Advertisement

ಡೆಲ್ಲಿ ಅಬ್ಬರಕ್ಕೆ ಬಾಗಿದ ಲಯನ್‌; ಸ್ಫೋಟಿಸಿದ ಸಂಜು, ರಿಷಭ್‌ ಪಂತ್‌

12:43 PM May 05, 2017 | |

ನವದೆಹಲಿ: ರಿಷಭ್‌ ಪಂತ್‌, ಸಂಜು ಸ್ಯಾಮ್ಸನ್‌ ಸಿಡಿಲಬ್ಬರದ ಬ್ಯಾಟಿಂಗ್‌ ನೆರವಿನಿಂದ ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡ ಗುಜರಾತ್‌ ಲಯನ್ಸ್‌ ವಿರುದ್ಧ 7 ವಿಕೆಟ್‌ ಜಯಸಾಧಿಸಿದೆ. ಇದು ಈ ಐಪಿಎಲ್‌ನಲ್ಲಿ ಅತಿ ದೊಡ್ಡ ಮೊತ್ತದ ಯಶಸ್ವಿ ಚೇಸಿಂಗ್‌ ಆಗಿದೆ.

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ 20 ಓವರ್‌ಗೆ 7 ವಿಕೆಟ್‌ ಕಳೆದುಕೊಂಡು 208 ರನ್‌ ಬಾರಿಸಿತ್ತು. ದೊಡ್ಡ ಮೊತ್ತ ಗುರಿ ಬೆನ್ನು ಹತ್ತಿದ ಗುಜರಾತ್‌17.3 ಓವರ್‌ಗೆ 3 ವಿಕೆಟ್‌ ಕಳೆದುಕೊಂಡು 214 ರನ್‌ ಬಾರಿಸಿ ಗುರಿ ಸಾಧಿಸಿತು. 

ಆರಂಭಿಕರಾಗಿ ಬಂದ ನಾಯಕ ಕರುಣ್‌ ನಾಯರ್‌(12) ತಂಡದ ಮೊತ್ತ 24 ರನ್‌ ಆಗುತ್ತಿದಂತೆ ವಿಕೆಟ್‌ ಕಳೆದುಕೊಂಡರು. ಆದರೆ ನಂತರ ಜತೆಯಾದ ಸಂಜು ಸ್ಯಾಮ್ಸನ್‌ ಮತ್ತು ರಿಷಭ್‌ ಪಂತ್‌ ಬೌಂಡರಿ, ಸಿಕ್ಸರ್‌ ಮೂಲಕ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತೆಗೆದುಕೊಂಡು ಹೋದರು. ಈ ಜೋಡಿ 2ನೇ ವಿಕೆಟ್‌ಗೆ 143 ರನ್‌ ಜತೆಯಾಟ ನೀಡಿದರು. ತಂಡದ ಮೊತ್ತ 167 ಆಗಿರುವಾಗ ಸ್ಯಾಮ್ಸನ್‌ ಜಡೇಜಗೆ ವಿಕೆಟ್‌ ಒಪ್ಪಿಸಿದರು. ಸ್ಯಾಮ್ಸನ್‌ 31 ಎಸೆತದಲ್ಲಿ 7 ಸಿಕ್ಸ್‌ ಸೇರಿದಂತೆ 61 ರನ್‌ ಬಾರಿಸಿದರು. ಬಳಿಕ ರಿಷಭ್‌ ಪಂತ್‌ ಬಸಿಲ್‌ ಥಾಂಪಿ ಬೌಲಿಂಗ್‌ನಲ್ಲಿ ವಿಕೆಟ್‌ ಕಳೆದುಕೊಂಡರು. 43 ಎಸೆತ ಎದುರಿಸಿದ ಪಂತ್‌ 6 ಬೌಂಡರಿ, 9 ಸಿಕ್ಸರ್‌ ಸೇರಿದಂತೆ 97 ರನ್‌ ಬಾರಿಸಿ ಶತಕದಿಂದ ವಂಚಿತರಾದರು. ಕೊನೆಯಲ್ಲಿ ಶ್ರೇಯಸ್‌ ಐಯ್ಯರ್‌ (ಅಜೇಯ 14) ಮತ್ತು ಆ್ಯಂಡರ್ಸನ್‌ (ಅಜೇಯ 18) ಗೆಲುವಿನ ದಡ ಸೇರಿಸಿದರು.

