Advertisement

ಕೈದಿಗಳಿಗೆ ಕ್ಷಮಾದಾನ-ಖಂಡನೆ

04:33 PM Aug 19, 2022 | Team Udayavani |

ಕಲಬುರಗಿ: ಗುಜರಾತ್‌ನ ಬಿಲ್ಕಿಸ್‌ ಬಾನೋ ಪ್ರಕರಣದಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪದಡಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಗುಜರಾತಿನ ಜೈಲಿನಲ್ಲಿರುವ 11ಜನ ಕೈದಿಗಳಿಗೆ ಕ್ಷಮಾದಾನ ನೀಡಿರುವ ಸಂಗತಿ ನಿಜಕ್ಕೂ ಆಘಾತಕಾರಿಯಾಗಿದೆ. ಅಲ್ಲದೇ, ದಲಿತ ಬಾಲಕ ನೀರು ಕುಡಿದ ಎನ್ನುವ ಕಾರಣಕ್ಕೆ ಸಾಯುವಂತೆ ಹೊಡೆದ ಶಿಕ್ಷಕನೊಬ್ಬ ಕೌರ್ಯ ಮೆರೆದಿರುವುದನ್ನು ಜನವಾದಿ ಮಹಿಳಾ ಸಂಘಟನೆ ಖಂಡಿಸಿದೆ.

Advertisement

ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ, ಅತ್ಯಾಚಾರ ಮತ್ತು ಕೊಲೆ ಮಾಡಿದ ಅಪರಾಧಿಗಳಿಗೆ ಗುಜರಾತ್‌ ಸರಕಾರ ಮಾಡಿದ ಕ್ಷಮಾದಾನವನ್ನು ಕೂಡಲೇ ರದ್ದುಗೊಳಿಸಬೇಕು. ಬಿಡುಗಡೆ ಆದವರಿಗೆ ಸಿಹಿ ಹಂಚಿ, ಸನ್ಮಾನದೊಂದಿಗೆ ಸ್ವಾಗತ ಮಾಡಿದವರನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕು. ಬಿಲ್ಕಿಸ್‌ ಬಾನೋ ಮತ್ತು ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು. ಕೇಂದ್ರ ಸರಕಾರದ ಆದೇಶ ಉಲ್ಲಂಘನೆ ಮಾಡಿದ ಗುಜರಾತ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಡಕೆ ಮುಟ್ಟಿ ನೀರು ಕುಡಿದಿದ್ದಕ್ಕಾಗಿ ಹೊಡೆದು ಕೊಂದು ಹಾಕಿದ ಸರಸ್ವತಿ ವಿದ್ಯಾ ಮಂದಿರದ ಮುಖ್ಯಸ್ಥ ಮತ್ತು ಶಿಕ್ಷಕರಿಗೆ ಬೇಲ್‌ ರಹಿತ ಬಂಧನ ಮುಂದುವರಿಸಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.

ಸರಕಾರವೇ ಶಿಕ್ಷಣ ಕೇಂದ್ರಗಳನ್ನು ನಡೆಸಬೇಕು. ಎಲ್ಲ ಖಾಸಗಿ ಶಿಕ್ಷಣ ಕೇಂದ್ರಗಳನ್ನು ರದ್ದು ಗೊಳಿಸಬೇಕು. ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಬೇಕು. ಈ ದಿಕ್ಕಿನಲ್ಲಿ ರಾಜಸ್ಥಾನ ಸರಕಾರವು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ, ಡಾ|ಮೀನಾಕ್ಷಿ ಬಾಳಿ, ಚಂದಮ್ಮ ಗೋಳಾ, ಪದ್ಮಿನಿ ಕಿರಣಗಿ, ಸುಧಾಮ ಧನ್ನಿ, ಪಾಂಡುರಂಗ ಮಾವಿನಕರ್‌, ಪೀರಪ್ಪ ಯಾತನೂರು, ಗುರು ಕೋಣಿನ್‌ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next