Advertisement

Letter; ಸೋನಿಯಾ ಗಾಂಧಿ ಪತ್ರಕ್ಕೆ ತಿರುಗೇಟು ನೀಡಿದ ಸಚಿವ ಜೋಶಿ

07:44 PM Sep 06, 2023 | Team Udayavani |

ಹೊಸದಿಲ್ಲಿ:ಸೆಪ್ಟೆಂಬರ್ 18 ರಿಂದ 22 ರ ವರೆಗೆ  ನಿಗದಿಯಾಗಿರುವ ಸಂಸತ್ತಿನ ವಿಶೇಷ ಅಧಿವೇಶನವು ನಿಯಮಗಳು ಮತ್ತು ನಿಬಂಧನೆಗಳಿಗೆ ವಿರುದ್ಧವಾಗಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದು, ಸೋನಿಯಾ ಗಾಂಧಿ ಅವರು ಈ ವಿಷಯದ ಬಗ್ಗೆ ವಿವಾದವನ್ನು ಸೃಷ್ಟಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

Advertisement

‘ನಮ್ಮ ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ತಿನ ಮೇಲೆ ನೀವು ರಾಜಕೀಯ ಮಾಡಲು ಮತ್ತು ಅನಗತ್ಯ ವಿವಾದವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವುದು ದುರದೃಷ್ಟಕರ’ ಎಂದು ಜೋಶಿ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ : Parliament special session: ಪ್ರಧಾನಿ ಮೋದಿಗೆ ಪತ್ರ ಬರೆದ ಸೋನಿಯಾ ಗಾಂಧಿ

ವಿಶೇಷ ಅಧಿವೇಶನದ ಅಜೆಂಡಾ ಮತ್ತು ಬೆಲೆ ಏರಿಕೆ, ನಿರುದ್ಯೋಗ, ಅದಾನಿ ಗ್ರೂಪ್ ವಿವಾದ, ಮಣಿಪುರ ಹಿಂಸಾಚಾರ, ಭಾರತ-ಚೀನಾ ಗಡಿ ವಿವಾದ ಜಾತಿ ಗಣತಿ ಸೇರಿದಂತೆ ಒಂಬತ್ತು ವಿಷಯಗಳ ಕುರಿತು ಚರ್ಚೆಗೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋನಿಯಾ ಗಾಂಧಿ ಅವರು ಬರೆದ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಸಚಿವ ಜೋಶಿ ಖಾರವಾಗಿ ಉತ್ತರ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next