Advertisement

ಟಿಬೆಟ್‌ಗೆ ಸ್ವಾತಂತ್ರ್ಯ ಬೇಡ, ಅಭಿವೃದ್ಧಿ ಸಾಕು

07:25 AM Nov 24, 2017 | Team Udayavani |

ಕೋಲ್ಕತಾ: ಟಿಬೆಟ್‌ ಚೀನದಿಂದ ಬೇರೆಯಾಗಿ ಸ್ವತಂತ್ರ ರಾಷ್ಟ್ರವಾಗಬೇಕು ಎಂದು ಬಯಸುತ್ತಿಲ್ಲ. ಚೀನದಲ್ಲೇ ಇರಲು ಟಿಬೆಟ್‌ ಬಯಸುತ್ತದೆ. ಆದರೆ, ಹೆಚ್ಚಿನ ಅಭಿವೃದ್ಧಿಯಾಗಬೇಕು ಎಂಬುದು ನಮ್ಮ ಬೇಡಿಕೆ. ಹೀಗೆಂದು ಹೇಳಿರುವುದು ಬೇರಾರೂ ಅಲ್ಲ. ಟಿಬೆಟಿಯನ್‌ ಧರ್ಮಗುರು ದಲೈಲಾಮ.

Advertisement

ಗುರುವಾರ ಕೋಲ್ಕತಾದಲ್ಲಿ ಮಾತನಾಡಿದ ಅವರು, “ಕೆಲವೊಂದು ಸಾಂದರ್ಭಿಕ ಸಂಘರ್ಷಗಳ ನಡುವೆಯೂ ಚೀನ ಮತ್ತು ಟಿಬೆಟ್‌ ಉತ್ತಮ ಸಂಬಂಧವನ್ನು ಕಾಯ್ದುಕೊಂಡು ಬಂದಿದೆ. ಕಳೆದುಹೋದ ಘಟನೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡು ಕಾಲಹರಣ ಮಾಡುವುದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಾವು ಭವಿಷ್ಯದ ಬಗ್ಗೆ ಚಿಂತಿಸಬೇಕು’ ಎಂದು ಹೇಳುವ ಮೂಲಕ ಹಳೆಯ ಕಹಿ ಘಟನೆ ಮರೆಯುವುದು ಒಳಿತು ಎಂದು ಸೂಚ್ಯವಾಗಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next