Advertisement

Deepawali: ಪಟಾಕಿ ಅವಘಡ: ಚರ್ಮ ಕಸಿ ಶಸಚಿಕಿತ್ಸೆಗೆ ಸಜ್ಜು

03:40 PM Nov 01, 2024 | Team Udayavani |

ಬೆಂಗಳೂರು: ದೀಪಾವಳಿ ಸಂದರ್ಭದಲ್ಲಿ ಪಟಾಕಿ ದುರಂತಗಳಿಗೆ ತುತ್ತಾದವರಿಗೆ ಚರ್ಮದ ಕಸಿ ಶಸ್ತ್ರ ಚಿಕಿತ್ಸೆಗೆ ಅಗತ್ಯವಿರುವ ಚರ್ಮವನ್ನು ಪೂರೈಸಲು ವಿಕ್ಟೋ ರಿಯಾ ಆಸ್ಪತ್ರೆಯ ಸ್ಕೀನ್‌ ಬ್ಯಾಂಕ್‌ ಸಜ್ಜುಗೊಂಡಿದೆ.

Advertisement

ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ 2022ರ ಬಳಿಕ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬೆಂಕಿ ಅವಘಡಗಳಿಗೆ ತುತ್ತಾಗಿ ಚರ್ಮದ ಕಸಿಗಳಿಗೆ ಒಳಗಾಗುವವರ ಸಂಖ್ಯೆ ತೀರ ಕಡಿಮೆ ಇದೆ. ಇನ್ನೂ ಸಣ್ಣ ಪುಟ್ಟ ಅವಘಡಗಳ ಸಂಖ್ಯೆ ಹೆಚ್ಚಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ವಿಕ್ಟೋರಿಯಾ ಸ್ಕೀನ್‌ ಬ್ಯಾಂಕ್‌ ನಲ್ಲಿ ಪಟಾಕಿ/ಬೆಂಕಿ ಅವಘಡ ಹಾಗೂ ರಸ್ತೆ ಅಪ ಘಾತ ಪ್ರಕರಣಗಳು ಸಂಭವಿಸಿದಾಗ ಗಾಯಾಳುಗಳಿಗೆ ಚರ್ಮದ ಕಸಿ ಮಾಡಲು ಸುಮಾರು 10 ಸಾವಿರ ಚ.ಸೆಂ.ಮೀ. ಚರ್ಮ ಲಭ್ಯವಿದೆ. ಲಭ್ಯವಿರುವ ಚರ್ಮದಲ್ಲಿ 7 ರಿಂದ 10 ರೋಗಿಗಳ ಚರ್ಮ ಕಸಿ ಶಸ್ತ್ರ ಚಿಕಿತ್ಸೆ ಮಾಡಬಹುದು.

ಹೊರ ರಾಜ್ಯಕ್ಕೂ ಪೂರೈಕೆ: 2016ರಲ್ಲಿ ಕಾರ್ಯಾರಂಭ ಗೊಂಡ ರಾಜ್ಯದ ಮೊದಲ ಚರ್ಮದ ಬ್ಯಾಂಕ್‌ ನಲ್ಲಿ ಈವರೆಗೆ 229 ಮೃತದಾನಿಗಳಿಂದ ಚರ್ಮ ಸಂಗ್ರಹಿಸಿದೆ. ಇದನ್ನು 449 ಮಂದಿಗೆ ಬಳಸಲಾಗಿದೆ. ಸ್ಕೀನ್‌ ಬ್ಯಾಂಕ್‌ನಲ್ಲಿ ಪ್ರಸ್ತುತ ಬೇಡಿಕೆಗಿಂತ ಪೂರೈಕೆ ಪ್ರಮಾಣ ಹೆಚ್ಚಿದೆ.

ಇದುವರೆಗೆ ಕರ್ನಾಟಕದ ವಿವಿಧ ಜಿಲ್ಲೆ ಸೇರಿದಂತೆ, ತಮಿಳುನಾಡು, ಹೊಸದೆಹಲಿ, ಭುವ ನೇಶ್ವರ, ಕೇರಳ ರಾಜ್ಯಗಳ ಲ್ಲಿ ಅಗತ್ಯವಿರುವವರಿಗೆ ಚಿಕಿತ್ಸೆಗೆ ಚರ್ಮ ಪೂರೈಕೆ ಮಾಡಲಾಗಿದೆ. ದೀಪಾವಳಿ ವೇಳೆ ಸಂಭವಿಸುವ ಬೆಂಕಿ ಅವಘಡಗಳಿಗೆ ತುತ್ತಾ ದವರಿಗೆ ಅಗತ್ಯವಿರುವ ಚರ್ಮವನ್ನು ಉಚಿತವಾಗಿ ನೀಡಲು ಸ್ಕೀನ್‌ ಬ್ಯಾಂಕ್‌ ಸನ್ನದ್ಧವಾಗಿದೆ.

