Advertisement

Gossip; AAP ಸಂಸದ ರಾಘವ್ ಛಡ್ಡಾ ಜೊತೆ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಡೇಟಿಂಗ್!

02:44 PM Mar 25, 2023 | Team Udayavani |

ಮುಂಬೈ: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಛಡ್ಡಾ ಜೊತೆ ಡೇಟಿಂಗ್ ಮಾಡುತ್ತಿರುವುದಾಗಿ ಸುದ್ದಿ ಹರಿದಾಡತೊಡಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಮುಂಬೈನ ಪ್ರತಿಷ್ಠಿತ ಹೊಟೇಲ್ ವೊಂದರ ಹೊರಭಾಗದಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿದೆ.

Advertisement

ಇದನ್ನೂ ಓದಿ:ಉದ್ದೇಶ ಪೂರ್ವಕವಾಗಿಯೇ ರಾಹುಲ್ ಗಾಂಧಿ ಅವರನ್ನು ಅನರ್ಹ ಮಾಡಲಾಗಿದೆ: ಎಚ್.ವಿಶ್ವನಾಥ್

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಪರಿಣಿತಿ ಚೋಪ್ರಾ ಮತ್ತು ರಾಘವ್ ಛಡ್ಡಾ ಡೇಟಿಂಗ್ ನಲ್ಲಿರುವುದು ನಿಜ. ಕೆಲವು ವರ್ಷಗಳಿಂದ ಇಬ್ಬರು ಆಪ್ತರಾಗಿದ್ದು, ಇತ್ತೀಚೆಗೆ ಇಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿರುವುದಾಗಿ ತಿಳಿಸಿದೆ.

ಆದರೆ ಈ ಗಾಸಿಪ್ ಬಗ್ಗೆ ಚೋಪ್ರಾ ಅಥವಾ ರಾಘವ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪರಿಣಿತಿ ಕುರಿತು ಕೇಳಿದ ಪ್ರಶ್ನೆಗೆ ರಾಘವ್ ಯಾವುದೇ ಉತ್ತರ ನೀಡದೇ, ಪರಿಣಿತಿ ಬಗ್ಗೆ ಪ್ರಶ್ನೆ ಕೇಳೋದು ಬಿಟ್ಟು, ರಾಜಕೀಯದ ಬಗ್ಗೆ ಪ್ರಶ್ನೆ ಕೇಳಿ ಎಂದು ಹೇಳಿದ್ದರು.

Advertisement

ಅದೇ ರೀತಿ ಹಿಂದೂಸ್ತಾನ್ ಟೈಮ್ಸ್ ಗೆ ಚೋಪ್ರಾ ನೀಡಿದ್ದ ಸಂದರ್ಶನದಲ್ಲಿಯೂ ಕೂಡಾ, ಶೀಘ್ರದಲ್ಲೇ ವಿವಾಹವಾಗುವ ಇಚ್ಛೆ ವ್ಯಕ್ತಪಡಿಸಿದ್ದರು. ನನ್ನ ಖಾಸಗಿ ಜೀವನದಲ್ಲಿ ವಿವಾಹ ಮತ್ತು ಮಕ್ಕಳನ್ನು ಹೊಂದುವುದು ನನ್ನ ಆಸೆಯಾಗಿದೆ. ನನ್ನ ಮನದಾಳವನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿ ಸಿಕ್ಕಾಗ ನಾನು ಅವರನ್ನು ಪ್ರೀತಿಸುತ್ತೇನೆ. ಹಾಗೇ ಮದುವೆಯಾಗಲು ಬಯಸುತ್ತೇನೆ ಎಂದು ಹೇಳಿದ್ದರು. ಆದರೆ ಛಡ್ಡಾ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲವಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next