Advertisement

ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಇರಲಿ ಎಚ್ಚರ! : ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳು ಸಕ್ರಿಯ

12:23 PM Dec 21, 2020 | Suhan S |

ಬೆಂಗಳೂರು: ಫೇಸ್‌ಬುಕ್‌, ಇನ್‌ಸ್ಟ್ರಾಗ್ರಾಂ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ರಾಪ್ತ ಮಕ್ಕಳನ್ನು ಗುರಿಯಾಗಿಸಿಕೊಂಡಿರುವ ದುಷ್ಕರ್ಮಿಗಳು ಅವರಿಗೆ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸುವ ಮತ್ತು ಪಡೆಯುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಅಂತಹ ಪ್ರಕರಣಗಳೆರಡು ನಗರದ ಸೆನ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗುತ್ತಿವೆ.

Advertisement

ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಇದೀಗಎಲ್ಲೆಡೆ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ಹೀಗಾಗಿ ಅಪ್ರಾಪ್ತ ಮಕ್ಕಳಿಗೆ ಪೋಷಕರು ಹೊಸ ಮಾದರಿಯ ಆ್ಯಂಡ್ರಾಯ್ಡ ಮೊಬೈಲ್‌ ಕೊಡಿಸಿದ್ದು, ಪ್ರತಿಯೊಬ್ಬರೂ ಮೊಬೈಲ್‌ನಲ್ಲಿ ಮುಳುಗಿ ಹೋಗಿದ್ದಾರೆ. ಈ ವೇಳೆ ಯುಟ್ಯೂಬ್‌, ಫೇಸ್‌ಬುಕ್‌, ಟ್ವಿಟರ್‌ ಹಾಗೂ ಇನ್‌ಸ್ಟ್ರಾಗ್ರಾಂ ವೀಕ್ಷಣೆ ಮಾಡುತ್ತಿದ್ದು, ಹೊಸ ಖಾತೆಗಳನ್ನು ತೆರೆದು, ಹೊಸ ಮಾದರಿಯ ಫೋಟೋಗಳನ್ನು ಅಪ್‌ಲೋಡ್‌ ಮಾಡುತ್ತಾರೆ.

ಈ ಮೂಲಕ ಅಪರಿಚಿತರನ್ನು ಸಂಪರ್ಕಿಸಿ, ಖಾಸಗಿಯಾಗಿ ಮಾತನಾಡುವುದು, ವಿಡಿಯೋ ಕಾಲ್‌ ಮಾಡುವುದು, ಪರಸ್ಪರ ಮೊಬೈಲ್‌ ನಂಬರ್‌ಗಳ ಬದಲಾವಣೆ ನಡೆಯುತ್ತಿದೆ. ಈ ಜಾಲತಾಣಗಳನ್ನು ಬಳಸುವ ಕೆಲ ಕಿಡಿಗೇಡಿ ಯುವಕರು ಅಪ್ರಾಪ್ತೆಯರು ಎಂದು ತಿಳಿಯುತ್ತಿದ್ದಂತೆ ಚಾಟಿಂಗ್‌ ಆರಂಭಿಸುತ್ತಾರೆ. ಬಳಿಕ ಮೊಬೈಲ್‌ ನಂಬರ್‌ಹಾಗೂ ವೈಯಕ್ತಿಕ ಮಾಹಿತಿ ಪಡೆದುಕೊಂಡು ಕೆಲವೊಂದು ಆಮಿಷಗಳನ್ನೊಡ್ಡಿ ಪರಿಚಯ ಮಾಡಿಕೊಳ್ಳುತ್ತಾರೆ. ದಿನಕಳೆದಂತೆ ಆಕೆಯ ವಿಶ್ವಾಸ ಗಳಿಸಿ ಖಾಸಗಿ ವಿಡಿಯೋಗೆ ಬೇಡಿಕೆ ಇಡು ತ್ತಾರೆ. ಒಂದು ವೇಳೆ ಆಕೆ ಅದಕ್ಕೆ ಸ್ಪಂದಿಸಿದರೆ, ದುರ್ಬಳಕೆಗೂ ಮುಂದಾಗುತ್ತಾರೆ.

