Advertisement

ಪಂಜಾಬ್‌ನಲ್ಲಿನ್ನು ಕ್ಯಾಪ್ಟನ್‌ ಹವಾ; ಅಮರೀಂದರ್‌ ಪ್ರಮಾಣ ಸ್ವೀಕಾರ

08:26 AM Mar 17, 2017 | Team Udayavani |

ಅಮೃತಸರ/ಹೊಸದಿಲ್ಲಿ: ಕಾಂಗ್ರೆಸ್‌ ನಾಯಕ ಕ್ಯಾ| ಅಮರಿಂದರ್‌ ಸಿಂಗ್‌ ಅವರು 2ನೇ ಬಾರಿಗೆ ಪಂಜಾಬ್‌ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ಸ್ವೀಕರಿಸಿದ್ದಾರೆ. ಈ ಮೂಲಕ 10 ವರ್ಷಗಳ ಬಳಿಕ ಅವರು ಕಾಂಗ್ರೆಸ್‌ಸರಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. 

Advertisement

ಚುನಾವಣೆಗೆ ಮುನ್ನ ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ ಸೇರಿದ್ದ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು ಅವರಿಗೆ ಪಂಜಾಬ್‌ ಸರಕಾರದಲ್ಲಿ ಸ್ಥಳೀಯಾಡಳಿತ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸ್ಥಾನ ಸಿಕ್ಕಿದ್ದು, ಅವರನ್ನು ಉಪ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗುತ್ತದೆ ಎಂಬ ಊಹಾಪೋಹಗಳಿಗೆ ತೆರೆಬಿದ್ದಿದೆ. ಪ್ರಮಾಣ ಸ್ವೀಕಾರ ಮಾಡಿದ ಸಿಧು ನೇರವಾಗಿ ಮುಖ್ಯಮಂತ್ರಿ ಅಮರೀಂದರ್‌ ಬಳಿ ಹೋಗಿ ಅವರ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ.

ಮಾಜಿ ಸಿಎಂ ಪ್ರಕಾಶ್‌ಸಿಂಗ್‌ ಬಾದಲ್‌ ಅವರ ಸೋದರಸಂಬಂಧಿ ಮನ್‌ಪ್ರೀತ್‌ ಸಿಂಗ್‌ ಬಾದಲ್‌ ಅವರಿಗೆ ಕ್ಯಾಪ್ಟನ್‌ ಸಂಪುಟದಲ್ಲಿ ವಿತ್ತ ಸಚಿವ ಸ್ಥಾನವನ್ನು ನೀಡಲಾಗಿದೆ. ಹೊಸ ಸಂಪುಟದಲ್ಲಿ ಇಬ್ಬರು ಮಹಿಳಾ ಶಾಸಕಿಯರಿಗೂ ಆದ್ಯತೆ ಕೊಡಲಾಗಿದೆ. ಇನ್ನೊಂದೆಡೆ, ಅಧಿಕಾರ ಸ್ವೀಕರಿಸಿದ ಮರುಕ್ಷಣವೇ ಹಿರಿಯ ಐಎಎಸ್‌ ಅಧಿಕಾರಿ ಕರಣ್‌ ಅವತಾರ್‌ ಸಿಂಗ್‌ಧಿರನ್ನು ಹೊಸ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

ಪ್ರಮಾಣ ಸ್ವೀಕಾರ ಸಮಾರಂಭದಲ್ಲಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ಗಾಂಧಿ, ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌ ಸೇರಿ ಅನೇಕರು ಇದ್ದರು. ಸಿಎಂ ಅಮರೀಂದರ್‌ಗೆ ಪ್ರಧಾನಿ ಮೋದಿ ಟ್ವೀಟ್‌ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. 

ಲೋಕಸಭೆಯಲ್ಲಿ ಕೋಲಾಹಲ: ಎನ್‌ಡಿಎಸರಕಾರದ ಸಾಧನೆಗೆ ಸಂಬಂಧಿಸಿ ಲೋಕಸಭೆಯಲ್ಲಿ ಗುರುವಾರ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ಮಾತಿನ ಚಕಮಕಿ ನಡೆದಿದೆ. ಕೇಂದ್ರದ ಎರಡೂವರೆ ವರ್ಷಗಳ ಸಾಧನೆಯ ಪಟ್ಟಿ ನೀಡಿ ಎಂದು ಪ್ರತಿಪಕ್ಷಗಳು ಕೇಳಿದರೆ, ಹಿಂದಿನ ಕಾಂಗ್ರೆಸ್‌ಸರಕಾರಗಳ ವೈಫ‌ಲ್ಯಗಳ ಪಟ್ಟಿ ನೀಡಿ ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಕಾಂಗ್ರೆಸ್‌ ನಾಯಕ ಮಲ್ಲಿಧಿಕಾರ್ಜುನ ಖರ್ಗೆ, “ಮೋದಿಸರಕಾರ ಆರಂಭಿಸಿರುವ ವಿದ್ಯುತ್‌ ಯೋಜನೆಗಳ ಮಾಹಿತಿ ನೀಡಿ,’ ಎಂದು ವಿದ್ಯುತ್‌ ಸಚಿವ ಪಿಯೂಷ್‌ ಗೋಯಲ್‌ರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗೋಯಲ್‌, “ನಾನು ಅಧಿಕಾರ ಸ್ವೀಕರಿಸಿ ಎರಡೂವರೆ ವರ್ಷಗಳಾಯಿತು ಅಷ್ಟೆ. ದೇಶದಲ್ಲಿ ಹಲವು ಅಪೂರ್ಣ ಯೋಜನೆಗಳಿದ್ದವು ಮತ್ತು 7 ಕೋಟಿ ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕವಿರಲಿಲ್ಲ,’ ಎಂದಷ್ಟೇ ಉತ್ತರಿಸಿದರು. ಇದರಿಂದ ಕೆಂಡಾಮಂಡಲವಾದ ಪ್ರತಿಪಕ್ಷಗಳು, ಸರಿಯಾಗಿ ಅಂಕಿಅಂಶ ನೀಡದ್ದಕ್ಕೆ ತರಾಟೆಗೆ ತೆಗೆದುಕೊಂಡವು. ಮಾತಿಗೆ ಮಾತು ಬೆಳೆದು ಸದನದಲ್ಲಿ ಕೋಲಾಹಲ ಉಂಟಾಯಿತು.

