Advertisement

ಪಂಕಜ್‌ ಅಡ್ವಾಣಿಗೆ “ಏಶ್ಯನ್‌ ಬಿಲಿಯಡ್ಸ್‌’ಪ್ರಶಸ್ತಿ

06:55 AM Mar 25, 2018 | |

ಯಾನ್‌ಗಾನ್‌: ಮ್ಯಾನ್ಮಾರಿನ ಯಾನ್‌ಗಾನ್‌ನಲ್ಲಿ ನಡೆದ ಏಶ್ಯನ್‌ ಬಿಲಿಯರ್ಡ್ಸ್‌ ಸ್ಪರ್ಧೆಯಲ್ಲಿ ಹಾಲಿ ಚಾಂಪಿಯನ್‌ ಭಾರತದ ಪಂಕಜ್‌ ಅಡ್ವಾಣಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದ್ದಾರೆ. ಅವರು ಫೈನಲ್‌ ಹೋರಾಟದಲ್ಲಿ ತನ್ನ ಸಹ ಆಟಗಾರ ಬಿ. ಭಾಸ್ಕರ್‌ ಅವರೆದುರು 6-1 ಅಂತರದಿಂದ ಜಯಿಸಿದರು.

Advertisement

ಏಶ್ಯನ್‌ ಮಟ್ಟದಲ್ಲಿ ಇದು ಪಂಕಜ್‌ ಗೆದ್ದ 11ನೇ ಚಿನ್ನವಾಗಿದೆ.ವನಿತಾ ವಿಭಾಗದ ಏಶ್ಯನ್‌ ಸ್ನೂಕರ್‌ನಲ್ಲಿ ಭಾರತದ ಅಮೀ ಕಮಾನಿ ಅವರು ಥಾçಲೆಂಡಿನ ಸಿರಿಪಪೋರ್ನ್ ನುವಾಂತಖಾಂಜನ್‌ ಅವರನ್ನು 3-0 ಅಂತರದಿಂದ ಉರುಳಿಸಿ ಪ್ರಶಸ್ತಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next