬುಧವಾರ ಮಾತನಾಡಿದ ಇರಾನಿ ತಾವು ಹುದ್ದೆಯ ರೇಸ್‌ನಲ್ಲಿಲ್ಲ ಎಂದು ಹೇಳಿದ್ದಾರೆ.

Advertisement

ಈ ನಡುವೆ  ಹಿಮಾಚಲ ಪ್ರದೇಶದಲ್ಲಿ ಸೋಲನುಭವಿಸಿರುವ ಪ್ರೇಮ್‌ ಕುಮಾರ್‌ ಧುಮಾಲ್‌ ತಾವೇ ಹುದ್ದೆಗೆ ಏರಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅವರ ಪರ ಬೆಂಬಲಿಗರಾಗಿ ರುವ ಮೂವರು ಶಾಸಕರು ತಮ್ಮ ಕ್ಷೇತ್ರದಿಂದ ಸ್ಪರ್ಧಿಸಿ ಮತ್ತೆ ಗೆಲ್ಲಬಹುದು ಎಂದು ಆಫ‌ರ್‌ ಕೂಡ ಕೊಟ್ಟಿದ್ದಾರೆ. ಧುಮಲ್‌ ಪರವಾಗಿರುವ ಶಾಸಕರು ಸಮೀರ್‌ಪುರ್‌ನಲ್ಲಿರುವ ಅವರ ಖಾಸಗಿ ನಿವಾಸದಲ್ಲಿ ಭೇಟಿಯಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.  

ಗುಜರಾತ್‌ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಹಿಂದಿನ ಸಾಲಿಗಿಂತ ತನ್ನ ಸ್ಥಾನಗಳನ್ನು ಉತ್ತಮ ಪಡಿಸಿದೆ. ಪೈಪೋಟಿಯ ಪ್ರಚಾರ ಇದ್ದಾಗಿಯೂ ಕೂಡ ಸೋಲಲು ಕಾರಣವೇನು ಎಂದು ಕಂಡುಕೊಳ್ಳಲು ರಾಹುಲ್‌ ಗಾಂಧಿ ನೇತೃತ್ವದ ಪಕ್ಷ ಮುಂದಾಗಿದೆ. ಈ ಬಗ್ಗೆ ಬುಧವಾರದಿಂದ ನವದೆಹಲಿಯಲ್ಲಿ ಮೂರು ದಿನಗಳ ಚಿಂತನಾ ಸಭೆ ಆರಂಭವಾಗಿದೆ. ಶುಕ್ರವಾರ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಭಾಗವಹಿಸಲಿದ್ದಾರೆ.

ಗುಜರಾತ್‌, ಹಿಮಾಚಲ ಪ್ರದೇಶ ಸೋಲಿನ ಕಾರಣಗಳ ಜತೆಗೆ 2019ರ ಲೋಕಸಭೆ ಚುನಾವಣೆಗೆ ಕೂಡ ಸಿದ್ಧತೆ ಮತ್ತು ರಣತಂತ್ರ ರೂಪಿಸುವ ಬಗ್ಗೆ ಚರ್ಚಿಸಲಾಗುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next