5 ವರ್ಷ ಶೇಖರಣೆ: ವ್ಯಕ್ತಿ ಮೃತಪಟ್ಟ 6 ಗಂಟೆಗಳಲ್ಲಿ ಚರ್ಮ ಪಡೆಯಬಹುದು. ದಾನಿಯು ಒಂದು ವೇಳೆ ಎಚ್‌ಐವಿ, ಅಲರ್ಜಿ ಸೇರಿದಂತೆ ಮತ್ತಿತರೆ ಚರ್ಮರೋಗ ಕಂಡುಬಂದಲ್ಲಿ ಅಂತಹವರ ಚರ್ಮ ಪಡೆಯಲು ಸಾಧ್ಯವಿಲ್ಲ. ವೈದ್ಯಕೀಯ ಉಪಕರಣದ ಸಹಾಯದಿಂದ ರಕ್ತಸ್ರಾವ ಆಗದ ರೀತಿಯಲ್ಲಿ ಚರ್ಮದ ಮೇಲ್ಪದರ ಮಾತ್ರ ತೆಗೆದು, ಬ್ಯಾಂಡೇಜ್‌ ಮಾಡಲಾಗುತ್ತದೆ. ಸಂಸ್ಕರಿಸಿದ ಚರ್ಮವನ್ನು 5 ವರ್ಷದವರೆಗೂ ಶೇಖರಣೆ ಮಾಡಬಹುದು. ಸಂರಕ್ಷಿಸಿ ಇಡಲಾದ ಚರ್ಮವನ್ನು ಯಾರಿಗೆ ಬೇಕಾದರೂ ಕಸಿ ಮಾಡಬಹುದು.

Advertisement

ಯಾವಾಗ ಚರ್ಮದ ಕಸಿ?: ಅವಘಡದಲ್ಲಿ ಶೇ. 25-30 ಸುಟ್ಟ ಗಾಯಗಳಾದಲ್ಲಿ ರೋಗಿಯ ದೇಹದ ಇತರೆ ಭಾಗದಿಂದ ಚರ್ಮ ತೆಗೆದು ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಶೇ.30ಕ್ಕಿಂತ ಅಧಿಕ ಭಾಗ ಸುಟ್ಟರೆ ಅವರಿಗೆ ಸಂರಕ್ಷಿತ ಚರ್ಮ ಬಳಸಿಕೊಂಡು ಕಸಿ ಮಾಡಲಾಗುತ್ತದೆ. ಮರಣ ಹೊಂದಿರುವ ವ್ಯಕ್ತಿ ಮಾತ್ರವಲ್ಲದೆ ಜೀವಂತ ಇರುವವರು ಚರ್ಮ ದಾನ ಮಾಡಬಹುದಾಗಿದೆ. ಇಲ್ಲಿ ತಾಯಿ ತನ್ನ ಮಗುವಿಗೆ ಮಾತ್ರ ಚರ್ಮ ದಾನ ಮಾಡಬಹುದಾಗಿದೆ. ಮೆಡಿಕಲ್‌ ನಿಯಮಾವಳಿ ಅನ್ವಯ ಕನಿಷ್ಠ ಚರ್ಮ ಪಡೆಯಲಾಗುತ್ತದೆ. ರಕ್ತ ಪರೀಕ್ಷೆ ಮಾಡಿಸಿ ಹೊಂದಾಣಿಕೆಯಾದರೆ ಮಾತ್ರ ಚರ್ಮ ದಾನ ಮಾಡಬಹುದಾಗಿದೆ. ಒಮ್ಮೆ ಚರ್ಮ ನೀಡಿದರೆ 3-4 ವಾರಗಳಲ್ಲಿ ಆ ಜಾಗದಲ್ಲಿ ಹೊಸ ಚರ್ಮ ಬೆಳೆಯಲಿದೆ.

ಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿ ದ ರೆ, ದೀಪಾವಳಿ ಸಮಯದಲ್ಲಿ ಬೆಂಕಿ ಅವಘಡಗಳಿಗೆ ತುತ್ತಾಗಿ ಚರ್ಮದ ಕಸಿ ಶಸ್ತ್ರ ಚಿಕಿತ್ಸೆಗೆ ಒಳಗಾಗುವವರ ಸಂಖ್ಯೆ ಕಡಿಮೆ ಇದೆ. 2023ರ ದೀಪಾವಳಿ ಅವಧಿಯಲ್ಲಿ ಓರ್ವ ರೋಗಿಯೊಬ್ಬರ ಚರ್ಮದ ಕಸಿ ಶಸ್ತ್ರ ಚಿಕಿತ್ಸೆ ಚರ್ಮವನ್ನು ನೀಡಲಾಗಿತ್ತು. ●ಡಾ. ಯೋಗೀಶ್ವರಪ್ಪ, ಚರ್ಮನಿಧಿ ಮುಖ್ಯಸ್ಥ ವಿಕ್ಟೋರಿಯಾ ಆಸ್ಪತ್ರೆ.

■ ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next