ರೈನಾ, ಕಾರ್ತಿಕ್‌ ಅರ್ಧಶತಕ: ನಾಯಕ ಸುರೇಶ್‌ ರೈನಾ ಮತ್ತು ದಿನೇಶ್‌ ಕಾರ್ತಿಕ್‌ ಅವರ ಅಮೋಘ ಅರ್ಧಶತಕದಿಂದಾಗಿ ಗುಜರಾತ್‌ ಲಯನ್ಸ್‌ ತಂಡವು ಗುರುವಾರದ ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದೆದುರು 7 ವಿಕೆಟಿಗೆ  208 ರನ್ನುಗಳ ಬೃಹತ್‌ ಮೊತ್ತ ಪೇರಿಸಿದೆ. 10 ರನ್‌ ಗಳಿಸುವಷ್ಟರಲ್ಲಿ ಡ್ವೇನ್‌ ಸ್ಮಿತ್‌ ಮತ್ತು ಬ್ರೆಂಡನ್‌ ಮೆಕಲಮ್‌ ಅವರನ್ನು ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಆದರೆ ರೈನಾ ಮತ್ತು ದಿನೇಶ್‌ ಕಾರ್ತಿಕ್‌ ಭರ್ಜರಿ ಆಟವಾಡಿ ತಂಡವನ್ನು ಸುಸ್ಥಿತಿಗೆ ತಲುಪಿಸಿದರು. ಕೇವಲ 43 ಎಸೆತ ಎದುರಿಸಿದ ರೈನಾ 5 ಬೌಂಡರಿ ಮತ್ತು 4 ಸಿಕ್ಸರ್‌ ನೆರವಿನಿಂದ 77 ರನ್‌ ಗಳಿಸಿದರು. ರೈನಾ ಔಟಾದ ಸ್ವಲ್ಪ ಹೊತ್ತಿನಲ್ಲಿ ಕಾರ್ತಿಕ್‌ ಕೂಡ ಔಟಾದರು. 34 ಎಸೆತ ಎದುರಿಸಿದ್ದ ಅವರು 5 ಬೌಂಡರಿ ಮತ್ತು 5 ಸಿಕ್ಸರ್‌ ನೆರವಿನಿಂದ 65 ರನ್‌ ಹೊಡೆದಿದ್ದರು.

ಪಂದ್ಯದ ತಿರುವು
ಡೆಲ್ಲಿ ತಂಡದ ಸಂಜು ಸ್ಯಾಮ್ಸನ್‌, ರಿಷಭ್‌ ಪಂತ್‌ 2ನೇ ವಿಕೆಟ್‌ಗೆ ಕೇವಲ 63 ಎಸೆತದಲ್ಲಿ 143 ರನ್‌ ಜತೆಯಾಟ ಆಡಿ ಪಂದ್ಯಕ್ಕೆ ತಿರುವು ನೀಡಿದರು.

