ಮಣಿಪಾಲ: ಕೋವಿಡ್ ನಡುವೆಯೂ ದೇಶಾದ್ಯಂತ ಅನ್‌ಲಾಕ್ ಪ್ರಕ್ರಿಯೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿಯೇ ವಾಣಿಜ್ಯ ಕ್ಷೇತ್ರವೂ ಕೊಂಚ ಚೇತರಿಕೆ ಕಾಣುತ್ತಿದ್ದು, ದೇಶದಲ್ಲಿ ಪ್ರಯಾಣಿಕರ ವಾಹನಗಳ ಮಾರಾಟವು ಆಗಸ್ಟ್‌ನಲ್ಲಿ ಶೇ. 14.16ರಷ್ಟು ಏರಿಕೆಯಾಗಿ 2,15,916ಕ್ಕೆ ತಲುಪಿದೆ ಎಂದು ವರದಿಯೊಂದು ಹೇಳಿದೆ.
ಸೊಸೈಟಿ ಆಫ್ ಇಂಡಿಯನ್ ಆಟೋ ಮೊಬೈಲ್ ತಯಾರಕರ (ಸಿಯಾಮ್) ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.3ರಷ್ಟು ಏರಿಕೆಯಾಗಿ 15,59,665ಕ್ಕೆ ತಲುಪಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 15,14,196 ಯುನಿಟ್‌ಗಳಷ್ಟು ಮಾರಾಟವಾಗಿತ್ತು ಎಂದು ತಿಳಿಸಿದೆ.
ಕೋವಿಡ್ ಕಾರಣದಿಂದಾಗಿ 2020ರ ವಿತ್ತೀಯ ವರ್ಷದಲ್ಲಿ ಮೊದಲ 9 ತಿಂಗಳುಗಳಲ್ಲಿ ಪ್ರಯಾಣಿಕ ವಾಹನಗಳ ಮಾರಾಟವು ನಿರಂತರವಾಗಿ ಕುಸಿತ ಕಂಡಿದ್ದ ವಾಹನೋದ್ಯಮ ಅನ್‌ಲಾಕ್ ಪ್ರಕ್ರಿಯೆ ಬಳಿಕ ವ್ಯಾಪಾರ ವಹಿವಾಟು ಚಟುವಟಿಕೆಗಳು ಬಿರುಸುಗೊಂಡಿದ್ದು, ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ವಾಹನಗಳು ಮಾರಾಟವಾಗಿದೆ.
ಇನ್ನು ಪ್ರಯಾಣಿಕ ಕಾರುಗಳ ಮಾರಾಟ 1.24 ಲಕ್ಷ ಆಗಿತ್ತು. 2019ರ ಆಗಸ್ಟ್‌ನಲ್ಲಿ 1.09 ಲಕ್ಷ ಕಾರುಗಳು ಮಾರಾಟ ಆಗಿದ್ದವು. ಈ ಬಾರಿಯ ಆಗಸ್ಟ್‌ನಲ್ಲಿ ಮಾರಾಟವಾಗಿರುವ ಬಹುಉಪಯೋಗಿ ವಾಹನಗಳ ಸಂಖ್ಯೆ 81,842. ಹಿಂದಿನ ವರ್ಷದ ಆಗಸ್ಟ್‌ನಲ್ಲಿ ಈ ಬಗೆಯ ಒಟ್ಟು 70,837 ವಾಹನಗಳು ಮಾರಾಟವಾಗಿದ್ದವು.
ವ್ಯಾನ್‌ಗಳ ಮಾರಾಟದಲ್ಲಿ ಕೂಡ ಹೆಚ್ಚಳ ಕಂಡುಬಂದಿದ್ದು, ಹಿಂದಿನ ವರ್ಷದ ಆಗಸ್ಟ್‌ನಲ್ಲಿ ಒಟ್ಟು 9,015 ವ್ಯಾನ್‌ಗಳ ಮಾರಾಟ ಆಗಿತ್ತು. ಈ ಆಗಸ್ಟ್‌ನಲ್ಲಿ 9,359 ವ್ಯಾನ್‌ಗಳು ಮಾರಾಟವಾಗಿವೆ.
ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ 3ರಷ್ಟು ಹೆಚ್ಚಳ ಕಂಡುಬಂದಿದೆ. ಮೋಟರ್ ಸೈಕಲ್ ಮಾರಾಟವು 10,32,476 ಯುನಿಟ್ ಆಗಿದ್ದು, 2019ರ ಆಗÓr…ನಲ್ಲಿ 9,37,486 ಯುನಿಟ್‌ಗಳಿತ್ತು. ಹೀಗಾಗಿ ಶೇ.10.13ರಷ್ಟು ಏರಿಕೆಯಾಗಿದೆ. ಸ್ಕೂಟರ್ ಮಾರಾಟವು ಶೇ.12.3ರಷ್ಟು ಇಳಿಕೆಯಾಗಿ 4,56,848ಕ್ಕೆ ತಲುಪಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 5,20,898 ಯುನಿಟ್ ಮಾರಾಟವಾಗಿತ್ತು.