Advertisement

Madikeri ಈಜಲು ತೆರಳಿದ ವ್ಯಕ್ತಿ ನೀರುಪಾಲು

12:34 AM Apr 07, 2024 | Team Udayavani |

ಮಡಿಕೇರಿ: ಹೆರೂರು ಬಳಿಯ ಹಾರಂಗಿ ಹಿನ್ನೀರಿನಲ್ಲಿ ಈಜಲು ತೆರಳಿದ ವ್ಯಕ್ತಿ ನೀರು ಪಾಲಾಗಿದ್ದಾರೆ. ಬಾಳುಗೋಡು ನಿವಾಸಿ ಬಾಲು (40) ಮೃತರು ಎಂದು ಗುರುತಿಸಲಾಗಿದೆ.

Advertisement

ಬಾಲು ಸಂಬಂಧಿಕರ ಮನೆಗೆ ಬಂದಿದ್ದರು ಎನ್ನಲಾಗಿದೆ. ಜಾನುವಾರುಗಳಿಗೆ ನೀರು ಕೊಟ್ಟು ನದಿಯತ್ತ ತೆರಳಿದ ಇವರು, ನೀರಿಗಿಳಿದು ಈಜಲು ಮುಂದಾಗಿದ್ದರು ಎನ್ನಲಾಗಿದೆ. ಆದರೆ, ಈ ವೇಳೆ ಕಾಲಿಗೆ ಮೀನಿನ ಬಲೆ ಸಿಲುಕಿ ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಸುಂಟಿಕೊಪ್ಪ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next