Advertisement

“ಪಪ್ಪು’ಜಾಗಕ್ಕೆ ಯುವರಾಜ

11:45 AM Nov 16, 2017 | Team Udayavani |

ಅಹಮದಾಬಾದ್‌: ಗುಜರಾತ್‌ ಚುನಾವಣಾ ಪ್ರಚಾರ ಜಾಹೀರಾತಿನಲ್ಲಿ ಬಿಜೆಪಿ ಬಳಸಿದ್ದ “ಪಪ್ಪು’ ಪದಕ್ಕೆ ಚುನಾವಣಾ ಆಯೋಗ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಪಕ್ಷವು ಆ ಪದದ ಬದಲಿಗೆ “ಯುವರಾಜ’ ಎಂಬ ಪದ ಬಳಕೆ ಮಾಡಿದೆ.

Advertisement

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಅವಹೇಳನ ಮಾಡಲು ಪಪ್ಪು ಎಂಬ ಪದ ಬಳಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ್ದ ಚುನಾವಣಾ ಆಯೋಗ ಮಂಗಳವಾರವಷ್ಟೇ ಆ ಪದವನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಪದವನ್ನು ಬದಲಿಸಿರುವ ಬಿಜೆಪಿ, “ಪಪ್ಪು ಎಂಬ ಪದ ಯಾವ ವ್ಯಕ್ತಿಗೂ ಸಂಬಂಧಿ ಸಿದ್ದಲ್ಲ. ಆದರೂ, ನಾವು ಆಯೋಗದ ಸೂಚ ನೆಗೆ ಒಪ್ಪಿ ಪದವನ್ನು ಬದಲಿಸಿದ್ದೇವೆ’ ಎಂದಿದೆ.

ಈ ನಡುವೆ, ಗುಜರಾತ್‌ ಕಾಂಗ್ರೆಸ್‌ನ ಹಿರಿಯ ನಾಯಕ ವಿಜಯ್‌ ಕೆಲ್ಲಾ ಬುಧವಾರ ರಾಜೀನಾಮೆ ನೀಡಿದ್ದಾರೆ. ಪಕ್ಷವು ನಿರ್ದಿಷ್ಟ ಸಮುದಾಯ ಮತ್ತು ಜಾತಿಯ ಜನರಿಗಷ್ಟೇ ಆದ್ಯತೆ ನೀಡುತ್ತಿದೆ. ನಿಷ್ಠಾವಂತ ಕಾರ್ಯ ಕರ್ತರನ್ನು ಕಡೆಗಣಿಸುತ್ತಿದೆ. ಹೀಗಾಗಿ ರಾಜೀ ನಾಮೆ ನೀಡುತ್ತಿದ್ದೇನೆ ಎಂದಿದ್ದಾರೆ ಕೆಲ್ಲಾ.

ಹಾರ್ದಿಕ್‌ ಬೆನ್ನಿಗೆ ನಿಂತ ಮೆವಾನಿ: ಇದೇ ವೇಳೆ, ಪಟೇಲ್‌ ಮೀಸಲಾತಿ ಪರ ಹೋರಾಟಗಾರ ಹಾರ್ದಿಕ್‌ ಪಟೇಲ್‌ ಅವರ ವಿವಾದಾತ್ಮಕ ವಿಡಿಯೋ ಬಿಡುಗಡೆಯಾದ ಬೆನ್ನಲ್ಲೇ ದಲಿತ ಹೋರಾಟ ಗಾರ ಜಿಗ್ನೇಶ್‌ ಮೆವಾನಿ ಅವರು ಹಾರ್ದಿಕ್‌ಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ಫೇಸ್‌ಬುಕ್‌ ಪುಟದಲ್ಲಿ ಬರೆದಿರುವ ಮೆವಾನಿ, “ರಾಜಕಾರ ಣಿಗಳು ಎಷ್ಟು ಕೀಳುಮಟ್ಟಕ್ಕೆ ಇಳಿಯುತ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿ. ಪ್ರೀತಿಯ ಹಾರ್ದಿಕ್‌ ಪಟೇಲ್‌, ನಾನು ನಿಮ್ಮೊಂದಿಗಿದ್ದೇನೆ. ಲೈಂಗಿಕ ಕ್ರಿಯೆ ನಡೆಸುವಂಥ ಹಕ್ಕು ಎಲ್ಲರ ಮೂಲಭೂತ ಹಕ್ಕುಗಳಲ್ಲಿ ಒಂದು. ನಿಮ್ಮ ಖಾಸಗಿತನವನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next