ಹನೂರು: ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಎಂಬ ಸಲುಗೆಯಿಂದ ಮಾತನಾಡಿದ್ದೇನೆಯೇ ಹೊರತು ಯಾವುದೇ ದುರುದ್ದೇಶದಿಂದಲ್ಲ, ಇದರಿಂದ ಯಾವುದಾದರೂ ಸಮುದಾಯಕ್ಕಾಗಲಿ, ನಾಯಕರಿಗಾಗಲಿ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಮಾಜಿ ಶಾಸಕಿ ಪರಿಮಳಾ ನಾಗಪ್ಪ ತಿಳಿಸಿದರು.
ಪರಿಮಳಾ ನಾಗಪ್ಪ ಅವರು ಕಾರುಕರ್ತನೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದ್ದ ಹಿನ್ನೆಲೆ ಪಟ್ಟಣದ ಲೋಕೋಪಯೋಗಿ ಇಲಾಖಾ ವಸತಿಗೃಹದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕಿ ಪರಿಮಳಾ ನಾಗಪ್ಪ ನಾನು ಮತ್ತು ನಮ್ಮ ಕುಟುಂಬ ಕ್ಷೇತ್ರದಲ್ಲಿ ಕಳೆದ 50 ವರ್ಷಗಳಿಮದ ಆರೋಗ್ಯಕರ ರಾಜಕಾರಣ ಮಾಡುತ್ತಾ ಬಂದಿದ್ದು ಎಲ್ಲಾ ಸಮುದಾಯಗಳ ಜೊತೆ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದೇವೆ. ಇದೀಗ ಬಿಡುಗಡೆಯಾಗಿರುವ ಆಡಿಯೋ ಕಳೆದ ಒಂದೂವರೆ ತಿಂಗಳ ಹಿಂದೆ ಮಾತನಾಡದ ಆಡಿಯೋವಾಗಿದ್ದು ಮ.ಬೆಟ್ಟ ಮಂಡಲದ ಅಧ್ಯಕ್ಷ ಹುದ್ದೆಯನ್ನು ಪರಿಶಿಷ್ಠ ಜಾತಿ ಸಮುದಾಯಕ್ಕೆ ನೀಡಿದ ಹಿನ್ನೆಲೆ ಬೇಡಗಂಪಣ ಸಮುದಾಯಕ್ಕೆ ನೀಡಿ ಎಂದು ಕೇಳಿದಾಗ ನಡೆದ ಚರ್ಚೆಯಾಗಿದೆ. ಈ ಆಡಿಯೋದಲ್ಲಿ ನಾನು ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಮೇಲಿನ ಸಲುಗೆಯಿಂದ ಮಾತನಾಡಿದ ಮಾತುಗಳಾಗಿವೆ. ಇದರಿಂದ ಯಾವ ಮುಖಂಡರಿಗಾಗಲಿ, ಕಾಯಕರ್ತರಿಗಾಗಲಿ , ಸಮುದಾಯಕ್ಕಾಗಲಿ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಆದರೆ ಇದನ್ನು ಕೆಲವರು ರಾಜಕೀಯ ದುರುದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು.
