Advertisement

ಪ್ಯಾರಚೂಟ್‌ ರೆಜಮೆಂಟ್‌ ಸೇರೋ ಯೋಧರಿಗೆ ಕಠಿಣ ತರಬೇತಿ

06:35 AM Aug 19, 2017 | Team Udayavani |

ಬೆಂಗಳೂರು: ಭಾರತೀಯ ಸೇನೆಯ ಭಾಗವಾಗಿರುವ ಪ್ಯಾರಚೂಟ್‌ ರೆಜಮೆಂಟ್‌ಗೆ ಯೋಧರ ಆಯ್ಕೆ ಪ್ರಕ್ರಿಯೆ ಆರ್‌.ಟಿ.ನಗರದ ಪ್ಯಾರಚೂಟ್‌ ರೆಜಮೆಂಟ್‌ ತರಬೇತಿ ಕೇಂದ್ರದಲ್ಲಿ ನಡೆಯುತ್ತಿದೆ.

Advertisement

ಭಾರತೀಯ ಸೇನೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಪೈಕಿ ಸುಮಾರು 600 ಅಭ್ಯರ್ಥಿಗಳು ಇಲ್ಲಿ ನಾಲ್ಕು ಹಂತದಲ್ಲಿ ತರಬೇತಿ ಪಡೆಯುತ್ತಿದ್ದಾರೆ.ಸಾಮಾನ್ಯ ವ್ಯಕ್ತಿಯನ್ನು ಸೈನಿಕನಾಗಿ ಸಜ್ಜುಗೊಳಿಸುವ 34 ವಾರಗಳ ತರಬೇತಿಯಲ್ಲಿ 19 ವಾರ ಬೇಸಿಕ್‌ ತರಬೇತಿ ಹಾಗೂ ಉಳಿದ 15 ವಾರದ ಅಡ್ವಾನ್ಸ್‌ ಟ್ರೈನಿಂಗ್‌ ನೀಡಲಾಗುತ್ತದೆ. 19 ವಾರದ ತರಬೇತಿ ನಂತರ 4 ವಾರ ರಜೆ ಇರುತ್ತದೆ. ಮಹಿಳಾ ಸೈನಿಕರಲ್ಲಿ, ಬದಲಾಗಿ ಮಹಿಳಾ ಅಧಿಕಾರಿಗಳು, ವೈದ್ಯರು, ನರ್ಸ್‌ ಇದ್ದಾರೆ. ಪ್ಯಾರ ರೆಜಮೆಂಟ್‌ನಲ್ಲಿ 10 ಸಾವಿರಕ್ಕೂ ಅಧಿಕ ಯೋಧರಿದ್ದಾರೆಂದು ಬ್ರಿಗೇಡಿಯರ್‌ ವಿಕಾಸ್‌ ಸೈನಿ ಮಾಹಿತಿ ನೀಡಿದರು.

ಫೈರಿಂಗ್‌: ಸೇನೆಗೆ ಸೇರುವವರಿಗೆ ಆರಂಭದಲ್ಲಿ ಶೂಟ್‌(ಫೈರಿಂಗ್‌) ಮಾಡುವುದು ಹೇಗೆ ಮತ್ತು ಅದಕ್ಕಾಗಿ ಅನುಸರಿಸುವ ಕ್ರಮದ ಬಗ್ಗೆ ತರಬೇತಿ ನೀಡಲಾಗುತ್ತಿದೆ. 25 ಮೀಟರ್‌ನಿಂದ 400 ಮೀ. ವರೆಗೂ ಶೂಟ್‌ ಮಾಡುವುದನ್ನು ಕಲಿಸಲಾಗುತ್ತಿದೆ. ವಿವಿಧ ಮಾದರಿಯ ರೈಫ‌ಲ್‌ ಮೂಲಕ ತರಬೇತಿ ಮೂರು ಹಂತದಲ್ಲಿ ನಡೆಯಲಿದೆ. ಜೀರೊ ಫೈರಿಂಗ್‌, ಅಪ್ಲಿಕೇಷನ್‌ ಫೈರಿಂಗ್‌ ಹಾಗೂ ಕ್ಲಾಸಿಫಿಕೇಷನ್‌ ಫೈರಿಂಗ್‌ ಇರುತ್ತದೆ ಎಂದು ಟ್ರೈನಿಂಗ್‌ ಕಮಾಡೆಂಟ್‌ ಲೆಫಿನೆಂಟ್‌ ಕರ್ನಲ್‌ ಪಿ.ಮನೋಜ್‌ ಹೇಳಿದರು.

