Advertisement

ತೆರಿಗೆ ಮುಕ್ತ ಗ್ರ್ಯಾಚುಯಿಟಿ 20 ಲಕ್ಷಕೇರಿಸುವ ಮಸೂದೆ ಪಾಸು

03:37 PM Mar 22, 2018 | udayavani editorial |

ಹೊಸದಿಲ್ಲಿ : ತೆರಿಗೆ ಮುಕ್ತ ಗ್ರ್ಯಾಚುಯಿಟಿ ಮೊತ್ತವನ್ನು ಈಗಿನ 10 ಲಕ್ಷ ರೂ.ಗಳಿಂದ 20 ಲಕ್ಷ ರೂ. ಗಳಿಗೆ ಏರಿಸಲು ಸರಕಾರಕ್ಕೆ ಅಧಿಕಾರ ನೀಡುವ ಪ್ರಮುಖ ಮಸೂದೆಯನ್ನು ಸಂಸತ್ತು ಇಂದು ಗುರುವಾರ ಪಾಸು ಮಾಡಿತು.

Advertisement

ಇದೇ ಮಸೂದೆಯಡಿ ಕಾರ್ಯಾಂಗದ ಆದೇಶದ ಮೂಲಕ ಹೆರಿಗೆ ರಜೆ ಅವಧಿಯನ್ನು ಪರಿಷ್ಕರಿಸುವ ಅಧಿಕಾರ ಸರಕಾರಕ್ಕೆ  ಪ್ರಾಪ್ತವಾಗಲಿದೆ. 

7ನೇ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನದ ಬಳಿಕ ಕೇಂದ್ರ ಸರಕಾರಿ ನೌಕರರ ತೆರಿಗೆ ಮುಕ್ತ ಗ್ರ್ಯಾಚುಯಿಟಿ  ಮೊತ್ತವನ್ನು 20 ಲಕ್ಷ ರೂ.ಗೆ ಏರಿಸಲಾಗಿತ್ತು. 

ಕಳೆದ ಹದಿನೈದು ದಿನಗಳಿಂದ ವಿವಿಧ ಪಕ್ಷಗಳು ವಿವಿಧ ಕಾರಣಗಳಿಗಾಗಿ ಸದನ ಕಲಾಪವನ್ನು ತಡೆಹಿಡಿದಿರುವ ಕಾರಣ ಇಂದು ಗ್ರ್ಯಾಚುಯಿಟಿ ಪಾವತಿ ತಿದ್ದುಪಡಿ ಮಸೂದೆಯನ್ನು ಯಾವುದೇ ಚರ್ಚೆಯಿಲ್ಲದೆ ಪಾಸು ಮಾಡಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next