Advertisement

ಮಧ್ವಾಚಾರ್ಯರ ಜಾಗತಿಕ ಪರಿಕಲ್ಪನೆ

12:49 AM Jan 18, 2022 | Team Udayavani |

ಆಚಾರ್ಯ ಮಧ್ವರ ಸಿದ್ಧಾಂತವನ್ನು ಈಗ ದ್ವೆತ ಮತ ಎಂದು ಹೇಳುತ್ತಾರಾ ದರೂ ಇದರ ಪ್ರಾಚೀನ ಹೆಸರು ತಣ್ತೀವಾದ. ಏಕದೇವ: ದೇವನೊಬ್ಬನೇ ಎಂಬ ತಣ್ತೀ ಬಹು ಪ್ರಾಚೀನ. ವೈದಿಕ ಕ ವಾš¾ಯ “ಏಕೋದೇವಃ’ ಎಂದು ಹೇಳಿದೆ. ಆದ್ದರಿಂದ ಈಗ ಜನಸಾಮಾನ್ಯರ ಭಾಷೆಯಲ್ಲಿ ಹೇಳುವ ಅನೇಕಾ ನೇಕ ದೇವರುಗಳು ಸ್ವತಂತ್ರನಾದ ಭಗವಂತನ ಕಲ್ಪನೆಯಲ್ಲಿಲ್ಲ, ಹಾಗೆಂದು ಸರ್ವಥಾ ನಿರಾಕರಿಸುವಂತೆಯೂ ಇಲ್ಲ. ಅವ ರವರ ಸಾಮರ್ಥ್ಯ ಬೇರೆಯಷ್ಟೆ. ಸರ್ವತಂತ್ರ ಸ್ವತಂತ್ರನಾದ ಭಗವಂತನನ್ನು ಆಚಾರ್ಯ ಮಧ್ವರು ನಾರಾಯಣ ಎಂದರು. ವೇದಗಳೂ ಸಹಿತ ಎಲ್ಲ ಶಬ್ದಗಳೂ ಭಗವಂತನನ್ನೇ ಹೇಳುತ್ತವೆ, ಯಾವುದೇ ಭಾಷೆಯಲ್ಲಿ ಕರೆದರೂ ಅದು ಒಬ್ಬ ದೇವನಿಗೇ ಸಲ್ಲುತ್ತದೆ. ಈಗ ಪರಿಗಣಿಸುವ ನಾನಾ ದೇವರನ್ನು ದೇವತೆಗಳು ಎಂದು ಪರಿಗಣಿಸಲಾಗಿದೆ. ಇವರು ದೇವರನ್ನು ಸಾಕ್ಷಾತ್ಕರಿಸಿಕೊಂಡ ಉತ್ತಮ ಜೀವರು. ಹೀಗಾಗಿ ಭಗವಂತ ಬಿಂಬನೆನಿಸಿದರೆ ಜೀವರು ಪ್ರತಿಬಿಂಬ.

Advertisement

ಪ್ರಪಂಚದ ಬಂಧನ: ಜೀವರುಗಳು ಸದಾ ಪ್ರಾಪಂಚಿಕ ವ್ಯವಹಾರದಲ್ಲಿ ಮುಳುಗಿರುವುದನ್ನು ವ್ಯಾಪಕ ಅರ್ಥದಲ್ಲಿ ಸಂಸಾರ ಎಂದು ಕರೆ ಯಲಾಗಿದೆ. ಕೌಟುಂಬಿಕ ಅರ್ಥ ವಲ್ಲ. ಪ್ರಪಂಚದ ಬಂಧನದಿಂದ ಬಿಡು ಗಡೆಗೊಳ್ಳುವುದೇ ಜೀವರು ಗಳ ಪರಮಧ್ಯೇಯ.

