ಬೇಸಿಗೆ ಮುಗಿಯುತ್ತಿರುವ ಇಲ್ಲಿನ ಜನರ ಮುಖದಲ್ಲಿ ಗಮನಿಸಿದರೆ ಬ್ರಿಟನ್ ಯಾವ ಮಾಸದ ಹೊಸ್ತಿಲಲ್ಲಿದೆ ಎಂದು ನೀವು ಊಹಿಸಬಹುದು. ಮಕ್ಕಳು ಬೇಸಿಗೆ ರಜೆ ಮುಗಿಸಿ ಶಾಲೆಗೆ ಮರಳಿ¨ªಾರೆ. ಕೆಲವರಿಗೆ ಹೊಸ ತರಗತಿ, ಕೆಲವರಿಗೆ ಹೊಸ ಶಾಲೆ, ಇನ್ನು ಕೆಲವರಿಗೆ ಹೊಸ ಗೆಳೆಯರು. ಹೀಗೆ ಮಕ್ಕಳ ಮಟ್ಟಿಗೆ ತರತರದ ಹೊಸತುಗಳು ಬಿಟ್ಟರೆ ಉಳಿದೆಲ್ಲವೂ ಅದೇ ಅದೇ ಅದೇ. ತಮ್ಮ ಮಕ್ಕಳ ಐದಾರು ವಾರಗಳ ಬೇಸಿಗೆ ರಜೆಗೆ ಹೊಂದಿಸಿ, ಎರಡು-ಮೂರು ವಾರ ರಜೆ ಹಾಕಿ ತಿರುಗಾಟ ಮಾಡಿಬಂದವರೆಲ್ಲ ಆಯಾಸದಲ್ಲಿ ಕಚೇರಿಗೆ ಬರುತ್ತಿ¨ªಾರೆ. ಇದು ಸದ್ಯಕ್ಕೆ ಪರಿಹಾರ ಆಗುವ ಆಯಾಸವೂ ಅಲ್ಲ. ಇನ್ನೊಂದು ಆರು ತಿಂಗಳು ಸ್ವಲ್ಪ ಚಳಿ, ಹದ ಚಳಿ, ಜೋರು ಚಳಿ ಎಂದೆಲ್ಲ ಗೊಣಗುತ್ತ ಕಳೆಯಬೇಕಲ್ಲ, ಎನ್ನುವುದು ಸೆಪ್ಟಂಬರ ತಿಂಗಳಲ್ಲಿ ಶುರುವಾಗಿರುವ ದೊಡ್ಡ ವ್ಯಥೆಗಳÇÉೊಂದು. ದಿನ ದಿನ ಬಿಸಿಲು ತನ್ನ ತೀಕ್ಷ್ಣತೆ ಕಳೆದುಕೊಳ್ಳುವುದು, ಮೋಡ ಸರಿದಾಗ ಶಾಖ ನೀಡದ ಸೂರ್ಯ ಟ್ಯೂಬ್‌ಲೈಟ್‌ನ ತರಹವೂ, ಇನ್ನು ಮೋಡ ಮುಚ್ಚಿದಾಗ ಬೆಳಕೂ ಇಲ್ಲದ ಚಳಿಯೇ ಹೆಚ್ಚಾದ ಸಂಪೂರ್ಣ “ಮೋಸ’ವೇ ತುಂಬಿದ ಹವಾಮಾನವಾಗಿ ಅನುಭವಕ್ಕೆ ಬರುವುದು ಇನ್ನು ಶುರು.
