Advertisement

“ಮಗುವಿನ ಮನಃಸ್ಥಿತಿ ಹೆತ್ತವರಿಗೆ ಅರ್ಥವಾಗಬೇಕು’

05:45 AM Jul 21, 2017 | Harsha Rao |

ತೆಂಕಿಲ : ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ 6ನೇ ತರಗತಿಯ ಹೆತ್ತವರ ಸಭೆ ಜರಗಿತು. 

Advertisement

ಸಮೂಹ ಸಂಪನ್ಮೂಲ ವ್ಯಕ್ತಿ ಶಾಲಿನಿ ಮಾತನಾಡಿ, ಹೆತ್ತವರು ಮಗುವಿನ ಮನಃಸ್ಥಿತಿಯನ್ನು ಅರ್ಥಮಾಡಿಕೊಂಡು, ವೈಚಾರಿಕ ವಿಚಾರಗಳನ್ನು ಅವರಲ್ಲಿ ಬೆಳೆಸ ಬೇಕು. ಸಮಾಜವನ್ನು ತಿದ್ದುವ ಮೊದಲು ನಮ್ಮನ್ನು ನಾವು ತಿದ್ದಿಕೊಳ್ಳುವುದು ಅಗತ್ಯ ಎಂದರು.

ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಡಾ| ಮುರಳಿಕೃಷ್ಣ ರೈ, ಹೆತ್ತವರು ಮತ್ತು ಶಿಕ್ಷಕರು ಮಕ್ಕಳೊಟ್ಟಿಗೆ ಬೆರೆತಾಗ ಮಗುವಿನ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ಹೇಳಿದರು. ಶಾಲಾ ಮುಖ್ಯ ಶಿಕ್ಷಕ ಸತೀಶ್‌ ಕುಮಾರ್‌ ರೈ, ಕೆ.ಜಿ. ವಿಭಾಗ ಮುಖ್ಯಸ್ಥೆ ಮಮತಾ ಉಪಸ್ಥಿತರಿದ್ದರು.

ಶಿಕ್ಷಕಿ ಕುಮಾರಿ ಹಿತಾ ಪ್ರಾರ್ಥಿಸಿದರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ರಾಮ ನಾಯ್ಕ ಪ್ರಸ್ತಾವನೆಗೈದರು. ಶಿಕ್ಷಕಿ ವಿದ್ಯಾರತ್ನ ಸ್ವಾಗತಿಸಿ, ಅಶ್ವಿ‌ನಿ ಭಟ್‌ ವಂದಿಸಿದರು. ಸುಪ್ರೀತಾ ರೈ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next