ದೈಹಿಕ ಕಸರತ್ತು: ಆಕಾಶದೆತ್ತರದಲ್ಲಿ ನಿರ್ಮಿಸಿರುವ ಕಂಬಿಗಳ ಮೇಲೆ ಯಾವುದೇ ಆಧಾರವಿಲ್ಲದೆ ನಡೆಯುವುದು ಸೇರಿ ದೈಹಿಕ ಸಾಮರ್ಥ್ಯ ಹೆಚ್ಚಿಸುವ ವಿಧಾನವನ್ನು ಕಸರತ್ತಿನ ಮೂಲಕ ಹೇಳಿ ಕೊಡಲಾಗುತ್ತದೆ. ಸೈನಿಕನಾಗಿ ರೂಪುಗೊಳ್ಳುತ್ತಿದ್ದಂತೆ ಆತ್ಮಸ್ಥೈರ್ಯ ಹೆಚ್ಚಿಸುವುದು, ಯಾವುದೇ ಸಂದರ್ಭದಲ್ಲೂ ಭಯ ಪಡದಂತೆ ಇರುವುದು ಹೇಗೆ ಎಂಬುದನ್ನು ಕಲಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಹಗ್ಗದ ಮೇಲೆ ನಡೆಯುವುದು, ಕಂಬಿ ಹತ್ತುವುದು, ನದಿ ದಾಟುವುದು, ಸೇರಿ 32 ರೀತಿಯ ಟಾಸ್ಕ್ ಮೂಲಕ ತರಬೇತಿ
ನೀಡಲಾಗುತ್ತದೆ. ಹಾಗೆಯೇ ಪ್ಯಾರರೆಜಮೆಂಟ್‌ಗೆ ಮುಖ್ಯವಾಗಿರುವ ಪ್ಯಾರಾಚೂಟ್‌ ಜಂಪಿಂಗ್‌ ಕೂಡಕಲಿಸಿಕೊಡಲಾಗುತ್ತಿದೆ. ಹ್ಯಾಲಿಕ್ಯಾಪ್ಟರ್‌ ಮೂಲಕ ಇಳಿಯುವ ವಿಧಾನ, ಲ್ಯಾಂಡ್‌ ಆದ ನಂತರ ಏನು ಮಾಡಬೇಕು ಎಂಬಿತ್ಯಾದಿ ಎಲ್ಲ ಅಂಶಗಳನ್ನು ಕಲಿಸಿಕೊಡಲಾಗುತ್ತಿದೆ.

Advertisement

ದೈಹಿಕ ಸಾಮರ್ಥ್ಯ ವೃದ್ಧಿಸುವ ತರಬೇತಿ ಜತೆಗೆ ಬೌದ್ಧಿಕ ಶಕ್ತಿ ಹೆಚ್ಚಿಸುವ ತರಬೇತಿಯನ್ನೂ ನೀಡಲಾಗುತ್ತಿದೆ. ಒಟ್ಟು ಆಯ್ಕೆಯಲ್ಲಿ ಶೇ.60ರಷ್ಟು ಮಂದಿ ಮಾತ್ರ ಉತ್ತೀರ್ಣರಾಗುತ್ತಾರೆ. 40ರಷ್ಟು ಮಂದಿ ಅನುತ್ತೀರ್ಣರಾಗಿ ಬೇರೆ ವಿಭಾಗ ಸೇರಿಕೊಳ್ಳುತ್ತಾರೆ ಎಂಬ ಮಾಹಿತಿ ನೀಡಿದರು.”

ಅಭ್ಯರ್ಥಿಗಳ ದಿನಚರಿ
ಬೆಳಗ್ಗೆ 4.30ಕ್ಕೆ ತರಬೇತಿ ಆರಂಭವಾಗುತ್ತದೆ. ಬೆಳಗ್ಗಿನ ತಿಂಡಿ, ಮಧ್ಯಾಹ್ನ ಊಟ, ವಿಶೇಷ ತರಗತಿ, ಸಂಜೆಯ ತಾಲೀಮು ಸೇರಿ ರಾತ್ರಿ 10 ಗಂಟೆಯೊಳಗೆ ಎಲ್ಲ ರೀತಿಯ ಚಟುವಟಿಕೆ ಮುಗಿಯುತ್ತದೆ. ಪ್ರಾಯೋಗಿಕ ಹಾಗೂ ಥಿಯರಿ ಎರಡು ವಿಭಾಗದಲ್ಲೂ ತರಬೇತಿ ಇರುತ್ತದೆ. ವಾಲಿಬಾಲ್‌, ಬಾಕ್ಸಿಂಗ್‌, ಕ್ರಾಸ್‌ಕಂಟ್ರಿ ರೇಸ್‌, ಬಾಸ್ಕೇಟ್‌ ಬಾಲ್‌, ಫ‌ುಟ್‌ಬಾಲ್‌ ಆಟವೂ ಇರುತ್ತದೆ. ರಾತ್ರಿ ಮಲಗುವ ಮೊದಲು ನಾಳೆಯ ಕಾರ್ಯಕ್ರಮದ ವಿವರದ ಜತೆಗೆ ಸಿದ್ಧತೆಗೂ ಸೂಚನೆ ನೀಡಲಾಗುತ್ತದೆ. ಅಭ್ಯರ್ಥಿಗಳ ಇಚ್ಛೆಯ ಊಟಕ್ಕೆ
ಅವಕಾಶವಿದೆ .

Advertisement

Udayavani is now on Telegram. Click here to join our channel and stay updated with the latest news.

Next