ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕಾರಾಗೃಹ ಇದೀಗ ಶುಚಿತ್ವ’ ವಿಚಾರದಲ್ಲಿ ದೇಶದ ಇತರೆ ಕಾರಾಗೃಹಗಳಿಗೆ ಮಾದರಿಯಾಗಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹವು ದೇಶದಲ್ಲೇ ಹೆಚ್ಚು ಶುಚಿತ್ವ ಹೊಂದಿರುವ ಜೈಲು’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇಂದ್ರ ಕಾರಾಗೃಹದ ಆಹಾರ ಗುಣಮಟ್ಟ ಮತ್ತು ಸ್ವತ್ಛತೆಗೆ ಕೇಂದ್ರ ಸರ್ಕಾರದ ಫುಡ್ ಸೆಕ್ಯೂರಿಟಿ ಮತ್ತು ಸೆಫ್ಟಿ ಅಥಾರಿಟಿ ಆಫ್ ಇಂಡಿಯಾ(ಎಫ್ಎಸ್‌ಎಸ್‌ಎಐ)4 ಸ್ಟಾರ್ ರೇಟಿಂಗ್ ನೀಡಿ ಪ್ರಮಾಣೀಕರಿಸಿದೆ.
ಇತ್ತೀಚೆಗೆ ಕೇಂದ್ರ ಗೃಹ ಸಚಿವಾಲಯ ದೇಶದ 1,319 ಜೈಲುಗಳ ಶುಚಿತ್ವದ ಬಗ್ಗೆ ಸರ್ವೆ ನಡೆಸಿತ್ತು. ಈ ಬೆನ್ನಲ್ಲೇ ಆ.26ರಂದು ಕೇಂದ್ರ ಸರ್ಕಾರದ ಐವರು ಅಧಿಕಾರಿಗಳು ಜೈಲಿಗೆ ಭೇಟಿ ನೀಡಿ ಪ್ರತಿ ವಿಭಾಗಕ್ಕೂ ಖುದ್ದು ಭೇಟಿ ನೀಡಿ ಪರಿಶೀಲಿಸಿತ್ತು. ಇದೀಗ ಕೇಂದ್ರ ಸರ್ಕಾರವು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಅತಿ ಹೆಚ್ಚು ಶುಚಿತ್ವ ಮತ್ತು ಗುಣಮಟ್ಟ ನಿರ್ವಹಿಸಿರುವ ಜೈಲು ಎಂದು ಘೋಷಿಸಿದೆ.
2ನೇ ಸ್ಥಾನ ಆಂಧ್ರಪ್ರದೇಶ ವಿಶಾಖಪಟ್ಟಣ ಹಾಗೂ 3ನೇ ಸ್ಥಾನ ತಮಿಳುನಾಡಿನ ಪುಳಲು ಕೇಂದ್ರ ಕಾರಾಗೃಹಕ್ಕೆ ಬಂದಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹ ದೇಶದಲ್ಲೇ ಹೆಚ್ಚು ಶುಚಿತ್ವ ಹೊಂದಿರುವ ಜೈಲು ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಇದು ರಾಜ್ಯಕ್ಕೆ ಹೆಮ್ಮೆಯ ವಿಚಾರ.
ಅಲೋಕ್ ಮೋಹನ್, ಡಿಜಿಪಿ, ಕಾರಾಗೃಹ ಮತ್ತು ಸುಧಾರಣೆ ಸೇವೆ ಇಲಾಖೆ.