ಪ್ರಪಂಚದ ಸೃಷ್ಟಿ: ಪಂಚಭೂತ- ತನ್ಮಾತ್ರೆ-ಕೋಶ-ಇಂದ್ರಿಯಗಳು ಈ ಐದರಿಂದಾಗಿ ಪ್ರ-ಪಂಚ ಎಂಬ ಹೆಸರು ಬಂತು. ಇದರಲ್ಲಿ ಐದು ರೂಪಗಳ ಪ್ರಾಣತಣ್ತೀಗಳೂ ಇವೆ. ಭಗವಂತ ನಿಯಂತ್ರಿಸುತ್ತಿದ್ದಾನೆ. ಪ್ರಪಂಚದಲ್ಲಿ ಜಡ-ಜಡ ಭೇದ, ಜಡ-ಜೀವರ ಭೇದ, ಜಡ-ಪರಮಾತ್ಮ ಭೇದ, ಜೀವ- ಜೀವರ ಭೇದ, ಜೀವ-ಪರಮಾತ್ಮ ಭೇದ. ಇದು ಪ್ರಕೃತಿ ನಿಯಮ, ಬದಲಾಯಿಸಲಾಗದು. ಒಬ್ಬನಂತೆ ಇನ್ನೊಬ್ಬ, ಮರದಂತೆ ಇನ್ನೊಂದು ಮರ, ಒಂದು ಎಲೆಯಂತೆ ಇನ್ನೊಂದು ಎಲೆ ಇರುವುದಿಲ್ಲ.

ಭಿನ್ನಭಿನ್ನ ಸ್ವಭಾವ: ಮನುಷ್ಯನೂ ಸೇರಿದಂತೆ ಎಲ್ಲ ಪ್ರಾಣಿಗಳ ಸ್ವಭಾವವೂ ಭಿನ್ನ ಭಿನ್ನ. ಅವರವರ ಸ್ವಭಾವಕ್ಕೆ ತಕ್ಕಂತೆ ಉದ್ಧಾರ ಸಾಧ್ಯ. ಆತನ ಬೆಳವಣಿಗೆಯೂ ಸ್ವಭಾವಕ್ಕೆ ತಕ್ಕಂತೆ, ವಾತಾವರಣ ಬೆಳವಣಿಗೆ ಮೇಲೆ ಪರಿಣಾಮ ಬೀರುವುದಾದರೂ ಒಳಗಿನ ಸ್ವಭಾವ ಪ್ರಧಾನ ಪಾತ್ರ ವಹಿಸುತ್ತದೆ. ಗೀತೆಯ ಚಾತುರ್ವಣ್ಯ ಪದ್ಧತಿ ವಿಷಯದಲ್ಲಿ ವರ್ಣವೇ ಬೇರೆ, ಜಾತಿಯೇ ಬೇರೆ ಎಂದು ತಿಳಿಸಿದ್ದಾರೆ. ಯಾವುದೇ ಜಾತಿಯಲ್ಲಿ ಸಾತ್ವಿಕ, ರಾಜಸ, ತಾಮಸ ಜನಿಸಬಹುದು ಮತ್ತು ಜಾತಿ ಆಧಾರದಲ್ಲಿ ಬದಲಾಗುವುದೂ ಇಲ್ಲ. ಸಾತ್ವಿಕ, ರಾಜಸ, ತಾಮಸ ಗುಣ ಗಳು ಜೀವರ ಇತಿಹಾಸಕ್ಕೆ (ಜನ್ಮಾಂತರ) ತಕ್ಕನಾಗಿ ಬರುತ್ತದೆ. ಮಧ್ವಾಚಾರ್ಯರು ಮೋಕ್ಷಾಪೇಕ್ಷಿಗಳು, ನಿತ್ಯ ಸಂಸಾರಿಗಳು, ನಿತ್ಯ ನಾರಕಿಗಳು ಎಂಬ ಜೀವತ್ತೈವಿಧ್ಯ ವರ್ಗೀಕರಣವನ್ನು ಹೇಳುವ ಮುನ್ನ ಜೈನಧರ್ಮದವರೂ ಜೀವ  ಹೇಳಿದ್ದರು. ಪ್ರಸಕ್ತ ಸಮಾಜವನ್ನು ಸೂಕ್ಷ್ಮ ದೃಷ್ಟಿಯಿಂದ ನೋಡಿದರೆ ತಿಳಿಯುತ್ತದೆ.ದಾಸತ್ವ, ಸೇವತ್ವ: ಭಗವಂತನ ಅಸ್ತಿತ್ವ, ಆತನ ಮಹಿಮೆಯನ್ನು ಜೀವರು ಸದಾ ಸ್ಮರಿಸಿಕೊಂಡು ದಾಸನಾಗಿ ಇರಬೇಕು, ಆತನಿಂದಲೇ ಸೃಷ್ಟಿಯಾದ ಪ್ರಪಂಚವನ್ನೂ ಅದೇ ರೀತಿ ಪ್ರೀತಿಸಬೇಕು. ಕರ್ತವ್ಯಕರ್ಮದಿಂದ ವಿಮುಖರಾಗಬಾರದು ಎಂಬ ಶ್ರೀಕೃಷ್ಣನ ಸಂದೇಶವಿದೆ. ದುಃಖಿತರು, ದೀನದಲಿತರಿಗೆ ನೆರ ವಾಗುವುದು ಜೀವರ ಆದ್ಯ ಕರ್ತವ್ಯ. ಇದೂ ಭಗವಂತನ ಪೂಜೆ.

