Advertisement

ಮಡಿಕೇರಿಯಲ್ಲಿ ಪ್ಯಾರಾ ಗ್ಲೈಡರ್ ತುರ್ತು ಭೂಸ್ಪರ್ಶ: ತಪ್ಪಿದ ಅನಾಹುತ

12:35 AM Jan 15, 2023 | Team Udayavani |

ಮಡಿಕೇರಿ: ಪೊನ್ನಂಪೇಟೆ ನಿವಾಸಿ ಎಂ. ಮುತ್ತಣ್ಣ ಅವರಿಗೆ ಸೇರಿದ ಪ್ಯಾರಾ ಗ್ಲೈಡರ್ ಹಾರಾಟದ ವೇಳೆ ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿದ ಘಟನೆ ಪೊನ್ನಂಪೇಟೆ ಸಮೀಪದ ನಿಟ್ಟೂರು ಗ್ರಾಮದಲ್ಲಿ ಸಂಭವಿಸಿದೆ.

Advertisement

ಮುತ್ತಣ್ಣ ತಮ್ಮ ಸ್ವಂತ ಸ್ಥಳದಲ್ಲಿ ಕೆಲವು ಸಮಯದಿಂದ ರನ್‌ ವೇ ಸಹಿತ 2 ಸೀಟಿನ ಪ್ಯಾರಾ ಗ್ಲೈಡಿಂಗ್‌ ನಡೆಸುತ್ತಿದ್ದರು. ಎಂದಿನಂತೆ ಶನಿವಾರ ಸಂಜೆ 4.45ರ ಸಮಯದಲ್ಲಿ ಪ್ಯಾರಾ ಹಾರಾಡುತ್ತಿದ್ದಾಗ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ನಿಯಂತ್ರಣ ಕಳೆದುಕೊಂಡು ನೇರವಾಗಿ ಬಾನಿನಿಂದ ಕೆಳಗೆ ಇಳಿದ ಗ್ಲೆ„ಡರ್‌ ನಿಟ್ಟೂರು ಲಕ್ಷ್ಮಣ ತೀರ್ಥ ನದಿಯ ಸೇತುವೆ ಪಕ್ಕದ ಕಾಂಕ್ರೀಟ್‌ ರಸ್ತೆಯಲ್ಲಿ ತುರ್ತು ಭೂ ಸ್ಪರ್ಶ ಮಾಡಿತು. ಗ್ಲೈಡರ್‌ನ ಮುಂಭಾಗ ಮುರಿಯಲ್ಪಟ್ಟಿದ್ದು, ಚಕ್ರ ಸಹಿತ ಕೆಲವು ಭಾಗಗಳಿಗೆ ಹಾನಿಯಾಗಿದೆ. ಪೈಲಟ್‌ ಹಾಗೂ ಹಿಂಬದಿ ಸವಾರ ಅದೃಷ್ಟವಶಾತ್‌ ಅಪಾಯದಿಂದ ಪಾರಾಗಿದ್ದಾರೆ.

ಘಟನೆ ಕುರಿತು ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾನಿಗೀಡಾದ ಗ್ಲೈಡರ್‌ ಅನ್ನು ಟ್ರ್ಯಾಕ್ಟರ್‌ ಮೂಲಕ ಸ್ಥಳಾಂತರಿಸಲಾಯಿತು.

ಇದನ್ನೂ ಓದಿ: ನಗರಸಭೆಯ ಸ್ಥಾಯೀ ಸಮಿತಿಯ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ

Advertisement

Udayavani is now on Telegram. Click here to join our channel and stay updated with the latest news.

Next