ಬಿಸಿಲು ಇರುವ ದಿನಗಳÇÉೇ ಹೆಚ್ಚು ರಜೆಗಳನ್ನು ಹಾಕಿ ಮಜಾಮಾಡಬೇಕೆನ್ನುವವರ ವರ್ಷದ ರಜೆಗಳೂ ಈಗ ಬಹುತೇಕ ಖಾಲಿ ಆಗಿವೆ. ಜೋರು ಬಿಸಿಲು ಬಂದ ಬೇಸಿಗೆಯ ದಿನದಲ್ಲಿ ಮನೆಯ ಹಿಂದೋಟದಲ್ಲಿ ಇದ್ದಿಲಿಗೆ ಬೆಂಕಿ ಕೊಟ್ಟು ಅದರ ಮೇಲೆ ಮಾಂಸವನ್ನು ಸುಡುವ “ಬಾರ್ಬೆಕ್ಯೂ’ ಉಪಕರಣ ಈ ವರ್ಷದ ಅಡುಗೆ ಕೆಲಸ ಮುಗಿಯಿತೆಂದು ನಿಟ್ಟುಸಿರು ಬಿಟ್ಟಿದೆ. ಕಳೆದ ಮೂರ್ನಾಲ್ಕು ತಿಂಗಳುಗಳಲ್ಲಿ ತನ್ನನ್ನು ದಿನವೂ ಗಾಳಿವಿಹಾರಕ್ಕೆ ಕರೆದೊಯ್ಯುತ್ತಿದ್ದ, ಬಯಲಲ್ಲಿ ಚೆಂಡು ಎಸೆದು ಹೆಕ್ಕಿಸಿ ಓಡಾಡಿಸುತ್ತಿದ್ದ ಯಜಮಾನ ಇನ್ನು ಮನೆಯೊಳಗೇ ಕಟ್ಟಿ ಹಾಕುತ್ತಾನೋ ಎನ್ನುವ ಕಳವಳ ಇಲ್ಲಿನ ನಾಯಿಗಳದು; ಸ್ವತ್ಛಂದವಾಗಿ ತನ್ನ ಮತ್ತು ನೆರೆಮನೆಯವರ ತೋಟದಲ್ಲಿ ಆಟ ಬೇಟೆ ಆಡಿಕೊಂಡು ಮೀಸೆ ಮೇಲೆ ಮಾಡಿ ನಡೆದಾಡಿಕೊಂಡಿದ್ದ ಬೆಕ್ಕುಗಳು ಮನೆ ಒಳಗೆ ಬೆಚ್ಚಗೆ ಕುಳಿತು ಕಿಟಕಿಯಿಂದಲೇ ರಸ್ತೆ ನೋಡಬೇಕೇನೋ ಎನ್ನುವ ಯೋಚನೆಯಲ್ಲಿವೆ. ಇಷ್ಟು ದಿನ ಸಮ್ಮರ್ ಸೇಲ್ ಎನ್ನುವ ಫಲಕದಡಿ ವ್ಯಾಪಾರ ನಡೆಸುತ್ತಿದ್ದ ಬಟ್ಟೆಯಂಗಡಿಗಳು “ಶರತ್ಕಾಲಕ್ಕೆ ಹೊಸ ಬಟ್ಟೆಗಳು’ ಎಂಬ ಫಲಕ ಬದಲಿಸಿವೆ. ಬೇಸಿಗೆಯ ದಿನಗಳಲ್ಲಿ ಬೆಳಿಗ್ಗೆ ನಾಲ್ಕು ಗಂಟೆಗೆ ಸೂರ್ಯೋದಯವಾಗಿ ರಾತ್ರಿ ಹತ್ತು ಗಂಟೆಗೆ ಸೂರ್ಯಾಸ್ತ ಆಗುತ್ತಿದ್ದ ಊರು ಇನ್ನು ಮುಂದೆ ಡಿಸೆಂಬರ್ ಕೊನೆಯ ತನಕವೂ ದಿನದ ಗಾತ್ರ ಸ್ವಲ್ಪ ಸ್ವಲ್ಪವೇ ಕುಗ್ಗುತ್ತ ಹೋಗಿ ರಜೆ ಖಾಲಿ ಮಾಡಿಕೊಂಡವರ ಉತ್ಸಾಹವನ್ನು ಇನ್ನಷ್ಟು ತಗ್ಗಿಸುತ್ತಿದೆ. ಕೆಲವೊಮ್ಮೆ ಅತಿ ಪೂರ್ವಯೋಜಿತ ಎನಿಸುವ ಮತ್ತೆ ಕೆಲವೊಮ್ಮೆ ಅತಿ ಏಕತಾನತೆಯ ಬದುಕನ್ನು ನಡೆಸುತ್ತಾರೆ ಎಂದು ಅನಿಸುವ ಆಂಗ್ಲರು, “ಬೇಸಿಗೆ ಇರಲಿ ಚಳಿ ಬರಲಿ ಶುಕ್ರವಾರ ಸಂಜೆ ಮಾತ್ರ ಅನವರತವಾಗಿರಲಿ’ ಎಂದು ಹಾರೈಸಿ¨ªಾರೆ. ಈಗಷ್ಟೇ ತಮ್ಮನ್ನು ಕಾಡುತ್ತಿರುವ ಖಛಿಟಠಿಛಿಞಚಿಛಿr ಆluಛಿs ಅನ್ನು ಗೆಲ್ಲಬೇಕೆಂದರೆ ಸ್ನೇಹಿತರ ಜೊತೆಗೆ ಶುಕ್ರವಾರ ಸಂಜೆಯ ಬಿಯರು ಕೂಟಕ್ಕೆ ಮಾತ್ರ ಸಾಧ್ಯ ಎನ್ನುವ ವಿಶ್ವಾಸದಲ್ಲಿ¨ªಾರೆ. ಬೇಸಿಗೆಯ ದಿನವಾದರೆ ಉದ್ದ ಗಾಜಿನ ಲೋಟದ ತುಂಬ ಚಿನ್ನದ ಬಣ್ಣದ ಬೀಯರನ್ನು ತುಂಬಿಸಿಕೊಂಡು ಪಬ್‌ಗಳ ಹೊರಗೆ ನಿಂತು ಕೇಕೆ ಹಾಕುವ ಇವರು ಚಳಿಗಾಲದಲ್ಲಿ ಅಂತಹುದೇ ಗ್ಲಾಸಿನಲ್ಲಿ ಬೇಸಿಗೆಯಷ್ಟೇ ನೊರೆ ಸೂಸುವ ಬಿಯರು ಹಿಡಿದು ಒಳಗೆ ಮಂದ ಬೆಳಕಿನಡಿಯಲ್ಲಿ ಕುಳಿತು ಉನ್ಮಾದ ಪಡೆಯುತ್ತಾರೆ. ಮತ್ತೆ ಸೋಮವಾರ ಕಚೇರಿಗೆ ಬಂದವರು ಕಿಟಕಿಯ ಹೊರಗಿನ ಕಳೆಗೆಟ್ಟ ವಾತಾವರಣವನ್ನು ಆಕ್ಷೇಪಿಸುತ್ತಾರೆ.
ಮರವಂತೆಯ ಸಮುದ್ರದ ಹತ್ತಿರ ಮನೆ, ಅಲ್ಲಿ ವರ್ಷದ ಒಂಬತ್ತು ತಿಂಗಳುಗಳು ಮಳೆಯೇ ಇಲ್ಲದ ಪ್ರಖರ ಬಿಸಿಲು ಇವೆಲ್ಲವನ್ನೂ ಬಿಟ್ಟು ಮಂದ ಹವೆಯ ಬ್ರಿಟನ್ನಿಗೆ ಬಂದು ದಡ್ಡನಾದೆಯÇÉೋ ಎಂದು ನನ್ನನ್ನು ನೋಡಿ ವ್ಯಂಗ್ಯ ಮಾಡುತ್ತಾರೆ.
ಇಡೀ ವರ್ಷದಲ್ಲಿ ಮೈ ಚುರುಗುಟ್ಟುವಷ್ಟು ಬಿಸಿಲು ಬಂದ ದಿನಗಳನ್ನು ಎಷ್ಟು ಕಡಿಮೆ ಗಣಿತ ಕಲಿತವರೂ ಲೆಕ್ಕ ಇಡಬಹುದಾದ ಖ್ಯಾತಿಯ ಬ್ರಿಟನ್ ಅಲ್ಲಿ ಬಿಸಿಲು ಜನರ ದೇಹದ ಮೇಲೂ ಮನಸ್ಸಿನ ಮೇಲೂ ಪ್ರಭಾವ ಬೀರುತ್ತದೆ ಎಂದು ವಿಜ್ಞಾನ ಮತ್ತು ವೈದ್ಯಶಾಸ್ತ್ರ ಎರಡೂ ಹೇಳುತ್ತವೆ. ಕುಗ್ಗಿದ ಮನೋಸ್ಥಿತಿ, ಸಣ್ಣ ಕಾರಣಗಳಿಗೂ, ಕಾರಣ ಇಲ್ಲದೆಯೂ ಆತಂಕಪಡುವುದು, ಯಾವ ಕೆಲಸದಲ್ಲೂ ಉತ್ಸಾಹವೇ ಇಲ್ಲದಿರುವುದು ಇವು ಸೆಪ್ಟrಂಬರ ತಿಂಗಳಲ್ಲಿ ಇಲ್ಲಿನ ವೈದ್ಯರು ಚಿಕಿತ್ಸೆ ನೀಡಬೇಕಾದ ಸಾಮಾನ್ಯ ಸಮಸ್ಯೆಗಳು. ಸೆಪ್ಟಂಬರ ತಿಂಗಳಿಂದ ಮೊದಲ್ಗೊಂಡು ಬರುವ ಏಪ್ರಿಲ್‌ವರೆಗೂ ಉದ್ವೇಗ, ಖನ್ನತೆಗಳಿಂದ ಬಳಲಿ ವೈದ್ಯರನ್ನು ಕಾಣಬಯಸುವವರು ಹೆಚ್ಚು ಎಂದು ಇಲ್ಲಿನ ಸಮೀಕ್ಷೆಯೊಂದು ಹೇಳುತ್ತದೆ. ಈಗಷ್ಟೇ ಮುಗಿದ ರಜೆ, ಮಕ್ಕಳ ಶಾಲೆ ಆರಂಭವಾದ ಒತ್ತಡ, ಕಡಿಮೆ ಆಗುತ್ತಿರುವ ಬಿಸಿಲು ಹಾಗೂ ಬೆಳಕು ಇವೆಲ್ಲ ಸೇರಿ ಕೆಲವರಿಗೆ ಅಸ್ವಸ್ಥತೆ ಹುಟ್ಟುತ್ತದೆ. ದಿನವೂ ಒಂದು ಬಗೆಯ ಕೆಲಸ ಮಾಡುವವರಿಗೆ ನಾಳೆಯಿಂದ ಎರಡು ತರದ ಕೆಲಸ ಮಾಡು ಎಂದರೆ ಒತ್ತಡದಿಂದ ಬಳುವವರು, ಸಣ್ಣ ವಿಷಯಕ್ಕೂ ಆತಂಕಕ್ಕೊಳಗಾಗಿ ಆಗಾಗ ವೈದ್ಯರನ್ನು ಭೇಟಿಮಾಡುವ ಸಹೋದ್ಯೋಗಿಗಳು ಎಲ್ಲ ಕಚೇರಿಗಳಲ್ಲೂ ಕಾಣಸಿಗುತ್ತಾರೆ.
ದಿನವೂ ಅರ್ಧಗಂಟೆಯಾದರೂ ವ್ಯಾಯಾಮ ಮಾಡಿ, ಸ್ನೇಹಿತರೊಡನೆ ಬೆರೆಯಿರಿ ಎಂದು ಇವರಿಗೆ ಮನಶಾಸ್ತ್ರಜ್ಞರು ಸಲಹೆನೀಡುತ್ತಾರೆ. ಮನೋಸ್ಥಿತಿಯನ್ನು ನಿಯಂತ್ರಿಸುವ ಅನಾರೋಗ್ಯಗಳ ಜೊತೆಗೆ ಸೂರ್ಯರಶ್ಮಿಯ ಜೀವಸತ್ವ ಎಂದೇ ಹೆಸರಾದ ವಿಟಮಿನ್ “ಡಿ’ಯ ಕೊರತೆಯೂ ಸೇರಿಕೊಂಡು ಗಂಟುನೋವು ಮಂಡಿನೋವುಗಳೂ ಕಾಡುತ್ತವೆ. ಯಾವುದು ವೃದ್ಧಾಪ್ಯದ ಬೇನೆ, ಯಾವುದು ಉಳುಕಿದ್ದು, ಮತ್ಯಾವುದು ಜೀವಸತ್ವದ ಕೊರತೆಯದ್ದು ಎಂದು ತಿಳಿಯಲಾಗದೆ ಎಲ್ಲವೂ ಸೆಪ್ಟಂಬರ್‌ನಿಂದ ಮೊದಲ್ಗೊಳ್ಳುವ ವಾತಾವರಣದ ಬದಲಾವಣೆಯ ಮೇಲೆ ಆರೋಪಿಸಲ್ಪಡುತ್ತವೆ. ಚಿತ್ತ ಕ್ಷೊàಭೆಯೂ ದೇಹ ದುರ್ಬಲತೆಯೂ ಸೇರಿಕೊಂಡು ಆಗುವ ಅಧ್ವಾನಕ್ಕೆ “ದೇಶ ಮತ್ತು ಕಾಲ’ಗಳೇ ಕಾರಣ ಎಂದು ಜುಗುಪ್ಸೆಯಿಂದ ಕೆಲವು ಆಂಗ್ಲರು ಹೇಳುವಾಗ ವಲಸೆ ಬಂದ ಬಹಳ ಭಾರತೀಯರೂ ದನಿಗೂಡಿಸುತ್ತಾರೆ. ಪರ್ಯಾಯ ಕೆಲಸ ಸಿಕ್ಕಿದರೆ ಇಲ್ಲಿಗಿಂತ ಸ್ವಲ್ಪ ಹೆಚ್ಚು ಬಿಸಿಲು ಬೀಳುವ ಫ್ರಾನ್ಸ್‌ಗೊà ಅಥವಾ ಬೇಡ ಎನ್ನುವಷ್ಟು ಬಿಸಿಲು ಸಿಗುವ ಆಸ್ಟ್ರೇಲಿಯಾಕ್ಕೋ, ಸ್ಪೆಯಿನ್‌ಗೊà ವಲಸೆ ಹೋಗುವ ಆಂಗ್ಲರೂ ಇ¨ªಾರೆ. ಇನ್ನು ಕೆಲವರು ಈ ವರ್ಷದ ಚಳಿಗಾಲವೇ ಈ ದೇಶದಲ್ಲಿ ಕೊನೆಯದು, ಮುಂದಿನ ಚಳಿಗಾಲಕ್ಕೆ ಇಲ್ಲಿರಲಾರೆ ಎನ್ನುವ ಪ್ರತಿಜ್ಞೆ ಮಾಡುತ್ತಾರೆ ಅಥವಾ ಪ್ರತಿವರ್ಷದ ಶರತ್ಕಾಲದಲ್ಲೂ ಪ್ರತಿಜ್ಞೆಯನ್ನು ಪುನರಾವರ್ತಿಸುತ್ತಾರೆ !
ಬೇಸಿಗೆಯಿಂದ ಚಳಿಗಾಲಕ್ಕೆ ಮಾಸಾಂತರದ ಹೊತ್ತಿನ ಗೊಣಗಾಟಗಳು ಕೇಳಿಸುವುದು ಪ್ರತಿವರ್ಷವೂ ಸೆಪ್ಟಂಬರ್‌ನಲ್ಲಿಯೇ ಎಂದು ಆ ತಿಂಗಳಿಗೂ ತಿಳಿದಿದೆ. ಪ್ರತಿವರ್ಷವೂ ಬಿಸಿಲಿನ ಬೆಳಕಿನ ಬೇಸಿಗೆ ಹಾಗೂ ತಣ್ಣಗಿನ ಕೊರೆಯುವ ಚಳಿಗಾಲಗಳ ನಡುವಿನ ಕಿರುಸೇತುವೆಯಾಗಿ ಕಾಣುವ ಸೆಪ್ಟಂಬರ್ ತಿಂಗಳ ಹೊಣೆಗಾರಿಕೆ ಉಳಿದ ಹನ್ನೊಂದು ತಿಂಗಳುಗಳಿಗಿಲ್ಲ ಎನ್ನುವುದೂ ಆ ತಿಂಗಳಿಗೂ ಗೊತ್ತಿರುವುದೇ. ಗ್ರೀಷ್ಮ ಋತುವಿನಿಂದ ಶರದೃತುವಿಗೆ ಪರಿವರ್ತನೆ ಆಗುವ ಹೊತ್ತಿನ ಬಲು ದೊಡ್ಡ ಹೊಣೆಗಾರಿಕೆಯ ಭಾರದಲ್ಲಿ ತನ್ನ ಸುತ್ತಲಿನ ದೂರು, ಆರೋಪ, ಶಪಥಗಳನ್ನು ಮರೆಯುತ್ತ ಸೆಪ್ಟಂಬರ್ ತಿಂಗಳು ಮೆಲ್ಲಗೆ ತೆವಳಿಕೊಂಡು ಸಾಗುತ್ತಿದೆ.
– ಯೋಗೀಂದ್ರ ಮರವಂತೆ ಬ್ರಿಸ್ಟಲ್, ಇಂಗ್ಲೆಂಡ್