ಕಾರ್ಕಳ: ಪರಶುರಾಮ ಥೀಂ ಪಾರ್ಕ್ ನನ್ನದಲ್ಲ. ಅದು ಸಮಾಜದ ಆಸ್ತಿ. ಇದಕ್ಕೆ ತಡೆ ಒಡ್ಡುವವರ ವಿರುದ್ಧ ಜನ ಪ್ರತಿಭಟಿಸಬೇಕು ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.
ಜನಾಗ್ರಹ ಸಮಿತಿ ಪರಶುರಾಮ ಥೀಂ ಪಾರ್ಕ್ ಯರ್ಲಪ್ಪಾಡಿ ವತಿಯಿಂದ ಥೀಂ ಪಾರ್ಕ್ ಕಾಮಗಾರಿ ಮುಂದು ವರಿಸುವಂತೆ ಆಗ್ರಹಿಸಿ ಬೈಲೂರಿನಲ್ಲಿ ಸೋಮವಾರ ನಡೆದ ಜನಾಗ್ರಹ ಸಭೆಯಲ್ಲಿ ಅವರು ಮಾತನಾಡಿದರು.
ಥೀಂ ಪಾರ್ಕ್ ಕುರಿತು ಅಪಪ್ರಚಾರ ಚುನಾವಣೆ ಅನಂತರ ನಡೆಯುತ್ತ ಬಂದಿದೆ. ಸತ್ಯವನ್ನು ಎಂದಿಗೂ ಬಚ್ಚಿ ಡಲು ಸಾಧ್ಯ ವಿಲ್ಲ. ಕಾರ್ಕಳವನ್ನು ಯಾರು ಪ್ರೀತಿಸುತ್ತಾರೋ ಅವರಿಗೆ ಅಭಿವೃದ್ಧಿ ಮಾಡಬೇಕು ಎನಿ ಸುತ್ತದೆ. ಮೂರ್ತಿಯ ಗುಣಮಟ್ಟದಲ್ಲಿ ವ್ಯತ್ಯಾಸವಾಗಿದ್ದರೆ ತನಿಖೆ ಮಾಡಿ, ತನಿಖೆಯ ನೆಪದಲ್ಲಿ ಕಾಮಗಾರಿಯನ್ನು ನಿಲ್ಲಿಸಬೇಡಿ ಎಂದರು.
ಪ್ರವಾಸೋದ್ಯಮ ಸರ್ವನಾಶ
ಪರಶುರಾಮ ಮೂರ್ತಿಯ ವಿನ್ಯಾಸ ಗಾರ ಜಿಎಸ್‌ಟಿ ಕಟ್ಟಿಲ್ಲ ಎನ್ನುತ್ತಾರೆ. ತೆರಿಗೆ ಕಟ್ಟಿಲ್ಲವೆಂದು ದಾಳಿಯಾಗಿರುವುದು ನಿಮ್ಮದೇ ಮನೆಗೆ ಎನ್ನುವುದನ್ನು ತಿಳಿದು ಕೊಳ್ಳಬೇಕು ಎಂದರು. ಇಲ್ಲಿವರೆಗೆ ಯಾಕೆ ಸಿಐಡಿ ತನಿಖೆಯಾಗಿಲ್ಲ. ವಿಗ್ರಹಕ್ಕೆ ಬಳಸಿರುವ ಲೋಹ ಯಾವುದೆಂದು ಹೇಳಲು ಒಂದು ವರ್ಷ ಬೇಕಿತ್ತಾ? ಸರಕಾರ ಕಾಲಹರಣ ಮಾಡಿ ಪ್ರವಾಸೋ ದ್ಯಮವನ್ನು ಸರ್ವನಾಶ ಮಾಡಿದೆ ಎಂದು ದೂರಿದರು.
ರಾಮ ಮಂದಿರ ಟ್ರಸ್ಟ್‌ನ ಅಧ್ಯಕ್ಷ ಓಂಕಾರ್ ನಾಯಕ್, ಮಹೇಶ್ ಶೆಟ್ಟಿಕುಡ್ಪುಲಾಜೆ, ಜನಾಗ್ರಹ ಸಮಿತಿ ಸಂಚಾಲಕ ಕೌಡೂರು ಸಚ್ಚಿದಾನಂದ ಶೆಟ್ಟಿ, ಸುಮಿತ್ ಶೆಟ್ಟಿ ಕೌಡೂರ್ ಮಾತನಾಡಿ, ಮುಂದೆ ದೊಡ್ಡ ಮಟ್ಟದ ಹೋರಾಟ ರೂಪಿಸುವ ಎಚ್ಚರಿಕೆ ನೀಡಿದರು. ಗ್ರಾ.ಪಂ.ಗಳ ಅಧ್ಯಕ್ಷರಾದ ಸುನೀಲ್ ಹೆಗ್ಡೆ, ಸುಜಾತ, ಉಷಾ, ಸುನಿತಾ, ಸಚ್ಚಿದಾನಂದ ಪ್ರಭು, ಬೈಲೂರು ಬೀದಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಸದಾನಂದ ಸಾಲ್ಯಾನ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.