Advertisement

ವಾಜಪೇಯಿ ಜನ್ಮದಿನಕ್ಕೆ ʼಮೇ ಅಟಲ್ ಹೂʼ ಸಿನಿಮಾದ ಫಸ್ಟ್‌ ಲುಕ್‌ ರಿಲೀಸ್; ಮಾಜಿ ಪ್ರಧಾನಿ ಪಾತ್ರದಲ್ಲಿ ಪಂಕಜ್‌ ತ್ರಿಪಾಠಿ

01:02 PM Dec 25, 2022 | Team Udayavani |

ಮುಂಬಯಿ: ಭಾರತದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನಾಗಿ ಇಂದು ಎಲ್ಲೆಡೆ ʼ ಸುಶಾಸನ ದಿನʼ (ಅಟಲ್‌ ದಿವಸ್)‌ ವನ್ನು ಆಚರಣೆ ಮಾಡಲಾಗುತ್ತಿದೆ. ಬಾಲಿವುಡ್‌ ನಲ್ಲಿ ವಾಜಪೇಯಿ ಅವರ ಹುಟ್ಟುಹಬ್ಬಕ್ಕೆ ʼ ಮೇ ಅಟಲ್ ಹೂʼ ಸಿನಿಮಾದ ಫಸ್ಟ್‌ ಲಿಕ್‌ ಪೋಸ್ಟರ್‌ ರಿಲೀಸ್‌ ಆಗಿದೆ.

Advertisement

ನಟ ಪಂಕಜ್‌ ತ್ರಿಪಾಠಿ ನಟಿಸುತ್ತಿರುವ ವಾಜಪೇಯಿ ಅವರ ಜೀವನಗಾಥೆಯ ಕಥಾಹಂದರವನ್ನು ಹೊಂದಿರುವ ʼ ಮೇ ಅಟಲ್ ಹೂʼ ಚಿತ್ರದ ಫಸ್ಟ್‌ ಪೋಸ್ಟರ್‌ ರಿಲೀಸ್‌ ಆಗಿದೆ. ಕವಿ, ರಾಜನೀತಿಜ್ಞ, ನಾಯಕ ಮತ್ತು ಮಾನವತಾವಾದಿ ಆಗಿದ್ದ ಅಟಲ್‌ ಭಾರತ ಕಂಡ ಶ್ರೇಷ್ಠ ಪ್ರಧಾನಿಗಳಲ್ಲಿ ಒಬ್ಬರು ಅವರ ಬದುಕು ಹಾಗೂ ರಾಜಕೀಯ ಜೀವನದ ಹಾದಿಯನ್ನು ಬಣ್ಣದ ಲೋಕದಲ್ಲಿ ತೋರಿಸುವ ಸಿನಿಮಾವೇ ʼಮೇ ಅಟಲ್ ಹೂʼ.

ಇದನ್ನೂ ಓದಿ: ಬಿಜೆಪಿ ಜತೆಗಿನ ಸಂಬಂಧ ಮುಗಿಯಿತು, ಮುಂದಿನ ಚುನಾವಣೆಯಲ್ಲೇ ಸ್ಪರ್ಧೆ ಮಾಡ್ತೇನೆ: ಗುಡುಗಿದ ರೆಡ್ಡಿ

ಫಸ್ಟ್‌ ಲುಕ್‌ ಹಾಗೂ ಮೋಷನ್‌ ಪಿಕ್ಚರ್‌ ರಿಲೀಸ್‌ ಆಗಿದ್ದು, ಇದರಲ್ಲಿ ಪಂಕಜ್‌ ತ್ರಿಪಾಠಿ ಥೇಟು ಅಟಲ್‌ ರಂತಯೇ ಉಡುಗೆ – ತೊಡುಗೆ, ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಅಟಲ್‌ ಅವರಂತೆ ನಿಂತುಕೊಂಡು, ಅವರಂತೆಯೇ ಕೂದಲು ಬಾಚಿಕೊಂಡು, ಕನ್ನಡಕ ಹಾಕಿಕೊಂಡರುವ ಪಂಕಜ್‌ ಅವರ ಲುಕ್‌ ನೋಡಿ ಪ್ರೇಕ್ಷಕರು ಭೇಷ್‌ ಎಂದಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರವಿ ಜಾಧವ್‌ ಈ ಸಿನಿಮಾವನ್ನು ನಿರ್ದಶಿಸಿದ್ದು, ಉತ್ಕರ್ಷ್ ನೈತಾನಿ ಅವರು ಬರೆದಿದ್ದಾರೆ. ಸಲೀಂ-ಸುಲೈಮಾನ್ ಅವರ ಮ್ಯೂಸಿಕ್‌, ಸಮೀರ್‌ ಅವರ ಲಿರಿಕ್ಸ್‌ ಚಿತ್ರಕ್ಕೆ ಇರಲಿದೆ. ಭಾನುಶಾಲಿ ಸ್ಟುಡಿಯೋಸ್ ಲಿಮಿಟೆಡ್ ಮತ್ತು ಲೆಜೆಂಡ್ ಸ್ಟುಡಿಯೋಸ್ ಸಿನಿಮಾವನ್ನು ಅರ್ಪಿಸುತ್ತಿದೆ. ವಿನೋದ್ ಭಾನುಶಾಲಿ, ಸಂದೀಪ್ ಸಿಂಗ್, ಸ್ಯಾಮ್ ಖಾನ್ ಮತ್ತು ಕಮಲೇಶ್ ಭಾನುಶಾಲಿ, ಜೀಶನ್ ಅಹ್ಮದ್ ಮತ್ತು ಶಿವ್ ಶರ್ಮಾ ಸಹ-ನಿರ್ಮಾಣ ಮಾಡಿದ್ದಾರೆ.

Advertisement

2023 ರ ಡಿಸೆಂಬರ್‌ ನಲ್ಲಿ ಸಿನಿಮಾ ತೆರೆಗೆ ಬರಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next