Advertisement

Madikeri – Mangaluru ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು

12:33 AM Apr 07, 2024 | Team Udayavani |

ಮಡಿಕೇರಿ: ಇಲ್ಲಿಗೆ ಸಮೀಪದ ತಾಳತ್‌ ಮನೆ ಸಮೀಪ ಹೆದ್ದಾರಿಯಲ್ಲಿ ಶನಿವಾರ ಮಧ್ಯಾಹ್ನ ತಾಂತ್ರಿಕ ದೋಷದಿಂದ ಕಾರಿನಲ್ಲಿ ಬೆಂಕಿ ಉಂಟಾಗಿ ಹೊತ್ತಿ ಉರಿದಿದೆ.

Advertisement

ಮಂಗಳೂರು ಕಡೆಯಿಂದ ಮಡಿಕೇರಿಯತ್ತ ಬರುತ್ತಿದ್ದ ಕಾರಿನ ಇಂಜಿನ್‌ ನಲ್ಲಿ ತಾಂತ್ರಿಕ ದೋಷವುಂಟಾಗಿ ಬೆಂಕಿ ಆವರಿಸಿಕೊಂಡಿದೆ. ಅಗ್ನಿಯ ಕೆನ್ನಾಲಿಗೆಗೆ ಕಾರು ಸಂಪೂರ್ಣವಾಗಿ ಸುಟ್ಟುಹೋಗಿದೆ. ಬೆಂಕಿಯ ಜ್ವಾಲೆ ಪಕ್ಕದ ಕಾಡಿಗೆ ಹಬ್ಬಿದ್ದು, ಮಡಿಕೇರಿ ಅಗ್ನಿ ಶಾಮಕ ದಳದವರು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದರು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವಕರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next