Advertisement
ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ 2022ರ ಬಳಿಕ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬೆಂಕಿ ಅವಘಡಗಳಿಗೆ ತುತ್ತಾಗಿ ಚರ್ಮದ ಕಸಿಗಳಿಗೆ ಒಳಗಾಗುವವರ ಸಂಖ್ಯೆ ತೀರ ಕಡಿಮೆ ಇದೆ. ಇನ್ನೂ ಸಣ್ಣ ಪುಟ್ಟ ಅವಘಡಗಳ ಸಂಖ್ಯೆ ಹೆಚ್ಚಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ವಿಕ್ಟೋರಿಯಾ ಸ್ಕೀನ್ ಬ್ಯಾಂಕ್ ನಲ್ಲಿ ಪಟಾಕಿ/ಬೆಂಕಿ ಅವಘಡ ಹಾಗೂ ರಸ್ತೆ ಅಪ ಘಾತ ಪ್ರಕರಣಗಳು ಸಂಭವಿಸಿದಾಗ ಗಾಯಾಳುಗಳಿಗೆ ಚರ್ಮದ ಕಸಿ ಮಾಡಲು ಸುಮಾರು 10 ಸಾವಿರ ಚ.ಸೆಂ.ಮೀ. ಚರ್ಮ ಲಭ್ಯವಿದೆ. ಲಭ್ಯವಿರುವ ಚರ್ಮದಲ್ಲಿ 7 ರಿಂದ 10 ರೋಗಿಗಳ ಚರ್ಮ ಕಸಿ ಶಸ್ತ್ರ ಚಿಕಿತ್ಸೆ ಮಾಡಬಹುದು.
Related Articles
Advertisement
ಯಾವಾಗ ಚರ್ಮದ ಕಸಿ?: ಅವಘಡದಲ್ಲಿ ಶೇ. 25-30 ಸುಟ್ಟ ಗಾಯಗಳಾದಲ್ಲಿ ರೋಗಿಯ ದೇಹದ ಇತರೆ ಭಾಗದಿಂದ ಚರ್ಮ ತೆಗೆದು ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಶೇ.30ಕ್ಕಿಂತ ಅಧಿಕ ಭಾಗ ಸುಟ್ಟರೆ ಅವರಿಗೆ ಸಂರಕ್ಷಿತ ಚರ್ಮ ಬಳಸಿಕೊಂಡು ಕಸಿ ಮಾಡಲಾಗುತ್ತದೆ. ಮರಣ ಹೊಂದಿರುವ ವ್ಯಕ್ತಿ ಮಾತ್ರವಲ್ಲದೆ ಜೀವಂತ ಇರುವವರು ಚರ್ಮ ದಾನ ಮಾಡಬಹುದಾಗಿದೆ. ಇಲ್ಲಿ ತಾಯಿ ತನ್ನ ಮಗುವಿಗೆ ಮಾತ್ರ ಚರ್ಮ ದಾನ ಮಾಡಬಹುದಾಗಿದೆ. ಮೆಡಿಕಲ್ ನಿಯಮಾವಳಿ ಅನ್ವಯ ಕನಿಷ್ಠ ಚರ್ಮ ಪಡೆಯಲಾಗುತ್ತದೆ. ರಕ್ತ ಪರೀಕ್ಷೆ ಮಾಡಿಸಿ ಹೊಂದಾಣಿಕೆಯಾದರೆ ಮಾತ್ರ ಚರ್ಮ ದಾನ ಮಾಡಬಹುದಾಗಿದೆ. ಒಮ್ಮೆ ಚರ್ಮ ನೀಡಿದರೆ 3-4 ವಾರಗಳಲ್ಲಿ ಆ ಜಾಗದಲ್ಲಿ ಹೊಸ ಚರ್ಮ ಬೆಳೆಯಲಿದೆ.
ಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿ ದ ರೆ, ದೀಪಾವಳಿ ಸಮಯದಲ್ಲಿ ಬೆಂಕಿ ಅವಘಡಗಳಿಗೆ ತುತ್ತಾಗಿ ಚರ್ಮದ ಕಸಿ ಶಸ್ತ್ರ ಚಿಕಿತ್ಸೆಗೆ ಒಳಗಾಗುವವರ ಸಂಖ್ಯೆ ಕಡಿಮೆ ಇದೆ. 2023ರ ದೀಪಾವಳಿ ಅವಧಿಯಲ್ಲಿ ಓರ್ವ ರೋಗಿಯೊಬ್ಬರ ಚರ್ಮದ ಕಸಿ ಶಸ್ತ್ರ ಚಿಕಿತ್ಸೆ ಚರ್ಮವನ್ನು ನೀಡಲಾಗಿತ್ತು. ●ಡಾ. ಯೋಗೀಶ್ವರಪ್ಪ, ಚರ್ಮನಿಧಿ ಮುಖ್ಯಸ್ಥ ವಿಕ್ಟೋರಿಯಾ ಆಸ್ಪತ್ರೆ.
■ ತೃಪ್ತಿ ಕುಮ್ರಗೋಡು