Advertisement

ಸ್ಕೋರ್‌ ಪಟ್ಟಿ
ಗುಜರಾತ್‌ ಲಯನ್ಸ್‌

ಡ್ವೇನ್‌ ಸ್ಮಿತ್‌    ರನೌಟ್‌    9
ಬಿ. ಮೆಕಲಮ್‌    ಸಿ ಪಂತ್‌ ಬಿ ರಬಾಡ    1
ಸುರೇಶ್‌ ರೈನಾ    ರನೌಟ್‌    77
ದಿನೇಶ್‌ ಕಾರ್ತಿಕ್‌    ಸಿ ಆ್ಯಂಡರ್ಸನ್‌ ಬಿ ಕಮಿನ್ಸ್‌    65
ಆರನ್‌ ಫಿಂಚ್‌    ಸಿ ಪಂತ್‌ ಬಿ ರಬಾಡ    27
ಇಶಾನ್‌ ಕಿಶನ್‌    ಸಿ ಅಯ್ಯರ್‌ ಬಿ ಕಮಿನ್ಸ್‌    4
ರವೀಂದ್ರ ಜಡೇಜ    ಔಟಾಗದೆ    10
ಜೇಮ್ಸ್‌ ಫಾಕ್ನರ್‌    ಸಿ ಬದಲಿಗ ಬಿ ಆ್ಯಂಡರ್ಸನ್‌    1
ಪ್ರದೀಪ್‌ ಸಂಗ್ವಾನ್‌    ಔಟಾಗದೆ    1
ಇತರ:        5
ಒಟ್ಟು  (20 ಓವರ್‌ಗಳಲ್ಲಿ 7 ವಿಕೆಟಿಗೆ)    208
ವಿಕೆಟ್‌ ಪತನ: 1-10, 2-10, 3-143, 4-158, 5-178, 6-189, 7-192
ಬೌಲಿಂಗ್‌:ಶಾದಾಬ್‌ ನದೀಮ್‌    2-0-28-0
ಕಾಗಿಸೊ ರಬಾಡ        4-0-28-2
ಪ್ಯಾಟ್‌ ಕಮಿನ್ಸ್‌        4-0-30-2
ಮೊಹಮ್ಮದ್‌ ಶಮಿ        3-0-40-0
ಅಮಿತ್‌ ಮಿಶ್ರಾ        2-0-23-0
ಮಾರ್ಲಾನ್‌ ಸಾಮ್ಯುಯೆಲ್ಸ್‌    2-0-22-0
ಕೋರಿ ಆ್ಯಂಡರ್ಸನ್‌        3-0-36-1

ಡೆಲ್ಲಿ ಡೇರ್‌ಡೆವಿಲ್ಸ್‌
ಸಂಜು ಸ್ಯಾಮ್ಸನ್‌    ಸಿ ಫಾಕ್ನರ್‌ ಬಿ ಜಡೇಜ    61
ಕರುಣ್‌ ನಾಯರ್‌    ಸಿ ಕಾರ್ತಿಕ್‌ ಬಿ ಸಂಗ್ವಾನ್‌    12
ರಿಷಬ್‌ ಪಂತ್‌    ಸಿ ಕಾರ್ತಿಕ್‌ ಬಿ ಥಂಪಿ    97
ಶ್ರೇಯಸ್‌ ಅಯ್ಯರ್‌    ಔಟಾಗದೆ    14
ಕೋರಿ ಆ್ಯಂಡರ್ಸನ್‌    ಔಟಾಗದೆ    18
ಇತರ:        12
ಒಟ್ಟು (17.3 ಓವರ್‌ಗಳಲ್ಲಿ 3 ವಿಕೆಟಿಗೆ)    214
ವಿಕೆಟ್‌ ಪತನ: 1-24, 2-167, 3-179
ಬೌಲಿಂಗ್‌:ಪ್ರದೀಪ್‌ ಸಂಗ್ವಾನ್‌    4-0-43-1
ಬಾಸಿಲ್‌ ಥಂಪಿ        4-0-40-1
ಜೇಮ್ಸ್‌ ಫಾಕ್ನರ್‌        2.3-0-35-0
ಸುರೇಶ್‌ ರೈನಾ        2-0-24-0
ಅಂಕಿತ್‌ ಸೋನಿ        2-0-26-0
ರವೀಂದ್ರ ಜಡೇಜ        2-0-18-1
ಡ್ವೇನ್‌ ಸ್ಮಿತ್‌        1-0-11-0

ಪಂದ್ಯಶ್ರೇಷ್ಠ: ರಿಷಬ್‌ ಪಂತ್‌

Advertisement

Udayavani is now on Telegram. Click here to join our channel and stay updated with the latest news.

Next