ಕಾಬೂಲ್: ಅಫ್ಘಾನಿಸ್ತಾನದ ಪ್ರತಿರೋಧ ಪಡೆಗಳ ಕೊನೆಯ ಭದ್ರಕೋಟೆಯಾದ ಪಂಜ್‌ಶೀರ್ ಪ್ರಾಂತ್ಯದಲ್ಲಿ ಪಾಕಿಸ್ತಾನದ ವಾಯುಪಡೆಯು ಡ್ರೋನ್ ಗಳನ್ನು ಬಳಸಿ ಬಾಂಬ್ ಸ್ಫೋಟ ನಡೆಸಿದೆ ಎಂದು ವರದಿಗಳು ತಿಳಿಸಿದೆ.
ಪಾಕಿಸ್ತಾನದ ಡ್ರೋನ್‌ಗಳು ಪಂಜಶೀರ್ ಮೇಲೆ ಸ್ಮಾರ್ಟ್ ಬಾಂಬ್‌ಗಳನ್ನು ಬಳಸಿ ದಾಳಿ ನಡೆಸಿದೆ ಎಂದು ಸಾಮಂಗನ್ ನ ಮಾಜಿ ಸಂಸದೆ ಜಿಯಾ ಅರಿಯಂಜದ್ ಹೇಳಿಕೆಯನ್ನು ಅಮಜ್ ನ್ಯೂಸ್ ಉಲ್ಲೇಖಿಸಿದೆ.
ಭಾನುವಾರ ರಾತ್ರಿ ಪಂಜಶೀರ್‌ನಲ್ಲಿ ತಾಲಿಬಾನ್ ವಿರುದ್ಧದ ಹೋರಾಟದಲ್ಲಿ ಅಹ್ಮದ್ ಮಸೌದ್ ನ ವಕ್ತಾರ ಫಾಹೀಮ್ ದಷ್ಟಿಯ ಹತ್ಯೆ ಮಾಡಲಾಗಿದೆ. ಅಹ್ಮದ್ ಮಸೌದ್ ಅವರ ಸೋದರಳಿಯ ಮತ್ತು ಮಾಜಿ ಪ್ರಮುಖ ಮುಜಾಹಿದ್ದೀನ್ ಕಮಾಂಡರ್ ಜನರಲ್ ಸಾಹಿಬ್ ಅಬ್ದುಲ್ ವಡೂದ್ ಜೂರ್ ಕೂಡ ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಶ್ವಕ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಇದನ್ನೂ ಓದಿ:ಭಾರಿ ಮಳೆಯಾಗುವ ಸಾಧ್ಯತೆ: ಗೋವಾದಲ್ಲಿ ಆರೆಂಜ್ ಅಲರ್ಟ್ ಘೋಷಣೆ
ಈತನ್ಮಧ್ಯೆ, ಯುದ್ಧದಲ್ಲಿ ಭಾರೀ ನಷ್ಟ ಅನುಭವಿಸಿದ ಬಳಿಕ ಪಂಜಶೀರ್ ಕಣಿವೆಯಲ್ಲಿನ ಪ್ರತಿರೋಧ ಪಡೆಗಳು ಕದನ ವಿರಾಮಕ್ಕೆ ಕರೆ ನೀಡಿವೆ ಎಂದು ವರದಿಗಳು ತಿಳಿಸಿದೆ.
ತಾಲಿಬಾನ್ ಪಡೆ ಪಂಜ್ ಶೀರ್ ನಿಂದ ಹಿಂದೆ ಹೋಗುವಂತೆ ಅಹ್ಮದ್ ಮಸೌದ್ ನ ಪ್ರತಿರೋಧ ಪಡೆ ಕರೆ ನೀಡಿದೆ. ಹೀಗಾಗದಲ್ಲಿ ತಾವು ಯುದ್ದ ಕ್ರಮದಿಂದ ಹಿಂದೆ ಸರಿಯುವುದಾಗಿ ಹೇಳಿದೆ ಎಂದು ವರದಿಯಾಗಿದೆ.