Advertisement
ಪ್ರಸ್ತುತ, ವಂಶವಾಹಿಗಳು ಮತ್ತು ಪರಿಸರಕ್ಕೆ ಸಂಬಂಧಿಸಿದ ಹಲವಾರು ಅಂಶಗಳು ಎಎಸ್‌ಡಿ ಉಂಟಾಗಲು ಕಾರಣ ಎಂಬುದು ವೈದ್ಯಕೀಯ ಜಗತ್ತಿನ ತಿಳಿವಳಿಕೆಯಾಗಿದೆ. ಹೆತ್ತವರಲ್ಲಿ ಇರಬಹುದಾದ ಮಾನಸಿಕ ಅನಾರೋಗ್ಯಗಳು ಮತ್ತು ಅವರ ಶಿಶು ಜನನಕ್ಕೆ ಮುನ್ನ ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್‌ಗೆ ತುತ್ತಾಗುವ ಸಂಭಾವ್ಯ ಅಪಾಯಗಳ ನಡುವಣ ಸಂಬಂಧದ ಬಗ್ಗೆ ಸ್ವೀಡನ್ ಮತ್ತು μನ್ಲಂಡ್ ದೇಶಗಳ ಅಧ್ಯಯನಕಾರರು ಇತ್ತೀಚೆಗೆ ನಡೆಸಿದ ಬೃಹತ್ ಜನಸಂಖ್ಯಾಧಾರಿತ ಅಧ್ಯಯನದ ವಿಷಯವಾಗಿ ಅಂತಾರಾಷ್ಟ್ರೀಯ ವೈಜ್ಞಾನಿಕ ನಿಯತಕಾಲಿಕ “ಲ್ಯಾನ್ಸೆಟ್’ನಲ್ಲಿ ಇತ್ತೀಚೆಗೆ ವರದಿಯೊಂದು ಪ್ರಕಟವಾಗಿದೆ.
Related Articles
Advertisement
ಈ ವಂಶವಾಹಿಯು ಆಟಿಸಂನ ಹಠ ಮತ್ತು ಆಗ್ರಹದ ಸ್ವಭಾವಗಳ ಜತೆಗೂ ಸಂಬಂಧ ಹೊಂದಿದೆ. ಆಟಿಸಂ ಉಂಟಾಗುವ ಅಪಾಯವು ಹೆತ್ತವರಲ್ಲಿ ಕಾಣಿಸಿಕೊಳ್ಳುವ ಎಲ್ಲ ವರ್ಗಗಳ ಮಾನಸಿಕ ಅನಾರೋಗ್ಯಗಳಿಂದಲೂ ಹೆಚ್ಚುತ್ತದೆ; ಅದರಲ್ಲೂ ತಾಯಿಯು ಮಾನಸಿಕ ಅನಾರೋಗ್ಯ ಹೊಂದಿದ್ದರೆ ಈ ಅಪಾಯವು ಹೆಚ್ಚು, ನರ ಅಭಿವೃದ್ಧಿಗೆ ಸಂಬಂಧಿಸಿದ ತೊಂದರೆಗಳು, ಮನೋಭಾವ ಸಮಸ್ಯೆಗಳು, ನ್ಯುರಾಟಿಕ್ ಸಮಸ್ಯೆಗಳು ಮತ್ತು ಸೈಕೊಆ್ಯಕ್ಟಿವ್ ದ್ರವ್ಯಗಳ ವ್ಯಸನ ಸಮಸ್ಯೆಗಳಿಂದಲೂ ಶಿಶು ಆಟಿಸಂಗೆ ತುತ್ತಾಗುವ ಅಪಾಯ ಹೆಚ್ಚುತ್ತದೆ.
ಆದರೆ ಸ್ಕಿಜೊಫ್ರೆàನಿಯಾ ಮತ್ತು ಇತರ ಸೈಕೊಟಿಕ್ ತೊಂದರೆಗಳು ತಂದೆ ಅಥವಾ ತಾಯಿಯಲ್ಲಿ ಇದ್ದರೆ ಶಿಶುವಿಗೆ ಎಎಸ್‌ಡಿ ಉಂಟಾಗುವ ಅಪಾಯ ಸಮಾನವಾಗಿರುತ್ತದೆ. ಈ ಅಧ್ಯಯನ ಫಲಿತಾಂಶಗಳು ಎಎಸ್‌ಡಿಗೆ ತುತ್ತಾಗಬಹುದಾದ ಅಪಾಯ ಹೆಚ್ಚಿರುವ ಶಿಶುಗಳನ್ನು ಆದಷ್ಟು ಬೇಗನೆ ಗುರುತಿಸಿ ಬೇಗನೆ ಚಿಕಿತ್ಸೆ ಒದಗಿಸುವ ಮೂಲಕ ಉತ್ತಮ ಫಲಿತಾಂಶ ಪಡೆಯುವಲ್ಲಿ ಹೆತ್ತವರ ವಿವಿಧ ಮಾನಸಿಕ ಅನಾರೋಗ್ಯಗಳನ್ನು ವಿಶ್ಲೇಷಿಸುವುದಕ್ಕೆ ಇರುವ ಪ್ರಾಮುಖ್ಯವನ್ನು ಒತ್ತಿ ಹೇಳುತ್ತವೆ.
ಡಾ| ಪೂನಂ ಸಂತೋಷ್,
ಕನ್ಸಲ್ಟಂಟ್ ಸೈಕಿಯಾಟ್ರಿ,
ಕೆಎಂಸಿ ಆಸ್ಪತ್ರೆ,
ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಸೈಕಿಯಾಟ್ರಿ ವಿಭಾಗ, ಕೆಎಂಸಿ, ಮಂಗಳೂರು)