Advertisement

ಪರೀಕ್ಷೆಗೂ ಮುನ್ನವೇ ಉತ್ತೀರ್ಣ ಘೋಷಣೆ

03:56 PM Aug 10, 2021 | Team Udayavani |

ದೇವನಹಳ್ಳಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫ‌ಲಿತಾಂಶದಲ್ಲಿ ಜಿಲ್ಲೆಯಲ್ಲಿ ಪರೀಕ್ಷೆ ಬರೆದ ಎಲ್ಲರೂ ಉತ್ತೀರ್ಣರಾಗಿದ್ದಾರೆ. ಜಿಲ್ಲೆಯಲ್ಲಿ 13359 ಹೊಸದಾಗಿ
ಪರೀಕ್ಷೆ ಬರೆದವರಲ್ಲಿ 25 ವಿದ್ಯಾರ್ಥಿಗಳು ಗೈರಾಗಿದ್ದರು. ಒಟ್ಟು 13534 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ.

Advertisement

ಸರ್ಕಾರ ಪರೀಕ್ಷೆ ಮುನ್ನವೇ ಎಲ್ಲರೂ ಉತ್ತೀರ್ಣರು ಎಂದು ಘೋಷಿಸಿದ್ದರು. ಅದರಂತೆಯೇ ಕೋವಿಡ್‌ 2ನೇಅಲೆ ನಡುವೆಯೂ ಪರೀಕ್ಷೆ ನಡೆಸಿದ ಜಿಲ್ಲಾಡಳಿತವು ಯಶಸ್ವಿಯಾಗಿದೆ. ವಿದ್ಯಾರ್ಥಿಗಳು ಉತ್ತೀರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಪಿಯುಸಿ ದಾಖಲೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಯಾವ ಯಾವ ಗ್ರೇಡ್‌ನ‌ಲ್ಲಿ ಉತ್ತೀರ್ಣರಾಗಿದ್ದಾರೆ ಎಂಬ ಮಾಹಿತಿ ಹೊರಬೀಳಬೇಕಾಗಿದೆ ಎಂದು ಶಿಕ್ಷಣ ಇಲಾಖೆಯ ಮೂಲ ತಿಳಿಸಿದೆ.

625ಕ್ಕೆ 625 ಅಂಕ ಪಡೆದ ವಿದ್ಯಾರ್ಥಿಗಳು:
ಹೊಸಕೋಟೆಯ ನ್ಯೂ ಹಾರಿಜನ್‌ ಶಾಲೆ ವಿದ್ಯಾರ್ಥಿ ಗ್ರೀಷ್ಮ, ದೊಡ್ಡಬಳ್ಳಾಪುರ ತಾಲೂಕಿನ ಮೆಳೇಕೋಟೆ ಕ್ರಾಸ್‌ನ ಎಸ್‌ಜೆಸಿಆರ್‌ ವಿದ್ಯಾನಿಕೇತನ ಶಾಲೆ ವಿದ್ಯಾರ್ಥಿನಿ ಲಿಖಿತ ‌ದೊಡ್ಡಬಳ್ಳಾಪುರ ತಾಲೂಕಿನ ಮೆಳೇಕೋಟೆ ಕ್ರಾಸ್‌ನ ಎಸ್‌ಜೆಸಿಆರ್‌ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿನಿ ಯಶಸ್ವಿನಿ, ದೊಡ್ಡಬಳ್ಳಾಪುರದ ಕಾರ್ಮೆಲ್‌ ಜ್ಯೋತಿ ಶಾಲೆಯ ವಿದ್ಯಾರ್ಥಿನಿ ಪ್ರಿಯದರ್ಶಿನಿ 625ಕ್ಕೆ625 ಅಂಕಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿನಿಯರೇ 625ಕ್ಕೆ 625 ಅಂಕಗಳನ್ನು ಪಡೆದು ಮೇಲುಗೈ ಸಾಧಿಸಿದ್ದಾರೆ. ಕೋವಿಡ್‌ದಿಂದ ಶಾಲೆಗಳು ಮುಚ್ಚಿದ್ದರಿಂದ ಆನ್‌ಲೈನ್‌ ನಲ್ಲಿಯೇ ಪಾಠ ಪ್ರವಚನಗಳನ್ನು ಮಾಡಿ, ಹೆಚ್ಚಿನ ಅಂಕಗಳನ್ನು ಗಳಿಸಲು ಸಹಕಾರಿಯಾಗಿದೆ. ಎಸ್ಸೆಸ್ಸೆಲ್ಸಿ
ಫ‌ಲಿತಾಂಶ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಅಂಕಗಳಿಸಿರುವುದರಿಂದ ಪೋಷಕರು ಸಿಹಿ ಹಂಚಿ ಸಂತಸ ಪಟ್ಟರು.

ಇದನ್ನೂ ಓದಿ:ಜಮ್ಮು ಕಾಶ್ಮೀರ ‘ರಾಜ್ಯವಾಗಬೇಕು’ : ರಾಹುಲ್ ಗಾಂಧಿ

ಆನ್‌ಲೈನ್‌ನಲ್ಲಿ ಪಾಠ
ಸರ್ಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರು ಎಂದು ಘೋಷಿಸಿದ್ದು, ಅದರಂತೆ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದರಲ್ಲಿ 4 ವಿದ್ಯಾರ್ಥಿನಿಯರು 625ಕ್ಕೆ 625 ಅಂಕ ಪಡೆದಿದ್ದಾರೆ. ಈ ಭಾರಿ ಉತ್ತಮ ಸಾಧನೆಗಾಗಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಪಾಠ ಪ್ರವಚನ, ಆನ್‌ ಲೈನ್‌ನಲ್ಲಿಯೇ ಎಸ್ಸೆಸ್ಸೆಲ್ಸಿ ಕಿರುಪರೀ ಕ್ಷೆಗಳನ್ನು ಮಾಡಲಾಗಿತ್ತು. ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನು
ಕೂಲವಾಗಲು ಬಿಆರ್‌ಡಿ ಜ್ಞಾನದೀಪ ಅಪ್ಲಿಕೇಷನ್‌ ನಲ್ಲಿ ಜಿಲ್ಲಾ ಪೂರಕ ಪ್ರಶ್ನೆ ಪತ್ರಿಕೆ, ಚಂದನ ವಾಹಿನಿಯ ಸಂವೇದ ತರಗತಿ,1ಅಂಕ ಮತ್ತು
2ಅಂಕ ಪ್ರಶ್ನೆ ಈ ಪಟ್ಟಿ ಮಾಡಿದ್ದರಿಂದ ಅನುಕೂಲವಾಗಿದೆ. ಎಲ್ಲರೂ ಉತ್ತೀರ್ಣರಾಗಿರುವುದರಿಂದ ಸಂತಸ ತಂದಿದೆ ಎಂದು ಸಾರ್ವಜನಿಕ
ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಗಂಗಮಾರೇಗೌಡ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next