ಉಡುಪಿ: ಜಿಲ್ಲೆಯ ಯುವ ಕರಲ್ಲಿ ಸೇನೆಗೆ ಸೇರುವ ಆಸಕ್ತಿ ಬಹಳ ಕಡಿಮೆ ಇರುವುದು ಕಂಡುಬರುತ್ತಿದೆ. ಯುವಕರು ಸೇನಾ ನೇಮಕಾತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳಲು ಉತ್ಸಾಹ ತೋರಬೇಕು ಎಂದು ಮಂಗಳೂರು ಸೇನಾ ನೇಮಕಾತಿಯ ನಿರ್ದೇಶಕ ಕರ್ನಲ್ ಎಫ್.ಪಿ. ದುಬಾಶ್ ಯುವಕರಿಗೆ ಕರೆ ನೀಡಿದರು.
ಅವರು ಸೋಮವಾರ ಡಾ| ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತ ಕೋತ್ತರ ಅಧ್ಯಯನ ಕೇಂದ್ರದಲ್ಲಿ, ಜಿಲ್ಲಾಡಳಿತ ಮತ್ತು ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಡೆದ ಸೇನಾ ನೇಮಕಾತಿ ರ‌್ಯಾಲಿ ಕುರಿತು ಮಾರ್ಗದರ್ಶನ ನೀಡಿ, ಮಾತನಾಡಿದರು.
ಮೇ ತಿಂಗಳಲ್ಲಿ ಕಣ್ಣೂರು, ಸೆಪ್ಟಂಬರ್‌ನಲ್ಲಿ ಬೆಂಗಳೂರು, ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ತ್ರಿವೆಂಡ್ರಮ್‌ನಲ್ಲಿ ಸೇನಾ ನೇಮಕಾತಿ ರ‌್ಯಾಲಿಯನ್ನು ಆಯೋಜಿಸಲಾಗುತ್ತಿದೆ. ಉಡುಪಿ ಯಲ್ಲಿ ಸೇನಾ ನೇಮಕಾತಿ ರ್ಯಾಲಿ ಮುಂದಿನ ವರ್ಷ ಜನವರಿಯಲ್ಲಿ ನಡೆಯುತ್ತದೆ. ಜಿಲ್ಲೆಯಲ್ಲಿ ಎಪ್ರಿಲ್ ತಿಂಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಸೇನಾ ನೇಮಕಾತಿ ರ‌್ಯಾಲಿ ರದ್ದುಗೊಂಡಿದ್ದರೂ, ಈಗಾಗಲೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಅರ್ಜಿಯನ್ನು ಜನವರಿ 2021ರ ಸೇನಾ ರ್ಯಾಲಿಯಲ್ಲಿ ಪರಿಗಣಿಸಲಾಗುತ್ತದೆ ಎಂದರು.
ಸೇನೆಗೆ ಸೇರಿ ದೇಶ ಸೇವೆ ಮಾಡುವುದು ಗೌರವದ ವಿಚಾರ. ಸೇನೆಯಲ್ಲಿ ತರಬೇತಿ ಅವಧಿಯಲ್ಲಿ 38 ಸಾವಿರ ರೂ. ಗೌರವಧನ ನೀಡಲಾಗುತ್ತದೆ. ಕೆಲಸದ ಭದ್ರತೆ ಜತೆಗೆ ಜೀವನ ಮಟ್ಟ ಸುಧಾರಿಸುತ್ತದೆ. ಯುವಕರು ಸೇನಾ ನೇಮಕಾತಿ ರ‌್ಯಾಲಿಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಾಗಬೇಕು ಎಂದರು.