ಕೂತೂಹಲ ಹೆಚ್ಚು: ಆನ್‌ಲೈನ್‌ ತರಗತಿ ಪಡೆಯುತ್ತಿರುವ ವೇಳೆ ಮೊಬೈಲ್‌ಗೆ ಬರುವ ಕೆಲವೊಂದು ಸಂದೇಶಗಳನ್ನು ಮಕ್ಕಳು ಕುತೂಹಲದಿಂದ ತೆರೆಯುತ್ತಾರೆ. ಒಂದು ವೇಳೆ ಅವುಗಳಲ್ಲಿ ಅಶ್ಲೀಲ ದೃಶ್ಯಗಳು ಕಂಡು ಬಂದರೆ ಕುತೂಹಲದಿಂದ ನೋಡುತ್ತಾರೆ. ಬಳಿಕ ಅಂತಹ ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ ಎನ್ನುತ್ತಾರೆ ಸೈಬರ್‌ ಕ್ರೈಂ ಪೊಲೀಸರು.

ಆನ್‌ಲೈನ್‌ ತರಗತಿ ವೇಳೆ ಅಶ್ಲೀಲ ಸಂದೇಶ :

Advertisement

ಮತ್ತೂಂದು ಪ್ರಕರಣದಲ್ಲಿ ಅಪ್ರಾಪೆ¤ಯೊಬ್ಬರು ಆನ್‌ಲೈನ್‌ ತರಗತಿ ಪಡೆಯುವಾಗ ಮೊಬೈಲ್‌ ಗೆ ಬಂದ ಸಂದೇಶವನ್ನುಕುತೂಹಲದಿಂದ ತೆರೆದು ನೋಡಿದಾಗ ಅಶ್ಲೀಲ ದೃಶ್ಯಗಳುಕಂಡು ಬಂದಿವೆ. ಆಕೆ, ಅದೇ ವೆಬ್‌ಸೈಟ್‌ಗೆ ಹೋಗಿ ಆ ರೀತಿಯ ವಿಡಿಯೋ ಮತ್ತು ಫೋಟೋಗಳನ್ನು ಹೆಚ್ಚು ನೋಡುತ್ತಿದ್ದರು. ಸಾಮಾಜಿಕ ಜಾಲತಾಣವೊಂದರಲ್ಲಿ ಪರಿಚಯವಾದ ಯುವಕನ ಜತೆ ಖಾಸಗಿಯಾಗಿ ಚಾಟಿಂಗ್‌ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಅದನ್ನು ಗಮನಿಸಿದ ಪೋಷಕರೊಬ್ಬರು ಸಮೀಪದ ಸಮೀಪದ ಠಾಣೆಯಲ್ಲಿ ದೂರು ನೀಡಿದ್ದರು.

ನಕಲಿ ಖಾತೆ :

ಬಳಿಕ ಮತ್ತೂಂದು ನಕಲಿಖಾತೆ ತೆರೆದ ಆರೋಪಿ, ಲೈಂಗಿಕವಾಗಿ ಸಹಕರಿಸುವಂತೆ ಬಾಲಕಿಗೆ ಆಡಿಯೋ ಸಂದೇಶಗಳನ್ನು ಕಳುಹಿಸಿ ಪೀಡಿಸಿದ್ದಾನೆ. ಈ ಕುರಿತು ಬಾಲಕಿಯ ಸಂಬಂಧಿ ಮಹಿಳೆಯೊಬ್ಬರು ಇ-ಮೇಲ್‌ ಮೂಲಕ ದೂರು ನೀಡಿದ್ದಾರೆ.

ದಾಖಲಾದ ಪ್ರಕರಣಗಳು :

