Advertisement

ಗ್ರಾಮ ಸಮ್ಮಾನ ಕಾರ್ಯಕ್ರಮ

01:08 PM Jan 03, 2018 | Team Udayavani |

ಕೊಣಾಜೆ: ಮಕ್ಕಳ ಪಾಲಿಗೆ ಹೆತ್ತವರೇ ಪ್ರಥಮ ಗುರುಗಳಾಗಿದ್ದಾರೆ. ಆ ಕರ್ತವ್ಯ ಸಮರ್ಥವಾಗಿ ನಿಭಾಯಿಸುವ ಮೂಲಕ ವಂಶಿ ಎನ್ನುವ ಮುತ್ತೂಂದನ್ನು ಸಮಾಜಕ್ಕೆ ಅರ್ಪಿಸಿದ ಕೀರ್ತಿ ಆಕೆಯ ಹೆತ್ತವರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಪಂಚಾಯತ್‌ ಸದಸ್ಯೆ ಧನಲಕ್ಷ್ಮೀ ಗಟ್ಟಿ ಅಭಿಪ್ರಾಯಪಟ್ಟರು. ಜೂನಿಯರ್‌ ಡ್ರಾಮ ಸೀಝನ್‌-2 ವಿಜೇತೆ ವಂಶಿ ರತ್ನಕುಮಾರ್‌ ಅವರಿಗೆ ಕೊಣಾಜೆ ಗ್ರಾಮ ಪಂಚಾಯತ್‌ ನಿಂದ ನಡೆದ ಗ್ರಾಮ ಸಮ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.

Advertisement

ಜೂನಿಯರ್‌ ಡ್ರಾಮದಲ್ಲಿ ಪ್ರಶಸ್ತಿ ಪಡೆಯುವ ಮೂಲಕ ರಾಜ್ಯದಲ್ಲಿ ಮನೆಮಾತಾಗಿರುವ ವಂಶಿ, ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲೂ ಮಿಂಚಬೇಕು, ಮಂಗಳೂರು ವಿವಿ ಮೂಲಕ ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ಕೊಣಾಜೆಗೆ ವಂಶಿಯ ಸಾಧನೆ ಗ್ರಾಮದ ಕೀರ್ತಿ ಹೆಚ್ಚಿಸಿದೆ ಎಂದರು. ತಾಲೂಕು ಪಂಚಾಯತ್‌ ಅಧ್ಯಕ್ಷ ಮಹಮ್ಮದ್‌ ಮೋನು ಅಧ್ಯಕ್ಷತೆ ವಹಿಸಿದ್ದರು.

ಮೂಡಾದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್‌, ತಾಲೂಕು ಪಂಚಾಯತ್‌ ಸದಸ್ಯರಾದ ಪದ್ಮಾವತಿ ಪೂಜಾರಿ, ಶಶಿಪ್ರಭಾ ಶೆಟ್ಟಿ, ಗ್ರಾಮ ಪಂಚಾಯತ್‌ ಅಧ್ಯಕ್ಷ ಶೌಕತ್‌ ಅಲಿ, ಉಪಾಧ್ಯಕ್ಷೆ ಲಲಿತಾ ಎಸ್‌.ರಾವ್‌, ಸದಸ್ಯರಾದ ಅಬ್ದುಲ್‌ ಖಾದರ್‌ ಅಡ್ಕರೆ, ಮುತ್ತು ಶೆಟ್ಟಿ, ಸ್ಥಾಯೀ ಸಮಿತಿ ಅಧ್ಯಕ್ಷ ಚಂದ್ರಹಾಸ, ಪಂಚಾಯತ್‌ ಸಿಬಂದಿ ಹಾಗೂ ಗ್ರಾಮಸ್ಥರು ಮೊದಲಾದವರು ಉಪಸ್ಥಿತರಿದ್ದರು. ಗ್ರಾ.ಪಂ. ಸದಸ್ಯ ಅಚ್ಯುತ ಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ನಳಿನಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next