Advertisement

Karkala ಪರಶುರಾಮ ಥೀಮ್‌ ಪಾರ್ಕ್‌: ವ್ಯತ್ಯಾಸ ಆಗಿದ್ದರೆ ತನಿಖೆ ನಡೆಸಲಿ

11:04 PM Sep 10, 2023 | Team Udayavani |

ಕಾರ್ಕಳ: ತಾಲೂಕಿನ ಬೈಲೂರು ಉಮಿಕಲ್‌ ಬೆಟ್ಟದ ಮೇಲೆ ನಿರ್ಮಿಸಿರುವ ಪರಶುರಾಮ ಥೀಮ್‌ ಪಾರ್ಕಿನಲ್ಲಿ ಯಾವುದೇ ವ್ಯತ್ಯಾಸಗಳಾಗಿದ್ದರೆ ಜಿಲ್ಲಾಡಳಿತ ಯಾವುದೇ ರೀತಿಯ ತನಿಖೆಯನ್ನು ಮಾಡಲಿ, ನಾನು ಬೆಂಬಲ ನೀಡುತ್ತೇನೆ ಎಂದು ಶಾಸಕ ವಿ. ಸುನಿಲ್‌ ಕುಮಾರ್‌ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಪರಶುರಾಮ ಥೀಂ ಪಾರ್ಕಿಗೂ ಬರುವಂತಾಗಬೇಕು. ಕಾರ್ಕಳ ಪ್ರವಾಸಿ ಕ್ಷೇತ್ರವಾಗಿ ಅಭಿವೃದ್ಧಿ ಗೊಂಡು ಆರ್ಥಿಕತೆ ಬೆಳೆಯಬೇಕು ಎಂಬ ಕಾರಣಕ್ಕಾಗಿ ಪರಶುರಾಮ ಥೀಂ ಪಾರ್ಕ್‌ ತರುವ ಪ್ರಯತ್ನ ನಡೆಸಲಾಗಿದೆ. ಆದರೆ ಅಭಿವೃದ್ಧಿ ಸಹಿಸದ ಕೆಲವರು ಇತ್ತೀಚೆಗೆ ಅನವಶ್ಯಕ ಆರೋಪ ಮಾಡುತ್ತಿದ್ದಾರೆ ಎಂದರು.

ಥೀಂ ಪಾರ್ಕ್‌ನ ಅಪೂರ್ಣಗೊಂಡ ಕೆಲಸ ಶೀಘ್ರ ಮುಕ್ತಾಯವಾಗಬೇಕು, ಆದಷ್ಟು ಬೇಗ ಸಾರ್ವಜನಿಕರ ವೀಕ್ಷಣೆಗೆ ತೆರೆದುಕೊಳ್ಳಬೇಕು, ಜಿಲ್ಲಾಡಳಿತ ಈ ಕುರಿತಂತೆ ಕ್ರಮ ವಹಿಸಲಿದೆ. ಉದ್ಘಾಟನೆಯ ಸಂದರ್ಭ ಕಾಮಗಾರಿ ಮುಕ್ತಾಯವಾಗಿಲ್ಲ. ವಿಗ್ರಹವನ್ನು ಬಲಯುತ ಮಾಡಲು ಕೆಲವು ಸಮಯ ಬೇಕು. ಅದನ್ನು ಮಾರ್ಚ್‌ ಅನಂತರ ಮಾಡಿಕೊಳ್ಳುತ್ತೇವೆ ಎಂದಿದ್ದೆವು. ಅದಾದ ಬಳಿಕ ಈಗ ಕಾಮಗಾರಿ ನಡೆಯುತ್ತಿದೆ ಎಂದರು.

ಮಣಿರಾಜ್‌ ಶೆಟ್ಟಿ, ಜಯರಾಮ್‌ ಸಾಲ್ಯಾನ್‌, ನವೀನ್‌ ನಾಯಕ್‌, ಪ್ರವೀಣ್‌ ಸಾಲ್ಯಾನ್‌, ರಮೇಶ್‌ ಕಿಣಿ, ಉದಯ್‌ ಹೆಗ್ಡೆ, ದಯಾನಂದ, ಸಚ್ಚಿದಾನಂದ, ವಿಕ್ರಮ್‌ ಹೆಗ್ಡೆ, ಪ್ರಶಾಂತ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next