ಇನ್‌ಸ್ಟ್ರಾಗ್ರಾಂನಲ್ಲಿ ಬಾಲಕಿಯನ್ನು ಪರಿಚಯ ಮಾಡಿಕೊಂಡ ಅಪರಿಚಿತ ವ್ಯಕ್ತಿ, ಆಕೆಗೆ ತನ್ನ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸುವಂತೆ ಬ್ಲ್ಯಾಕ್‌ಮೇಲ್‌ ಮಾಡುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಂತ್ರಸ್ತ ಬಾಲಕಿಯ ಪೋಷಕರು ಇ-ಮೇಲ್‌ ಮೂಲಕ ನೀಡಿದ ದೂರು ‌ ಆಧರಿಸಿ‌ ದಕ್ಷಿಣವಿಭಾಗದ ಸಿಇಎನ್‌ ಠಾಣೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ ತನಿಖೆ ಕೈಗೊಡಿದ್ದಾರೆ.13 ವರ್ಷದ ಸಂತ್ರಸ್ತೆ ಇನ್‌ಸ್ಟ್ರಾಗ್ರಾಂನಲ್ಲಿ ಖಾತೆ ಹೊಂದಿದ್ದು,ಕೆಲ ತಿಂಗಳ ಹಿಂದೆ ಅಪರಿಚಿತ ವ್ಯಕ್ತಿಯೊಬ್ಬ ಬಾಲಕಿಯ ಸ್ನೇಹ ಬೆಳೆಸಿದ್ದ. ಪ್ರತಿದಿನ ಚಾಟಿಂಗ್‌ ಮಾಡಿ ಸಂಪರ್ಕಿಸಿದ್ದ. ತನ್ನ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಬಾಲಕಿಗೆ ರವಾನಿಸಿದ್ದ. ಅದೇ ರೀತಿಯ ನಗ್ನ ಫೋಟೋ ಮತ್ತು ವಿಡಿಯೋ ತನಗೆ ರವಾನಿಸುವಂತೆ ಬಾಲಕಿಗೆ ಸಂದೇಶ ಕಳುಹಿಸಿ ಒತ್ತಾಯ ಮಾಡಿದ್ದ. ಅದರಿಂದ ಗಾಬರಿಗೊಂಡ ಬಾಲಕಿ, ಎಲ್ಲವನ್ನೂ ಗಳನ್ನು ಡಿಲೀಟ್‌ ಮಾಡಿದ್ದಳು. ಬಳಿಕವೂ ನಿರಂತರವಾಗಿ ಸಂದೇಶಕಳುಹಿಸಿ ಪೀಡಿಸುತ್ತಿದ್ದ. ಇದು ಪೋಷಕರಿಗೆ ಗೊತ್ತಾಗಿದ್ದು, ಅಪರಿಚಿತನಇನ್‌ಸ್ಟ್ರಾಗ್ರಾಂ ಖಾತೆಗೆ ರಿಪೋರ್ಟ್‌ ಮಾಡಿ ಸುಮ್ಮನಾಗಿದ್ದರು.

ಅಪ್ರಾಪ್ತರಿಂದ ಅಶ್ಲೀಲ ವಿಡಿಯೋ ಅಥವಾ ಫೋಟೋಗೆ ಬೇಡಿಕೆ ಇಡುವುದು ಮಾತ್ರವಲ್ಲ ಅಶ್ಲೀಲ ದೃಶ್ಯಗಳನ್ನು ತೋರಿಸುವುದು ಅಪರಾಧ. ಇದು ಚೈಲ್ಡ್‌ ಫೋರ್ನೋಗ್ರಫಿ ವ್ಯಾಪ್ತಿಗೆ ಬರುತ್ತದೆ. ಪೋಕ್ಸೋ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲೇ ಈ ಸಂಂಬಧ ಪ್ರಕರಣದಾಖಲಿಸಲಾಗುತ್ತದೆ. ಒಂದು ವೇಳೆ ಆರೋಪಿ ತಪ್ಪು ಸಾಬೀತಾದರೆ ಏಳು ವರ್ಷ ಮೇಲ್ಪಟ್ಟು ಶಿಕ್ಷೆವಿಧಿಸಲಾಗುತ್ತದೆ. ಬಿ.ಎನ್‌.ಪಣಿಂಧರ್‌, ವಿಧಿ ವಿಜ್ಞಾನ ತಜ್ಞರು, ಐಟಿ ವಕೀಲರು

ಇಂತಹ ಪ್ರಕರಣಗಳಲ್ಲಿ ಪೋಕ್ಸೋ ಮತ್ತು ಅನುಚಿತ ವರ್ತನೆ ಹಾಗೂ ಇತರೆ ಸೆಕ್ಷನ್‌ಗಳ ಅಡಿಯಲ್ಲಿ ಕಾನೂನು ಕ್ರಮಕೈಗೊಳ್ಳಲಾಗುವುದು. ಕೃತ್ಯ ಸಾಬೀತಾದರೆ ಏಳು ವರ್ಷಕ್ಕೂ ಅಧಿಕ ವರ್ಷ ಶಿಕ್ಷೆಯಾಗಬಹುದು. ಕಮಲ್‌ ಪಂತ್‌, ನಗರ ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next