Advertisement

ಪನ್ನೀರ್‌ ಸೆಲ್ವಂ ಕ್ಯಾಂಪಿಗೆ ಇಂದು ಶಶಿಕಲಾ ಬಣದ 30 ಶಾಸಕರ ಸೇರ್ಪಡೆ ?

10:59 AM Feb 16, 2017 | Team Udayavani |

ಚೆನ್ನೈ :  ಉಸ್ತುವಾರಿ ಮುಖ್ಯಮಂತ್ರಿ ಓ. ಪನ್ನೀರಸೆಲ್ವಂ ಅವರ ಬಣಕ್ಕೆ ಇಂದು ಶಶಿಕಲಾ ಬಣದಿಂದ ಕನಿಷ್ಠ 30 ಶಾಸಕರು ಹರಿದು ಬರುವ ಸಾಧ್ಯತೆ ಇದೆ ಎನ್ನಲಾಗಿದೆ. 

Advertisement

ಕೆ ಪಳನಿಸ್ವಾಮಿ ಅವರು ರಾಜ್ಯಪಾಲ ಸಿ ವಿದ್ಯಾಸಾಗರ ರಾವ್‌ ಅವರನ್ನು ಭೇಟಿಯಾದ ಒಂದು ದಿನದ ಬಳಿಕ ತಮಿಳು ನಾಡು ರಾಜ್ಯಪಾಲರು ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕನನ್ನು ಸರಕಾರ ರಚಿಸುವಂತೆ ಇಂದು ಗುರುವಾರ ಕರೆಯುವ ಸಾಧ್ಯತೆ ಇದೆ.

ಪಳನಿ ಸ್ವಾಮಿ ಅವರು ಎಐಎಡಿಎಂಕೆ ಪ್ರಧಾನ ಕಾರ್ಯದಶಿರ ವಿ ಕೆ ಶಶಿಕಲಾ ನಟರಾಜನ್‌ ಕ್ಯಾಂಪಿನ ಭಾಗವಾಗಿದ್ದಾರೆ.

ರಾಜ್ಯಪಾಲರು ಎದುರಾಳಿ ಬಣದ ನೇತಾರನಾಗಿರುವ, ಉಸ್ತುವಾರಿ ಮುಖ್ಯಮಂತ್ರಿ ಓ ಪನ್ನೀರ್‌ ಸೆಲ್ವಂ ಅವರನ್ನು ಕೂಡ ಭೇಟಿಯಾಗಿರುವುದು ಗಮನಾರ್ಹ ವಿದ್ಯಮಾನವೆಂದು ತಿಳಿಯಲಾಗಿದೆ.

ನಿನ್ನೆ ಬುಧವಾರ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರು ಭ್ರಷ್ಟಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟ ಕಾರಣ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಮರಳಿದ್ದಾರೆ.

Advertisement

ಈ ನಡುವೆ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಅವರು “ಮೊದಲ ದಿನದಂದಲೇ ನಾನು ಶಶಿಕಲಾ ಅಥವಾ ಪಳನಿಸ್ವಾಮಿ ಅವರಿಗೆ ರಾಜ್ಯಪಾಲರು ಪ್ರಮಾಣ ವಚನವನ್ನು ಬೋಧಿಸಿ ಒಂದು ವಾರದೊಳಗೆ ಸದನ ಬಲಾಬಲ ಪರೀಕ್ಷೆಯನ್ನು ನಡೆಸಬೇಕೆಂದು ಹೇಳಿದ್ದೆ’ ಎಂದು ಇಂದು ಬೆಳಗ್ಗೆ ಟ್ವೀಟ್‌ ಮಾಡಿದ್ದಾರೆ.

ಇದೇ ವೇಳೆ ಪನ್ನೀರಸೆಲ್ವಂ ಕ್ಯಾಂಪಿನ ಹಿರಿಯ ನಾಯಕರೋರ್ವರು, ಇಂದು ಗಮನಾರ್ಹ ಸಂಖ್ಯೆಯ ಶಾಸಕರು ತಮ್ಮ ಬಣವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಮಾತ್ರವಲ್ಲ ಲೋಕೋಪಯೋಗಿ ಸಚಿವ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರಿಗೆ ಸರಕಾರ ರಚಿಸುವಂತೆ ರಾಜ್ಯಪಾಲರು ಕೇಳಿಕೊಳ್ಳಲಾರರು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next