ಉಡುಪಿ: ನನೆಗುದಿಗೆ ಬಿದ್ದಿರುವ ಪರ್ಕಳ-ಮಣಿಪಾಲ ರಸ್ತೆ ಅಗಲಗೊಂಡು ಅಭಿವೃದ್ಧಿಯಾಗಬೇಕಾದರೆ ರಘುಪತಿ ಭಟ್ ಅವರು ಶಾಸಕರಾಗುವುದು ಅವಶ್ಯ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ನಗರಸಭಾ ಸದಸ್ಯ ದಿನಕರ ಶೆಟ್ಟಿ ಹೆರ್ಗ ಹೇಳಿದರು.
ಅವರು ಪರ್ಕಳದಲ್ಲಿ ಹೆರ್ಗ ಮಹಾಶಕ್ತಿ ಕೇಂದ್ರದ ಬೂತ್ ಸಮಿತಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಈ ರಸ್ತೆಯ ಅಭಿವೃದ್ಧಿಗಾಗಿ ಕಳೆದ ವರ್ಷ ಮೇ ತಿಂಗಳಲ್ಲಿ ಕೇಂದ್ರ ಸರಕಾರ ತ್ರೀ ಒನ್ ಹಂತದ ಪ್ರಕ್ರಿಯೆಗೆ ನೋಟಿಫಿಕೇಶನ್ ಹೊರಡಿ ಸಿತ್ತು. ಮುಂದಿನ ಹಂತದ ಭೂಸ್ವಾಧೀನ ಇತ್ಯಾದಿ ಪ್ರಕ್ರಿಯೆ ರಾಜ್ಯ ಸರಕಾರದಿಂದ ಆಗಬೇಕಾಗಿತ್ತು. ಕಾಮಗಾರಿ ಶೀಘ್ರವಾಗಿ ಆಗಬೇಕಾದರೆ ಭಟ್ ಅವರನ್ನು ಮತದಾರರು ಆಯ್ಕೆ ಮಾಡುವುದು ಅವಶ್ಯಕ ಎಂದು ಹೇಳಿದರು.
ಬಳಕೆಯಾಗದ 3 ಕೋ.ರೂ.
ಕಳೆದ ಬಾರಿ ಭಟ್ ಅವರು ಶಾಸಕರಾಗಿ¨ªಾಗ ಪ್ರಸ್ತುತ ಯೋಜನೆಗೆ ಚಾಲನೆ ನೀಡಿ ಈ ಬಗ್ಗೆ ಆಳವಾದ ಅಧ್ಯಯನ ಕೂಡ ಮಾಡಿ ಕಾಮಗಾರಿಗೆ ಸರಕಾರದಿಂದ 3 ಕೋ.ರೂ. ಅನುದಾನ ತಂದಿದ್ದರು. ಆದರೆ ಅನಂತರ ಕಾಂಗ್ರೆಸ್ ಸರಕಾರವು ಈ ಅನುದಾನವನ್ನು ಬಳಸದೆ ಯೋಜನೆ ಐದು ವರ್ಷಗಳ ಕಾಲ ಸ್ತಬ್ಧವಾಗುವಂತೆ ಮಾಡಿತು. ರಘುಪತಿ ಭಟ್ ಅವರು ಆಯ್ಕೆಯಾದರೆ ಕೇವಲ ಆರು ತಿಂಗಳಲ್ಲಿ ಎಲ್ಲ ಹಂತಗಳ ಪ್ರಕ್ರಿಯೆಗಳನ್ನು ಸಂಪೂರ್ಣಗೊಳಿಸಿ ಕಾಮಗಾರಿಗೆ ಚಾಲನೆ ನೀಡಲಿದ್ದೇವೆ ಎಂದು ಅವರು ಹೇಳಿದರು.
ನಗರಸಭಾ ಸದಸ್ಯ ಮಹೇಶ್ ಠಾಕೂರ್, ನಗರ ಪ್ರಧಾನ ಕಾರ್ಯದರ್ಶಿ ಉಪೇಂದ್ರ ನಾಯಕ್, ಅಲ್ಪಸಂಖ್ಯಾಕ ಮೋರ್ಚಾ ಉಪಾಧ್ಯಕ್ಷ ಅಲ್ವಿನ್ ಡಿ’ಸೋಜ, ವಾರ್ಡ್ ಅಧ್ಯಕ್ಷರಾದ ರವೀಂದ್ರ ನಾಯರ್, ಸುಧೀರ್ ಶೆಟ್ಟಿಗಾರ್, ಹೆರ್ಗ ಶಕ್ತಿ ಕೇಂದ್ರ ಅಧ್ಯಕ್ಷ ಸುಬ್ರಹ್ಮಣ್ಯ ಪೈ, ಪ್ರಧಾನ ಕಾರ್ಯದರ್ಶಿ ಹೇಮಂತ್ ಪರ್ಕಳ, ಬೂತ್ ಪ್ರಮುಖರಾದ ಸುಬ್ರಾಯ ಆಚಾರ್ಯ, ದಿವಾಕರ್ ಶೆಟ್ಟಿ, ಸುರೇಶ್ ಕೇಲ್ಕರ್, ನಿಕೇಶ್ ಶೆಟ್ಟಿ , ವಿN°àಶ್ ಮತ್ತಿತರರು ಉಪಸ್ಥಿತರಿದ್ದರು.