Advertisement

ಬಜೆಟ್‌ ಅಧಿವೇಶನ ಇಂದೇ ಮುಕ್ತಾಯ? ಉದ್ದೇಶಿಸಿದ್ದ ಮಸೂದೆಗಳಿಗೆಲ್ಲ ಅನುಮೋದನೆ

02:47 AM Apr 07, 2022 | Team Udayavani |

ಹೊಸದಿಲ್ಲಿ: ಸಂಸತ್‌ನ ಬಜೆಟ್‌ ಅಧಿವೇಶನ ಶುಕ್ರವಾರ (ಎ.8)ರ ಬದಲಾಗಿ ಗುರುವಾರ (ಎ.7)ವೇ ಮುಕ್ತಾಯವಾಗುವ ಸಾಧ್ಯತೆ ಇದೆ.

Advertisement

ಜ.31ರಂದು ಅಧಿವೇಶನ ಶುರುವಾಗಿತ್ತು. ಒಂದು ದಿನ ಮೊದಲೇ ಅಧಿವೇಶನ ಮುಂದೂಡುವ ಬಗ್ಗೆ ವಿವಿಧ ಪಕ್ಷಗಳ ಸದನ ನಾಯಕರ ಜತೆಗೆ ಲೋಕಸಭೆ ಮತ್ತು ರಾಜ್ಯಸಭೆ ಕಾರ್ಯಾಲಯಗಳ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ.

ಮುಂಗಾರು ಅಧಿವೇಶನದ ವೇಳೆಯೂ ಅವಧಿಗಿಂತ ಮುನ್ನವೇ ಮುಂದೂಡಿಕೆಯಾಗಿತ್ತು. ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಸಹಮತ ಮೂಡಿದ್ದರಿಂದ ಉದ್ದೇಶಿತ ಮಸೂದೆಗಳಿಗೆಲ್ಲ ಅನುಮೋದನೆ ಪಡೆದುಕೊಳ್ಳಲಾಗಿದೆ.

ಮಸೂದೆಗೆ ಅನುಮೋದನೆ: ಸಮೂಹ ವಿನಾಶಕ ಶಸ್ತ್ರಾಸ್ತ್ರಗಳಿಗೆ ವಿತ್ತೀಯ ನೆರವಿಗೆ ತಡೆ ನೀಡುವ ಮಸೂದೆಗೆ ಲೋಕಸಭೆಯಲ್ಲಿ ಸರ್ವಾನುಮತದಿಂದ ಅನುಮೋದನೆ ನೀಡಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಮಸೂದೆ ಅಂಗೀಕಾರದಿಂದ ದೇಶದ ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಸರಕಾರದ ನಿಲುವಿಗೆ ಮತ್ತಷ್ಟು ಸಮರ್ಥನೆ ದೊರೆತಿದೆ ಎಂದು ಹೇಳಿದ್ದಾರೆ.

ಜತೆಗೆ ಸಮೂಹ ವಿನಾಶಕ ಶಸ್ತ್ರಾಸ್ತ್ರಗಳ ವಿರುದ್ಧ ಭಾರತ ಹೊಂದಿರುವ ನಿಲುವಿಗೂ ಜಗತ್ತಿನಲ್ಲಿ ಬೆಂಬಲ ಸಿಗಲಿದೆ ಎಂದಿದ್ದಾರೆ.

Advertisement

ಇದನ್ನೂ ಓದಿ:ರಾಜ್ಯದ 75 ಕೆರೆ ಕಟ್ಟೆಗಳನ್ನು ಅಭಿವೃದ್ಧಿಗೊಳಿಸಲು ಪ್ರಧಾನಿ ಸೂಚನೆ: ಸಿಎಂ

1.2 ಲಕ್ಷ ಟವರ್‌: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಶೀಘ್ರವೇ 4ಜಿ ತಂತ್ರಜ್ಞಾನ ಜಾರಿಗೊಳಿಸಲಿದೆ. ಗ್ರಾಹಕರ ಅನುಕೂಲಕ್ಕಾಗಿ 1.12 ಲಕ್ಷ ಮೊಬೈಲ್‌ ಟವರ್‌ಗಳನ್ನು ಸ್ಥಾಪಿಸಲಿದೆ ಎಂದು ದೂರಸಂಪರ್ಕ ಸಚಿವ ಅಶ್ವಿ‌ನಿ ವೈಷ್ಣವ್‌ ಲೋಕಸಭೆಗೆ ತಿಳಿಸಿದ್ದಾರೆ.

14 ಹಿಂದೂಗಳ ಹತ್ಯೆ: ಜಮ್ಮು ಮತ್ತು ಕಾಶ್ಮೀರದಲ್ಲಿ 2019ರಿಂದ ಈಚೆಗೆ ಭಯೋತ್ಪಾದಕರಿಂದ ನಾಲ್ವರು ಕಾಶ್ಮೀರಿ ಪಂಡಿತರೂ ಸೇರಿದಂತೆ 14 ಮಂದಿ ಹಿಂದೂಗಳು ಕೊಲ್ಲಲ್ಪಟ್ಟಿದ್ದಾರೆ ಎಂದು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್‌ ರಾಜ್ಯಸಭೆಗೆ ತಿಳಿಸಿದ್ದಾರೆ.

ವಿಶೇಷ ಸ್ಥಾನಮಾನ ವಾಪಸ್‌ ಬಳಿಕದ ಪರಿಸ್ಥಿತಿಯಲ್ಲಿ 87 ಮಂದಿ ನಾಗರಿಕರು ಮತ್ತು 99 ಮಂದಿ ಭದ್ರತಾ ಸಿಬಂದಿ ಅಸುನೀಗಿದ್ದಾರೆ ಎಂದರು ರಾಯ್‌.

Advertisement

Udayavani is now on Telegram. Click here to join our channel and stay updated with the latest news.

Next