Advertisement

ಟೆಸ್ಟ್ ಗೆ ಪಂತ್ ಪಾದಾರ್ಪಣೆ :3ನೇ ಟೆಸ್ಟ್ ಆದರೂ ಗೆಲ್ಲುತ್ತಾ ಭಾರತ?

03:06 PM Aug 18, 2018 | |

ಲಂಡನ್: ನಾಟಿಗ್ಯಾಂನ ಟ್ರೆಂಟ್ ಬ್ರಿಜ್ ನಲ್ಲಿ ಶನಿವಾರ ಆರಂಭವಾದ  ಭಾರತ -ಇಂಗ್ಲೆಂಡ್ ನಡುವಿನ ತೃತೀಯ ಟೆಸ್ಟ್ ಪಂದ್ಯದಲ್ಲಿ ಭಾರತದ ಯುವ ವಿಕೆಟ್ ಕೀಪರ್, ಬ್ಯಾಟ್ಸಮನ್ ರಿಷಭ್ ಪಂತ್ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ದಿನೇಶ್ ಕಾರ್ತಿಕ್ ಬದಲಿಗೆ ರಿಷಬ್ ಪಂತ್ ಅವಕಾಶ ಪಡೆದಿದ್ದಾರೆ. ಕಳೆದ ಎರಡು ಪಂದ್ಯ ಸೋತಿದ್ದ ಭಾರತ ಮೂರನೇ ಪಂದ್ಯ ಗೆಲ್ಲುವ ಹುರುಪಿನಿಂದ ಆಡಲು ಸಜ್ಜಾಗಿದೆ. ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. 

Advertisement

20ರ ಹರೆಯದ ದೆಹಲಿ ಮೂಲದ ಸ್ಪೋಟಕ  ಬ್ಯಾಟ್ಸಮನ್ ಪಂತ್ ಈ ಮೊದಲು ಇಂಗ್ಲೆಂಡ್ ವಿರುದ್ದವೇ ಬೆಂಗಳೂರಿನಲ್ಲಿ ಟಿ20 ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಇದೀಗ ಮತ್ತೆ ಇಂಗ್ಲೆಂಡ್ ವಿರುದ್ದ ತಮ್ಮ ಮೊದಲ ಅಂತಾರಾಷ್ತ್ರೀಯ  ಟೆಸ್ಟ್ ಪಂದ್ಯವನ್ನಾಡಲು ಭಾರತದ 291ನೇ ಟೆಸ್ಟ್ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದಾರೆ.

ದೆಹಲಿ ಪರವಾಗಿ 23 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಈ ಎಡಗೈ ಬ್ಯಾಟ್ಸಮನ್ 54.50ರ ಸರಾಸರಿಯಲ್ಲಿ 1744 ರನ್ ಗಳಿಸಿದ್ದಾರೆ. ಕಳೆದ ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ನಲ್ಲಿ ಪರವಾಗಿ ಅಬ್ಬರಿಸಿದ್ದ ಪಂತ್ 14 ಪಂದ್ಯಗಳಿಂದ 684 ರನ್ ಗಳಿಸಿ ಮಿಂಚಿದ್ದರು. 

ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ನಂತರ ಭಾರತ ಟೆಸ್ಟ್ ತಂಡದಲ್ಲಿ ವೃದ್ಧಿಮಾನ್ ಸಾಹಾ ಮತ್ತು ದಿನೇಶ್ ಕಾರ್ತಿಕ್ ವಿಕೇಟ್ ಕೀಪರ್ ಆಗಿ  ಪ್ರತಿನಿಧಿಸಿದ್ದರು. ಸಾಹಾ ಗಾಯಾಳಾಗಿ ತಂಡದಿಂದ ಹೊರಬಿದ್ದರೆ, ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಡಿದ್ದ ಕಾರ್ತಿಕ್ ಕೂಡಾ ಗಾಯಾಳಾಗಿ ಈ ಪಂದ್ಯದಿಂದ ಹೊರಬಿದ್ದಿರುವುದರಿಂದ ಪಂತ್‌ಗೆ ಅವಕಾಶ ಸಿಕ್ಕಿದೆ.  

ಈ ಪಂದ್ಯದಲ್ಲಿ ಭಾರತ ತಂಡದಲ್ಲಿ ಮೂರೂ ಬದಲಾವಣೆ ಮಾಡಿದ್ದು , ಕುಲದೀಪ್ ಬದಲಿಗೆ ಜಸ್ಪ್ರೀತ್  ಬುಮ್ರ, ಮುರಳಿ ವಿಜಯ್ ಬದಲಿಗೆ ಶಿಖರ್ ಧವನ್ ಗೆ ಅವಕಾಶ ನೀಡಲಾಗಿದೆ. ಇಂಗ್ಲೆಂಡ್ ತಂಡ ಈ ಪಂದ್ಯಕ್ಕಾಗಿ ಒಂದು ಬದಲಾವಣೆ ಮಾಡಿದ್ದು ಸ್ಯಾಮ್ ಕರನ್ ಬದಲಿಗೆ ಕಳೆದ ಪಂದ್ಯ ತಪ್ಪಿಸಿಕೊಂಡಿದ್ದ ಬೆನ್ ಸ್ಟೋಕ್ಸ್ ಅವಕಾಶ ಪಡೆದಿದ್ದರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next