Advertisement

’90 ಹಾಕು ಕಿಟ್ಟಪ್ಪ…’; ಬಂತು ಹೊಸ ಪಾರ್ಟಿ ಸಾಂಗ್

06:37 PM Jul 24, 2023 | Team Udayavani |

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಬಂದ “ಎಣ್ಣೆ..’ ಸಾಂಗ್‌ಗಳು ಭರ್ಜರಿ ಹಿಟ್‌ ಆಗಿವೆ. ಈಗ ಹೊಸದೊಂದು “ಎಣ್ಣೆ…’ಸಾಂಗ್‌ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಅದು “ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಿಂದ.

Advertisement

ಹೌದು, ಶಶಾಂಕ್‌ ನಿರ್ದೇಶನದ “ಕೌಸಲ್ಯ ಸುಪ್ರಜಾ ರಾಮ’ ಚಿತ್ರ ಈ ವಾರ (ಜು.28) ರಂದು ತೆರೆಕಾಣುತ್ತಿದೆ. ಈಗ ಚಿತ್ರದ ಪಾರ್ಟಿ ಸಾಂಗ್‌ವೊಂದು ಬಿಡುಗಡೆಯಾಗಿದ್ದು, ಸಖತ್‌ ಸದ್ದು ಮಾಡುತ್ತಿದೆ. “90 ಹಾಕು ಕಿಟ್ಟಪ್ಪ, ನೈಟ್‌ ಇನ್ನೂ ಐತಪ್ಪಾ…’ ಎಂಬ ಹಾಡು ಬಿಡುಗಡೆಯಾಗಿ ಹಿಟ್‌ಲಿಸ್ಟ್‌ ಸೇರಿದೆ. ಈ ಹಾಡಿನಲ್ಲಿ ಮಿಲನಾ ನಾಗರಾಜ್‌ ಹೆಜ್ಜೆ ಹಾಕಿದ್ದಾರೆ. ಶಶಾಂಕ್‌ ಬರೆದಿರುವ ಈ ಹಾಡನ್ನು ಐಶ್ವರ್ಯಾ ರಂಗರಾಜನ್‌ ಹಾಡಿದ್ದಾರೆ.

ಇನ್ನು, ಈ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಶಶಾಂಕ್‌, “ನಾನು ಇದುವರೆಗೆ ಮಾಡಿರುವ ಸಿನಿಮಾಗಳಲ್ಲಿ ಇದು ಬೆಸ್ಟ್‌ ಸಿನಿಮಾ’ ಎನ್ನುವ ಶಶಾಂಕ್‌ “ಕೌಸಲ್ಯ’ ಬಗ್ಗೆ ಹೇಳಿದ್ದಿಷ್ಟು, “ಈ ಕಥೆಗೆ ಯಾವುದೋ ಒಂದು ಆಯಾಮವಿಲ್ಲ, ಹಲವು ಆಯಾಮಗಳಿವೆ. ಈ ತರಹದ ಕಥೆ ಸಿಗೋದು ಕಷ್ಟ. ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಬಹುದು ಎಂಬ ನಿರೀಕ್ಷೆ ಇದೆ. ಸಿನಿಮಾ ನೋಡುವ ಪ್ರತಿಯೊಬ್ಬರಿಗೂ ಕಥೆ ಕನೆಕ್ಟ್ ಆಗುತ್ತದೆ. ಪ್ರತಿಯೊಬ್ಬರೂ ಚಿತ್ರದಲ್ಲಿನ ಯಾವುದಾದರೊಂದು ಪಾತ್ರದ ಜೊತೆಗೆ ರಿಲೇಟ್‌ ಮಾಡಿ ಕೊಳ್ಳಬಹುದು. ಕೃಷ್ಣ ಅವರನ್ನು ಬೇರೆ ತರಹ ತೋರಿಸುವ ಪ್ರಯತ್ನ ಮಾಡಿದ್ದೇನೆ’ ಎನ್ನುತ್ತಾರೆ.

“ಕೌಸಲ್ಯ ಸುಪ್ರಜಾ ರಾಮ’ ಚಿತ್ರವನ್ನು ಶಶಾಂಕ್‌ ಸಿನಿಮಾಸ್‌ ಮತ್ತು ಕೌರವ ಪಿಕ್ಚರ್‌ ಹೌಸ್‌ ಮೂಲಕ ಶಶಾಂಕ್‌ ಹಾಗೂ ಬಿ.ಸಿ. ಪಾಟೀಲ್‌ ಜಂಟಿಯಾಗಿ ನಿರ್ಮಿಸಿದ್ದಾರೆ.

ಇನ್ನು, ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಶಶಾಂಕ್‌ ಅವರೇ ಬರೆದಿದ್ದಾರೆ. ಕೃಷ್ಣಗೆ ನಾಯಕಿಯಾಗಿ ಬೃಂದಾ ಆಚಾರ್ಯ ನಟಿಸಿದ್ದು, ಮಿಕ್ಕಂತೆ ಸುಧಾ ಬೆಳವಾಡಿ, ರಂಗಾಯಣ ರಘು, ಅಚ್ಯುತ್‌ ಕುಮಾರ್‌, ನಾಗಭೂಷಣ್‌, ಮಿಲನಾ ನಾಗರಾಜ್‌ ಮುಂತಾದವರು ನಟಿಸಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ಈ ಚಿತ್ರಕ್ಕಿದೆ. ಈ ಚಿತ್ರವನ್ನು ಕೆವಿಎನ್‌ ಪ್ರೊಡಕ್ಷನ್ಸ್‌ ಸಂಸ್ಥೆ ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next