ಎಲ್ಲೆಲ್ಲೂ ದೇವರು
ಜಗತ್ತು ಸತ್ಯವೋ-ಅಸತ್ಯವೋ? ಜಗತ್ತನ್ನು ನಾವು ನೋಡುತ್ತಿರುವುದರಿಂದ ಸತ್ಯ ಹೌದು. ಅಸತ್ಯವೆಂದರೆ ಸುಳ್ಳಾಗಿರದೆ, ಭಗವಂತನ ನೀತಿಯನುಸಾರ ನಡೆಯುವ ವ್ಯವಸ್ಥೆಯಲ್ಲಿದೆ. ಇದು ನಿತ್ಯವೂ ನಮಗೆ ಸಿಗುವುದಿಲ್ಲ ಎಂಬ ಅನಿತ್ಯ ಅರ್ಥವೂ ಇದೆ. ದೇವರನ್ನು ವಿಗ್ರಹದಲ್ಲಿ ಕಾಣುವುದೇ ವಿನಾ ವಿಗ್ರಹವೇ ದೇವರಲ್ಲ. ದೇವರು ಎಲ್ಲ ಕಡೆ ಇದ್ದಾನೆಂದಾದಾಗ ವಿಗ್ರಹದಲ್ಲಿರಲು ಸಾಧ್ಯವಿಲ್ಲವೆ? ಮಧ್ವರು ಹೀಗಾಗಿಯೇ ಬಾಲ್ಯದಲ್ಲಿಯೇ ಕಲ್ಲು, ಮಣ್ಣು, ಮರಗಳನ್ನೂ ಮುಟ್ಟಿ ನಮಸ್ಕರಿಸಿದ್ದರು. ಯಾರೂ ಕಾಣದಂತೆ ಬಾಳೆಹಣ್ಣನ್ನು ತಿನ್ನಲು ಕನಕದಾಸರಿಗೆ ಸಾಧ್ಯವಾಗದೆ ಹೋದದ್ದು ಇದೇ ಕಾರಣಕ್ಕಾಗಿ.. ದೇವರಿಗೆ ಕಾಣದಂತೆ ಏನನ್ನಾದರೂ ಮಾಡಲು ಸಾಧ್ಯವೆ? ಆಧುನಿಕರು ಬಳಸುವ ಪದ “ಅಂತಃಸಾಕ್ಷಿ’ ಇದೇ. ಇದುವೇ ಸಾಕ್ಷೀಪ್ರಜ್ಞೆ ಎಂದು ಪೇಜಾವರ ಶ್ರೀಗಳು ಹೇಳುತ್ತಿದ್ದರು.
ಪ್ರತಿಮಾ ಉಪಾಸನೆ ಪ್ರಾಥಮಿಕ ಸ್ತರದ್ದು, ಅಂತರ್‌ ಉಪಾಸನೆ (ತನ್ನೊಳಗಿನ ದೇವರ ಉಪಾಸನೆ, ಭಗವಂತನನ್ನು ತೃಪ್ತಿಪಡಿಸಲು ಪ್ರಾಮಾಣಿಕ ಜೀವನ ಮಾಡಬೇಕು), ಅನಂತರದ ಎಲ್ಲರೊಳಗೆ ಇರುವ ಭಗವಂತನ ಆರಾಧನೆ ವ್ಯಾಪ್ತೋಪಾಸನೆ ಅತಿ ಎತ್ತರದ್ದು ಎನ್ನುತ್ತಾರೆ ಭಾವೀ ಪರ್ಯಾಯ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next