ಸೇನಾ ನೇಮಕಾತಿ ರ‌್ಯಾಲಿ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದ ಅಧಿಕಾರಿ ಸೇನಾ ರ‌್ಯಾಲಿಯಲ್ಲಿ ವಯೋಮಿತಿ 17ರಿಂದ 23 ವರ್ಷ ಒಳಗಿನ ಅವಿವಾಹಿತ ಯುವಕರಿಗೆ ಸೋಲ್ಜರ್ ಜನರಲ್ ಡ್ನೂಟಿ (ಆಲ್‌ಆಮ್ಸ್ì),ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ಟೆಕ್ ನರ್ಸಿಂಗ್ ಅಸಿಸ್ಟೆಂಟ್/ ಸೋಲ್ಜರ್ ನರ್ಸಿಂಗ್ ಸಹಾಯಕ, ಸೋಲ್ಜರ್ ಕ್ಲರ್ಕ್, ಸ್ಟೋರ್ ಕೀಪರ್ ಟೆಕ್ನಿಕಲ್ ,10ನೇ ತರಗತಿ ಪಾಸ್ ಆದ ವರಿಗೆ ಸೋಲ್ಜರ್ ಟ್ರೇಡ್ಸನ್ ಮತ್ತು 8ನೇ ತರಗತಿ ಪಾಸ್ ಆದವರಿಗೆ ಸೋಲ್ಜರ್ ಟೇಡ್ನನ್ ಹುದ್ದೆಗಳು ಇರುತ್ತವೆ ಎಂದರು. ಸೇನಾ ರ್ಯಾಲಿಯಲ್ಲಿ ಪ್ರಮುಖವಾಗಿ ಅಭ್ಯರ್ಥಿಯು 1600 ಮೀ.ಯನ್ನು 5 ನಿಮಿಷ 30 ಸೆಕೆಂಡ್‌ನಿಂದ 5 ನಿಮಿಷ 45 ಸೆಕೆಂಡ್ಸ್‌ನಲ್ಲಿ ಮುಗಿಸಬೇಕಾಗಿದ್ದು, ಈ ಪರೀಕ್ಷೆ ಪಾಸಾದವರು ಮಾತ್ರ ಕ್ರಮವಾಗಿ 60 ಹಾಗೂ 48 ಅಂಕಗಳನ್ನು ಪಡೆದು ಮುಂದಿನ ಸುತ್ತಿಗೆ ಅರ್ಹತೆ ಪಡೆಯುತ್ತಾರೆ ಹಾಗೂ ಹೆಚ್ಚುವರಿ ಬೋನಸ್ ಅಂಕವಾಗಿ 2 ವರ್ಷಗಳಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಕನಿಷ್ಠ ರಾಜ್ಯ ಮಟ್ಟದಲ್ಲಿ ಪ್ರಥಮ ಅಥವಾ ದ್ವಿತೀಯ ಸ್ಥಾನ ಗಳಿಸಿದ ಹಾಗೂ ಎನ್‌ಸಿಸಿ ಸರ್ಟಿಫಿಕೆಟ್ ಪಡೆದ ಅಭ್ಯರ್ಥಿಗಳು ದಾಖಲೆಯನ್ನು ಪರಿಗಣಿಸಲಾಗುತ್ತದೆ. ಅಭ್ಯರ್ಥಿಗಳು ಪರೀಕ್ಷಾ ವೇಳೆ ಸೂಕ್ತ ದಾಖಲೆ ಹಾಜರುಪಡಿಸುವಂತೆ ತಿಳಿಸಿದರು. ರ್ಯಾಲಿಯಲ್ಲಿ ಭಾಗವಹಿಸಲು ಅಡ್ಮಿಟ್ ಕಾರ್ಡ್ ಕಡ್ಡಾಯವಾಗಿದ್ದು, ಮುಂದಿನ ದಿನಗಳಲ್ಲಿ ಇ-ಮೈಲ್ ಮೂಲಕ ಅಡ್ಮಿಟ್ ಕಾರ್ಡ್ ನ್ನು ಎಲ್ಲ ಅಭ್ಯರ್ಥಿಗಳಿಗೆ ಕಳುಹಿಸಲಾಗುವುದು ಎಂದರು.
ಡಾ| ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಹಾಗೂ ಸ್ನಾತಕೋತ್ತರ ಪದವಿ ಕಾಲೇಜಿನ ಮುಖ್ಯೋಪಾಧ್ಯಾಯ ಡಾ|ಭಾಸ್ಕರ್ ಶೆಟ್ಟಿ, ಕಾಲೇಜಿನ ಪೊ›| ಉಮೇಶ್ ಮಯ್ಯ ಉಪಸ್ಥಿತರಿದ್ದರು. ಉಪನ್ಯಾಸಕ ರಾಜೇಂದ್ರ ಸ್ವಾಗತಿಸಿದರು. ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ ವಂದಿಸಿದರು.
ಅಭ್ಯಾಸ ನಡೆಸಲು ಅವಕಾಶವಿದೆ
ಜಿಲ್ಲೆಯಲ್ಲಿ ರ್ಯಾಲಿ ಮುಂದೂಡಿರುವುದ ರಿಂದಾಗಿ ಅಭ್ಯಾಸ ನಡೆಸಲು ಹೆಚ್ಚಿನ ಅವಕಾಶ ದೊರಕಿದೆ. ಇಂದಿನಿಂದಲೇ ರ್ಯಾಲಿಗೆ ಪೂರಕವಾದ ಅಭ್ಯಾಸಗಳನ್ನು ಮಾಡಿ
ಕೊಳ್ಳುವಂತೆ ಅವರು ಸಲಹೆ ನೀಡಿದರು.