Advertisement

ರಾಜ್ಯಸಭೆಗೆ ಮೋದಿ: ಲೋಕಸಭೆಯ ಬಳಿಕ ಗುರುವಾರ ರಾಜ್ಯಸಭೆ ಕಲಾಪಕ್ಕೆ ಹಾಜರಾದ ಪ್ರಧಾನಿ ಮೋದಿ, ಇಲ್ಲೂ 15 ನಿಮಿಷಗಳ ಕಾಲ ಕಲಾಪದಲ್ಲಿ ಪಾಲ್ಗೊಂಧಿಡರು. ಅವರು ಸದನ ಪ್ರವೇಶಿಸುಧಿತ್ತಿದ್ದಂಧಿತೆಯೇ ವಿಪಕ್ಷಗಳ ಕೆಲವು ಸದಸ್ಯರು, “ನೋಡಿ, ನೋಡಿ ಯಾರು ಬಂದರು?’ ಎಂದು ಬೊಬ್ಬಿಟ್ಟರೆ, ಅದಕ್ಕೆ ಆಡಳಿತಪಕ್ಷದ ಸದಸ್ಯರು, “ಹಿಂದೂಸ್ಥಾನದ ಸಿಂಹ ಬಂತು’ ಎಂದು ಕೂಗಿದರು.

ಕೇಶವ್‌ ಮೌರ್ಯ ಆಸ್ಪತ್ರೆಗೆ ದಾಖಲು
ಉತ್ತರಪ್ರದೇಶ ಸಿಎಂ ಗಾದಿ ಪೈಪೋಟಿಯಲ್ಲಿ ಮುಂಚೂಣಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೇಶವ್‌ ಪ್ರಸಾದ್‌ ಮೌರ್ಯ ಅವರು ಗುರುವಾರ ಅಸ್ವಸ್ಥರಾಗಿದ್ದು, ಅವರನ್ನು ಲಕ್ನೋದ ಆರ್‌ಎಂಎಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವ ಅವರನ್ನು ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕ್ರಿಮಿನಲ್‌ ಹಿನ್ನೆಲೆಯ ಶಾಸಕರ ಸಂಖ್ಯೆ ಇಳಿಕೆ
ಚುನಾವಣೆ ಎದುರಿಸಿದ ಪಂಚರಾಜ್ಯಗಳ ಪೈಕಿ ಉತ್ತರಪ್ರದೇಶ, ಗೋವಾ ಮತ್ತು ಪಂಜಾಬ್‌ನಲ್ಲಿ ಈ ಬಾರಿ ಆಯ್ಕೆಯಾದ ಶಾಸಕರಲ್ಲಿ ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಪ್ರಜಾಸತ್ತಾತ್ಮಕ ಸುಧಾರಣೆ ಸಂಸ್ಥೆ(ಎಡಿಆರ್‌) ನೀಡಿರುವ ಅಂಕಿಅಂಶ ಈ ವಿಚಾರವನ್ನು ತಿಳಿಸಿದೆ. 5 ರಾಜ್ಯಗಳಲ್ಲಿ ಆಯ್ಕೆಯಾದ 690 ಶಾಸಕರ ಪೈಕಿ ಶೇ.27.8ರಷ್ಟು ಶಾಸಕರು(192) ಮಾತ್ರ ಕ್ರಿಮಿನಲ್‌ ಆರೋಪ ಎದುರಿಸುತ್ತಿದ್ದಾರೆ. ಇವರಲ್ಲಿ ಶೇ.20(140)ರಷ್ಟು ಮಂದಿ ವಿರುದ್ಧ ಗಂಭೀರ ಆರೋಪಗಳಿವೆ ಎಂದಿದೆ ಎಡಿಆರ್‌.

ಅಮರೀಂದರ್‌ ಸಿಂಗ್‌ ನೇತೃತ್ವದಸರಕಾರವು ಅವಿರತವಾಗಿ ಶ್ರಮಿಸಿ ಪಂಜಾಬ್‌ ಅನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲಿದೆ. ಗೋವಾ, ಮಣಿಪುರದಲ್ಲಿ ಬಿಜೆಪಿ ಹಣಬಲದಿಂದಸರಕಾರ ರಚಿಸಿದೆ.
ರಾಹುಲ್‌ಗಾಂಧಿ, ಕಾಂಗ್ರೆಸ್‌ ಉಪಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next