Advertisement
ಪಾಣೆಮಂಗಳೂರಿನ ಬಂಗ್ಲೆಗುಡ್ಡೆಯಲ್ಲಿ ರುವ ಈ ಕಟ್ಟಡದಲ್ಲಿ ಅಡಿಪಾಯದಿಂದ ಮೇಲ್ಛಾವಣಿವರೆಗೂ ಎಲ್ಲವೂ ಶಿಥಿಲಾವಸ್ಥೆ ಯಲ್ಲಿದೆ. ಇಂತಹ ಅಪಾಯಕಾರಿ ಕಟ್ಟಡದಲ್ಲಿ ಗ್ರಾಮ ಆಡಳಿತ ಕಚೇರಿ ಕಾರ್ಯಾಚರಿಸುವುದು ಸರಿಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಕಟ್ಟಡದ ಬಾಗಿಲು, ಕಿಟಕಿಗಳು ಮುರುಕಲು ಸ್ಥಿತಿಯಲ್ಲಿದ್ದು, ಬಾಗಿ ಲನ್ನು ಜೋರಾಗಿ ದೂಡಿದರೆ ಮುರಿದು ಬೀಳುವ ಸ್ಥಿತಿಯಲ್ಲಿದೆ.
ಕಟ್ಟಡದ ಮೇಲ್ಛಾವಣಿ ಶಿಥಿಲಾವಸ್ಥೆಯ ಲ್ಲಿರುವುದರಿಂದ ಕಳೆದ ಮಳೆಗಾಲದಲ್ಲಿ ಗ್ರಾಮ ಆಡಳಿತ ಕಚೇರಿಗೆ ಬಾಡಿಗೆ ಕಟ್ಟಡ ಹುಡುಕಲಾಗಿದ್ದು, ಆದರೆ ಅವರಿಗೆ ಸೂಕ್ತ ಕಚೇರಿ ಸಿಕ್ಕಿರಲಿಲ್ಲ. ಈಗಲೂ ಕಚೇರಿ ಅದೇ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಪಾಣೆಮಂಗಳೂರು ಗ್ರಾಮ ಆಡಳಿತ ಕಚೇರಿಯನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರ ಮಾಡುವಂತೆ ಸಾರ್ವಜನಿಕರಿಂದ ಒತ್ತಾಯ ಕೇಳಿ ಬರುತ್ತಿದೆ.
Related Articles
ಈ ಕಟ್ಟಡವು ಬಂಟ್ವಾಳ ಪುರಸಭಾ ಅಧೀನದಲ್ಲಿದ್ದು, ಹಿಂದೊಮ್ಮೆ ಕಟ್ಟಡವನ್ನು ದುರಸ್ತಿ ಪಡಿಸಬೇಕು ಎಂಬ ಪ್ರಸ್ತಾವ ಬಂದಾಗ ಹಳೆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಕಟ್ಟಡ ಈಗಲೂ ಹಾಗೇ ಇದ್ದು, ದುರಸ್ತಿಯೂ ಇಲ್ಲ, ತೆರವು ಕೂಡ ಇಲ್ಲ ಎಂಬ ಸ್ಥಿತಿಯಲ್ಲಿದೆ.
Advertisement