ಇದನ್ನೂ ಓದಿ :ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ಇಲ್ಲ
ಮಂಜುನಾಥ್ ಯಾವ ದೊಡ್ಡ ನಾಯಕ: ಪತ್ರಿಕಾಗೋಷ್ಠಿಯಲ್ಲಿ ಮೇಕೆದಾಟು ಯೋಜನೆ ಸಂಬಂಧ ಮಾತನಾಡುವ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಹೆಸರು ಪ್ರಸ್ತಾಪಿಸದೆ ಅವರ ಹೇಳಿಕೆಗೆ ತಿರುಗೇಟು ನೀಡಿದರು. ಮೇಕೆದಾಟು ಯೋಜನೆ ಜಾರಿಯಾಗದಿದ್ದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡುತ್ತಾರಾ ಎಂದು ಕೇಳಿದ್ದಾರೆ, ಅವರ ರಾಜೀನಾಮೆ ಕೇಳಲು ಇವರಿಗೆ ಯಾವ ನೈತಿಕತೆಯಿದೆ. ಅವರ ಬಗ್ಗೆ ಮಾತನಾಡುವಷ್ಟು ದೊಡ್ಡ ನಾಯಕರೇನಲ್ಲ ಎಂದು ಕುಹುಕ ಆಡಿದರು. ಕ್ಷೇತ್ರದ ಜನರು 45ಸಾವಿತ ಮತ ನೀಡಿದ್ದಾರಲ್ಲ ಇವರು ಕ್ಷೇತ್ರಕ್ಕೆ ಏನು ಮಾಡಿದ್ದಾರೆ, ಇವತ್ತು ರಾಜೀನಾಮೆ ಕೇಳುವ ನಾಯಕ ಕಾಂಗ್ರೆಸ್ –ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಏನು ಮಾಡುತ್ತಿದ್ದರು ಎಂದು ತಿರುಗೇಟು ನೀಡಿದರು.
ಹನೂರು ಮಂಡಲದ ಅಧ್ಯಕ್ಷ ಸಿದ್ದಪ್ಪ ಮಾತನಾಡಿ ಈ ಆಡಿಯೋ ವಿಚಾರದಿಂದಾಗಿ ಪಕ್ಷ ಸಂಘಟನೆಗೆ ಹಿನ್ನೆಡೆಯಾಗಬಾರದು ಎನ್ನುವ ಉದ್ದೇಶದಿಂದ ಪತ್ರಿಕಾಗೋಷ್ಠಿ ಕರೆಯಲಾಗಿದೆ. ಈಗಾಗಲೇ ಪಟಟ್ಣದಲ್ಲಿ ಪಕ್ಷದ ಅಧಿಕೃತ ಕಚೇರಿಯನ್ನು ತೆರೆಯಲಾಗಿದ್ದು ಪಕ್ಷದ ಚಟುವಟಿಕೆಗಳೆಲ್ಲಾ ಆ ಕಚೇರಿಯಲ್ಲಿಯೇ ಜರುಗುತ್ತದೆ. ಇದನ್ನು ಹೊರತುಪಡಿಸಿ ತೆರೆಯಲಾಗಿದ್ದ ಕಚೇರಿಗಳ ಬಗ್ಗೆ ಜಿಲ್ಲಾಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರ ಗಮನಕ್ಕೆ ತಂದು ಕಚೇರಿ ನಾಮಫಲಕಗಳನ್ನು ತೆಗೆಸಲಾಗಿದೆ. ಅಲ್ಲದೆ ಪಕ್ಷದ ಕಚೇರಿ ಹೊರತುಪಡಿಸಿ ಬೇರೆ ಕಡೆ ಚಟುವಟಿಕೆಗಳು ನಡೆದಲ್ಲಿ ಪದಾಧಿಕಾರಿಗಳು ಭಾಗವಹಿಸಿದಲ್ಲಿ ಅಂತಹ ಪದಾಧಿಖಾರಿಗಳ ಬಗ್ಗೆಯೂ ಜಿಲ್ಲಾಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರ ಗಮನಕ್ಕೆ ತರಲಾಗುವುದು ಎಂದು ಹೆಸರು ಪ್ರಸ್ತಾಪಿಸದೆಯೇ ಮುಖಂಡ ವೆಂಕಟೇಶ್ ಅವರ ಕಚೇರಿಗೆ ತೆರಳುವ ಪದಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಹಾಪ್‍ಕಾಮ್ಸ್ ನಿರ್ದೇಶಕ ಉದ್ದನೂರು ಪ್ರಸಾದ್, ಪ.ಪಂ ನಾಮನಿರ್ದೇಶಿತ ಸದಸ್ಯ ಪುಟ್ಟರಾಜು, ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕಣ್ಣೂರು ಬಸವರಾಜು, ಮುಖಂಡರಾದ ನಂಜಪ್ಪ, ವೆಂಕಟಾಚಲನಾಯ್ಕ(ತಿರುಪತಿ) ಇನ್ನಿತರರು ಹಾಜರಿದ್ದರು.