ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಬಹಳ ಬೇಗನೇ ನಿರ್ಗಮಿಸಿದ ಕನ್ನಡಿಗ ರೋಹನ್ ಬೋಪಣ್ಣ ತಮ್ಮ 22 ವರ್ಷಗಳ ಟೆನಿಸ್ ಬದುಕಿಗೆ ಗುಡ್‌ಬೈ ಹೇಳಿದರು.
ರೋಹನ್ ಬೋಪಣ್ಣ-ಎನ್. ಶ್ರೀರಾಮ್ ಬಾಲಾಜಿ ರವಿವಾರ ತಡರಾತ್ರಿ ನಡೆದ ಪುರುಷರ ಡಬಲ್ಸ್ ಪಂದ್ಯದ ಮೊದಲ ಸುತ್ತಿನಲ್ಲೇ ಸೋಲಿನ ಆಘಾತಕ್ಕೆ ಸಿಲುಕಿದರು. ಆತಿಥೇಯ ಫ್ರಾನ್ಸ್‌ನ ಎಡ್ವರ್ಡ್ ರೋಜರ್ ವಸೆಲಿನ್-ಗೇಲ್ ಮಾನ್‌ಫಿಲ್ಸ್ ಭಾರತೀಯ ಜೋಡಿಯನ್ನು ಪರಾಭವಗೊಳಿಸಿದರು.
“ನಾನು ಎರಡು ದಶಕಗಳ ಕಾಲ ಭಾರತವನ್ನು ಪ್ರತಿನಿಧಿ ಸುತ್ತೇನೆಂದು ಭಾವಿಸಿದವನೇ ಅಲ್ಲ. ಇದೊಂದು ಹೆಮ್ಮೆಯ ಸಂಗತಿ. ಪ್ಯಾರಿಸ್‌ನಲ್ಲಿ ಕೊನೆಯ ಸಲ ದೇಶವನ್ನು ಪ್ರತಿನಿಧಿಸಿ ನಿರ್ಗಮಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ ಎಂಬು ದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ. ಆಟ ಗಾರನಲ್ಲದ ಹೊರತಾಗಿಯೂ ಟೆನಿಸ್ ಜತೆಗಿನ ನನ್ನ ನಂಟು ಮುಂದುವರಿಯಲಿದೆ’ ಎಂದು ಬೋಪಣ್ಣ ಹೇಳಿದರು.