Advertisement

ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಪಕ್ಷದಲ್ಲಿ ಅವಕಾಶವಿದೆ: ಕಾಂಗ್ರೆಸ್

02:08 PM Sep 05, 2022 | Team Udayavani |

ನವದೆಹಲಿ: ”ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಪಕ್ಷದ ನಾಯಕರಿಗೆ ಅವಕಾಶ ಮಾಡಿಕೊಟ್ಟಿದ್ದು, ಇದು ಒಂದು ಏಕೀಕೃತ ಮತ್ತು ಪ್ರಜಾಸತ್ತಾತ್ಮಕ ಪಕ್ಷ” ಎಂದು ಕಾಂಗ್ರೆಸ್ ಸೋಮವಾರ ಪ್ರತಿಪಾದಿಸಿದೆ.

Advertisement

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅವರು ಪಕ್ಷ ತೊರೆದ ಬಳಿಕ ಬಿಜೆಪಿ ವಾಗ್ದಾಳಿ ಮತ್ತು ಟೀಕೆಗಳನ್ನು ತಿರಸ್ಕರಿಸುವ ಮೂಲಕ ಈ ಪ್ರತಿಕ್ರಿಯೆಯು ಬಂದಿದ್ದು,ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂವಹನ ಉಸ್ತುವಾರಿ ಜೈರಾಮ್ ರಮೇಶ್, ”ಪಕ್ಷವು ಪ್ರಬಲವಾಗಿದೆ ಮತ್ತು ಒಗ್ಗಟ್ಟಾಗಿದೆ” ಎಂದಿದ್ದಾರೆ.

“ಕಾಂಗ್ರೆಸ್‌ನಲ್ಲಿ ಅತೃಪ್ತರು ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ಆದರೆ ಇಂದು ಪಕ್ಷವು ಒಗ್ಗಟ್ಟಾಗಿದೆ ಎಂದು ನಾನು ಭಾವಿಸುತ್ತೇನೆ. ನಿನ್ನೆ ರ್ಯಾಲಿ ಅತ್ಯಂತ ಯಶಸ್ವಿಯಾಗಿದೆ ಮತ್ತು ಪ್ರತಿಯೊಬ್ಬ ಕಾರ್ಯಕರ್ತರು ಬದ್ಧರಾಗಿದ್ದಾರೆ, ಉತ್ಸಾಹ, ಶಕ್ತಿ ಇದೆ ಮತ್ತು ಭಾರತ್ ಜೋಡೋವನ್ನು ಕೈಗೊಳ್ಳುವುದು ನಮ್ಮ ಏಕೈಕ ಗುರಿಯಾಗಿದೆ’’ ಎಂದು ರಮೇಶ್ ಸುದ್ದಿಗಾರರಿಗೆ ತಿಳಿಸಿದರು.

“ಕಾಂಗ್ರೆಸ್ ಒಂದು ದೊಡ್ಡ ಕುಟುಂಬ ಮತ್ತು ವಿಭಿನ್ನ ದೃಷ್ಟಿಕೋನಗಳ ಜನರಿದ್ದಾರೆ. ನಮ್ಮದು ಪ್ರಜಾಪ್ರಭುತ್ವ ಪಕ್ಷ, ಜನರು ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ಬಿತ್ತರಿಸುತ್ತಾರೆ. ಕೆಲವರು ಪತ್ರಗಳನ್ನು ಬರೆಯುತ್ತಾರೆ, ಕೆಲವರು ಟ್ವೀಟ್ ಮಾಡುತ್ತಾರೆ, ಕೆಲವರು ಸಂದರ್ಶನ ನೀಡುತ್ತಾರೆ. ಇದು ಪ್ರಜಾಪ್ರಭುತ್ವವನ್ನು ತೋರಿಸುತ್ತದೆ. ಸರ್ವಾಧಿಕಾರವಿಲ್ಲ. ನಮ್ಮ ಪಕ್ಷದಲ್ಲಿ ನಾವು ಯಾರ ಬಾಯಿಯನ್ನೂ ಮುಚ್ಚುವುದಿಲ್ಲ” ಎಂದು ರಮೇಶ್ ಹೇಳಿದರು.

ನಾಯಕರ ಕಳವಳವನ್ನು ಶಮನಗೊಳಿಸಲು ಪ್ರಯತ್ನಗಳನ್ನು ಮಾಡಲಾಗುತ್ತದೆ ಎಂದು ಅವರು ಹೇಳಿದರು “ಆದರೆ ಕೆಲವರು ಅದನ್ನು ಬಿಟ್ಟುಬಿಡುತ್ತಾರೆ, ನಿಂದನೆಗಳನ್ನು ಮಾಡುತ್ತಾರೆ. ನಾನು ಅವರ ಬಗ್ಗೆ ಏನನ್ನೂ ಹೇಳಲು ಬಯಸುವುದಿಲ್ಲ, ನಾನು ಈಗಾಗಲೇ ಅವರ ಬಗ್ಗೆ ಮಾತನಾಡಿದ್ದೇನೆ” ಎಂದು ಆಜಾದ್ ಅವರನ್ನು ಉಲ್ಲೇಖಿಸಿ ಹೇಳಿದರು.

Advertisement

‘ಕಾಂಗ್ರೆಸ್ ಜೋಡೋ’ ನಮ್ಮ ಆದ್ಯತೆಯಾಗಬೇಕು ಎಂದು ಹೇಳುವುದು ತಪ್ಪು, ನಮಗೆ ದೇಶವನ್ನು ಒಗ್ಗೂಡಿಸುವ ಆದ್ಯತೆಯಾಗಿದೆ ಎಂದು ಅವರು ಪ್ರತಿಪಾದಿಸಿದರು.

ಆಜಾದ್ ಅವರು “ಭಾರತ್ ಜೋಡೋ” ಗಿಂತ ಮೊದಲು ಪಕ್ಷವು “ಕಾಂಗ್ರೆಸ್ ಜೋಡೋ” ಅನ್ನು ಕೈಗೊಳ್ಳಬೇಕು ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next