ನಿಮ್ಮ ಹತ್ತಿರದ ಅಂಚೆ ಕಛೇರಿಯಿಂದಲೂ ಪಾಸ್‌ಪೋರ್ಟ್ ಪಡೆಯಬಹುದಾಗಿದೆ. ಇಂಡಿಯಾ ಪೋಸ್ಟ್ ಈಗ ದೇಶದ ಅನೇಕ ಅಂಚೆ ಕಚೇರಿಗಳಲ್ಲಿ ಪಾಸ್ ಪೋರ್ಟ್ ನೋಂದಣಿ ಮತ್ತು ಪಾಸ್ ಪೋರ್ಟ್ ಅರ್ಜಿಯಂತಹ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ.
ಈ ಕುರಿತಂತೆ ಇಂಡಿಯಾ ಪೋಸ್ಟ್ ತನ್ನ ಅಧಿಕೃತ ಟ್ವೀಟರ್ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದು, ಅದರಲ್ಲಿ ಈಗ ಪೋಸ್ಟ್ ಆಫೀಸ್ನ ಸಿಎಸ್ಸಿ ಕೌಂಟರ್‌ನಲ್ಲಿ ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸಲು ಮತ್ತು ನೋಂದಾಯಿಸುವುದು ಸುಲಭವಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಎಂದು ಬರೆಯಲಾಗಿದೆ.
ಇದನ್ನೂ ಓದಿ : ಹಿರಿಯ ನಟಿ ಜಯಂತಿ ಅಗಲಿಕೆಗೆ ಕಣ್ಣೀರು ಸುರಿಸಿದ ನಟ ಜಗ್ಗೇಶ್
ನೀವು ಈಗಾಗಲೇ ಅನೇಕ ಅಂಚೆ ಕಚೇರಿಗಳಲ್ಲಿ ಅಸ್ತಿತ್ವದಲ್ಲಿರುವ ಪಾಸ್ ಪೋರ್ಟ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಪಾಸ್ ಪೋರ್ಟ್‌ಗೆ ಅರ್ಜಿ ಸಲ್ಲಿಸಬಹದಾಗಿದೆ.
Passportindia.gov.in ಪ್ರಕಾರ, ಪಾಸ್ ಪೋರ್ಟ್ ಸೇವಾ ಕೇಂದ್ರ ಹಾಗೂ ಪೋಸ್ಟ್ ಆಫೀಸ್ ಪಾಸ್ ಪೋರ್ಟ್ ಸೇವಾ ಕೇಂದ್ರವು ಪಾಸ್ ಪೋರ್ಟ್ ಕಚೇರಿಯ ಶಾಖೆಗಳಾಗಿವೆ. ಈ ಕೇಂದ್ರಗಳು ಪಾಸ್‌ಪೋರ್ಟ್ ವಿತರಣೆಗೆ ಟೋಕನ್‌ನಿಂದ ಅರ್ಜಿಯವರೆಗೆ ಕಾರ್ಯನಿರ್ವಹಿಸುತ್ತವೆ. ಇದಕ್ಕಾಗಿ ನೀವು ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್‌ಗೆ ನೋಂದಾಯಿಸಿಕೊಳ್ಳಬೇಕು ಮತ್ತು ಅರ್ಜಿ ಸಲ್ಲಿಸಬೇಕಾಗುತ್ತದೆ. ಇಲ್ಲಿ ನಿಮ್ಮ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ, ಅದರ ನಂತರ ನಿಮ್ಮ ಪಾಸ್ ಪೋರ್ಟ್‌ಗೆ ಸಂಬಂಧಿಸಿದ ಮಾಹಿತಿಯನ್ನು ಎಸ್‌ಎಂಎಸ್ ಮೂಲಕ ನೀಡಲಾಗುತ್ತದೆ.
ಇದನ್ನೂ ಓದಿ : ‘ಬಿಎಸ್ ವೈ ಪದತ್ಯಾಗ’ಕ್ಕೆ ಭಾವುಕ ನುಡಿ: ನೆಚ್ಚಿನ ನಾಯಕನ ಬಗ್ಗೆ ರೇಣುಕಾಚಾರ್ಯ ಹೇಳಿದ್ದೇನು ?