Advertisement
ಮಕ್ಕಳು ವಿವಿಧ ವೇಷ ಧರಿಸಿ ನತ್ಯ ಪ್ರದರ್ಶಿಸಿ ಪ್ರೇಕ್ಷಕರನ್ನು ಬೆರಗುಗೊಳಿಸಿದರು. ಹಾಸನದ ಭಾರತಿ ವಿದ್ಯಾಮಂದಿರದ ಚಿಣ್ಣರು “ಸಿಕ್ಕರೆ ಸಿಕ್ಕರೆ ಅವಕಾಶ ಮುಟ್ಟಿಯೇ ಬಿಡುವೆನು ಆಕಾಶ’ ಎಂಬ ನೃತ್ಯ ರೂಪಕ ಪ್ರೇಕ್ಷಕರನ್ನು ಮೋಡಿ ಮಾಡಿತು. “ಗೊಮ್ಮಟ ವೈಭವ’ ನತ್ಯ ರೂಪಕ ಭರತ ಬಾಹುಬಲಿಯ ಯುದ್ಧದ ಪ್ರಸಂಗ, ಹೊಯ್ಸಳರ ಸಾಮ್ರಾಜ್ಯದ ಕಥನದ ಪ್ರಸಂಗ ಪ್ರೇಕ್ಷಕರನ್ನು ಬೆರಗುಗೊಳಿಸಿತು.
Related Articles
Advertisement
ಭರತ ನಾಟ್ಯದ ರೋಮಾಂಚನ: ಬೇಲೂರಿನ ಭರತನಾಟ್ಯ ಕಲಾವಿದೆ ಬಿ.ಕೆ.ಶಿಲ್ಪ ಅವರ ಭರತ ನಾಟ್ಯ ಅತ್ಯಂತ ರೋಮಾಂಚನಾಕಾರಿಯಾಗಿತ್ತು. ಸೊಂಟದಲ್ಲಿ ರಿಂಗ್ ತಿರುಗಿಸುತ್ತಾ ವಿವಿಧ ಭಂಗಿಗಳಲ್ಲಿ ಭರತ ನಾಟ್ಯ ಪ್ರದರ್ಶಿಸಿದರು. ತಟ್ಟೆ ಮೆಲೆ, ಮಡಿಕೆ ಮೇಲೆ ಒಂಟಿ ಕಾಲಲ್ಲಿ ನೃತ್ಯ, ಮೇಣಬತ್ತಿ ಕಳಸ ಇಟ್ಟುಕೊಂಡು ಗಾಜಿನ ಲೋಟಗಳ ಮೇಲೆ ಒಂಟಿ ಕಾಲಿನಲ್ಲಿ ನಿಂತು ಪ್ರದರ್ಶಿಸಿದ ನೃತ್ಯ ರೋಮಾಂಚನಕಾರಿಯಾಗಿತ್ತು.
ಜನಮನ ಸೆಳೆದ ಹೋಯ್ಸಳ ನತ್ಯ ರೂಪಕ: ಬೇಲೂರಿನ ಭರತನಾಟ್ಯ ಕಲಾದೆ ಹಾಗೂ ಜೀ ಕನ್ನಡ ವಾನಿಯ ಸರಿಗಮಪ ಲಿಟ್ಲ ಚಾಂಪ್ಸ್‌ನ ನೇಹ ಅವರು ಹೊಯ್ಸಳ ಸಾಮ್ರಾಜ್ಯ ಹುಟ್ಟಿನ ಕತೆಯನ್ನು ಏಕ ಪಾತ್ರಾಭಿನಯದಲ್ಲಿ ಪ್ರಸ್ತುತ ಪಡಿಸಿದರು. ಈ ನತ್ಯವನ್ನು ಮೆಚ್ಚಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಒ. ಮಹಾಂತಪ್ಪ ಅವರು ಸ್ಥಳದಲ್ಲಿಯೇ 500 ನಗದು ಬಹುಮಾನ ಪ್ರಕಟಿಸಿದರು.
ತರಕಾರಿ ಪಲಾವ್: ಮೊದಲ ದಿನದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದವರಿಗೆ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಮಧ್ಯಾಹ್ನದ ಭೋಜನಕ್ಕೆ ಪಲಾವ್ ವ್ಯವಸ್ಥೆ ಮಾಡಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲೊಗಂಡಿದ್ದ ಮಕ್ಕಳು ಹಾಗೂ ಶಾಲಾ ಶಿಕ್ಷಕರು ಮತ್ತು ಪೊಷಕರೂ ಪಲಾವ್ ಸವಿದರು.
ಪುಸ್ತಕಗಳ ಮಾರಾಟ ಮಳಿಗೆ: ಸಾಹಿತ್ಯ ಸಮ್ಮೇಳನಗಳಲ್ಲಿ ಪುಸ್ತಕಗಳ ಪ್ರದರ್ಶನ ಮಾರಾಟ ಸಾಂಪ್ರದಾಯಿಕವಾಗಿದೆ. ಹಾಗೆಯೇ ಹಾಸನ ಜಿಲ್ಲಾ ಸಮ್ಮೇಳನದಲ್ಲಿಯೂ ಸಾಹಿತ್ಯಾಸಕ್ತರ ಮನ ತಣಿಸಲು ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಮಳಿಗೆಗಳ ನಿರ್ಮಾಣದ ಸಿದ್ದತೆ ಭರದಿಂದ ಸಾಗಿತ್ತು.